ಪಾಕಿಸ್ತಾನದಿಂದ ಭಾರತ ವಿರುದ್ದ ಉಲ್ಟಾ ಧುರಂಧರ್ ತಂತ್ರ! ಹಳೆಯ ಉಗ್ರರಿಗೆ ಮರು ಜೀವ?

Kannadaprabha News   | Kannada Prabha
Published : Jun 01, 2026, 07:58 AM IST
India Pakistan border

ಸಾರಾಂಶ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ತನಿಖೆಯಿಂದ ತಪ್ಪಿಸಿಕೊಳ್ಳಲು ಕಾಶ್ಮೀರದಲ್ಲಿರುವ ತನ್ನ ಉಗ್ರ ಸಹಾಯಕರಿಗೆ (ಓವರ್‌ ಗ್ರೌಂಡ್‌ ವರ್ಕರ್ಸ್‌) ರಾಷ್ಟ್ರೀಯ ಪಕ್ಷಗಳಿಗೆ ಸೇರುವಂತೆ ಸೂಚಿಸಿದೆ. 90ರ ದಶಕದ ನಿಷ್ಕ್ರಿಯ ಉಗ್ರ ಸಂಘಟನೆಗಳಿಗೆ ಮರುಜೀವ ನೀಡಿ, ಭಯೋತ್ಪಾದನೆಗೆ 'ಸ್ಥಳೀಯ' ಬಣ್ಣ ಬಳಿಯುವ ಕುತಂತ್ರವನ್ನೂ ಪಾಕಿಸ್ತಾನ ಮಾಡುತ್ತಿದೆ.

ಶ್ರೀನಗರ: ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿದ ತನಿಖೆಯಿಂದ ತಪ್ಪಿಸಿಕೊಳ್ಳಲು ಕಾಶ್ಮೀರದಲ್ಲಿರುವ ತನ್ನ ಓವರ್‌ ಗ್ರೌಂಡ್‌ ವರ್ಕರ್ಸ್‌ಗಳಿಗೆ (ಉಗ್ರರಿಗೆ ನೆರವು ನೀಡುವವರು) ಮುಖ್ಯವಾಹಿನಿಯ ರಾಷ್ಟ್ರೀಯ ಪಕ್ಷಗಳಿಗೆ ಸೇರ್ಪಡೆಯಾಗುವಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸ್ಪಷ್ಟ ಸೂಚನೆ ನೀಡಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಪಾಕಿಸ್ತಾನವು ‘ಉಲ್ಟಾ ಧುರಂಧರ್’ ತಂತ್ರ ಅನುಸರಿಸುತ್ತಿರುವುದು ಬಯಲಾಗಿದೆ.

90ರ ದಶಕದಲ್ಲಿ ಸಕ್ರಿಯರಾಗಿದ್ದ ಉಗ್ರರಿಗೆ ಮರುಜೀವ

ಪಾಕಿಸ್ತಾನವು 1990ರಲ್ಲಿ ಸ್ಥಳೀಯವಾಗಿ ಸಕ್ರಿಯವಾಗಿದ್ದ ಆದರೆ ಈಗ ನಿಷ್ಕ್ರಿಯವಾಗಿರುವ ಸ್ಥಳೀಯ ಉಗ್ರ ಸಂಘಟನೆಗಳಿಗೆ ಮರುಜೀವನ ನೀಡಲು ಶತಾಯಗತಾಯ ಯತ್ನಿಸುತ್ತಿದೆ. ಈ ಮೂಲಕ ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಕ್ಕೆ ‘ಸ್ಥಳೀಯರ ಕೃತ್ಯ’ದ ಬಣ್ಣ ಬಳಿಯುವ ಹಾಗೂ ತನ್ನ ನೇರ ಪಾತ್ರ ಮರೆಮಾಚುವ ಯೋಜನೆ ಹಾಕಿಕೊಂಡಿದೆ. ಇತ್ತೀಚೆಗೆ ಬಂಧಿತ ಓವರ್‌ ಗ್ರೌಂಡ್‌ ವರ್ಕರ್‌ವೊಬ್ಬನ ವಿಚಾರಣೆ ವೇಳೆ ಪಾಕ್‌ನ ಈ ಮುಖ ಬಹಿರಂಗವಾಗಿದೆ.

ಆತನನ್ನು ವಶಕ್ಕೆ ಪಡೆಯಲೆತ್ನಿಸಿದಾಗ ಭದ್ರತಾ ಸಿಬ್ಬಂದಿಗೆ ಆತ ರಾಷ್ಟ್ರೀಯ ಪಕ್ಷದ ಸದಸ್ಯತ್ವದ ಕಾರ್ಡ್‌ ತೋರಿಸಿದ್ದಾನೆ. ಈ ಮೂಲಕ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ.

ಹತಾಶೆಯಿಂದ ಈ ಕ್ರಮ:

ಉಗ್ರ ಸಂಘಟನೆಗಳಿಗೆ ಲಾಜಿಸ್ಟಿಕ್‌ ಬೆಂಬಲ ನೀಡುವವರು, ನೇಮಕಾತಿ ಮತ್ತು ಹಣಕಾಸು ನೆರವು ಒದಗಿಸುವವರನ್ನು ರಾಷ್ಟ್ರೀಯ ಪಕ್ಷಗಳಿಗೆ ಸೇರ್ಪಡೆ ಮಾಡುವ ಮೂಲಕ ಭದ್ರತಾ ಸಿಬ್ಬಂದಿ ದಾಳಿಯಿಂದ ಅವರಿಗೆ ರಕ್ಷಣೆ ಒದಗಿಸುವುದು ಪಾಕ್‌ ಆಲೋಚನೆ.

ಈಗಾಗಲೇ ಕೆಲ ಓವರ್‌ ಗ್ರೌಂಡ್‌ ವರ್ಕರ್ಸ್‌ಗಳು ರಾಷ್ಟ್ರೀಯ ಪಕ್ಷಗಳಿಗೆ ಸೇರ್ಪಡೆಯೂ ಆಗಿದ್ದು, ಉಗ್ರರ ಪರ ಕೆಲಸವನ್ನೂ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಹೊಸ ಉಗ್ರ ಸಂಘಟನೆಗಳಿಗೆ ಸ್ಥಳೀಯರ ಬೆಂಬಲ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಹತಾಶೆಗೊಂಡಿರುವ ಐಎಸ್‌ಐ, ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದೆ.

1990-2000ನೇ ಇಸ್ವಿ ನಡುವೆ ಚಟುವಟಿಕೆಯಿಂದಿದ್ದ ಅಲ್ ಉಮರ್‌ ಮುಜಾಹಿದೀನ್‌, ಅಲ್‌ ಬದರ್‌, ತೆಹ್ರೀಕ್‌ ಉಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗಳ ಹೆಸರನ್ನು ಮತ್ತೆ ಮುನ್ನೆಲೆಗೆ ತರಲು ಐಎಸ್‌ಐ ಯತ್ನಿಸುತ್ತಿದೆ. ಹೀಗಾಗಿ ಹಳೆಯ ಓವರ್‌ ಗ್ರೌಂಡ್‌ ವರ್ಕರ್ಸ್‌ಗಳ ಚಟುವಟಿಕೆ ಇದೀಗ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಚುರುಕುಗೊಂಡಿದೆ. ಭದ್ರತಾ ಸಿಬ್ಬಂದಿ ಇದರ ಮೇಲೆ ಕಣ್ಣಿಟ್ಟಿದ್ದಾರೆ.

ಉಗ್ರರಿಗೆ ಬೆಂಬಲ ನೀಡುತ್ತಿರುವ ಕಾರಣಕ್ಕಾಗಿ ಈಗಾಗಲೇ ಪಾಕಿಸ್ತಾನವು ಎಫ್‌ಎಟಿಎಫ್‌ ಲಿಸ್ಟ್‌ನಲ್ಲಿದೆ. ಹೀಗಾಗಿ ಪರೋಕ್ಷ ಬೆಂಬಲ ನೀಡುವ ಉದ್ದೇಶದಿಂದ ಈ ತಂತ್ರಗಾರಿಕೆಗೆ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ಮಾತ್ರವಲ್ಲ ನಮ್ಮಿಂದಲೂ ಜಾಗ ಅತಿಕ್ರಮಣ: ನೇಪಾಳ ಪ್ರಧಾನಿ ಬಾಲೇನ್ ಶಾ ಒಪ್ಪಿಗೆ
Yash: ಬಸ್ ಡ್ರೈವರ್ ಮಗ.. 300 ರೂ ಜೊತೆ ಬಂದು, ಇಂದು ಜಗತ್ತಿನ ಟಾಪ್ ಸ್ಟಾರ್; ಸ್ಟೆಪ್ ಬೈ ಸ್ಟೆಪ್ ಕಹಾನಿಯಲ್ಲಿ ಟ್ವಿಸ್ಟೋ ಟ್ವಿಸ್ಟು!