Asianet Suvarna News Asianet Suvarna News

ಬೀಚ್‌ನಲ್ಲಿ ಬಿಕಿನಿ ತೊಟ್ಟು ಓಡಾಡ್ತಿದ್ದವಳು ಜೈಲು ಸೇರಿದಳು. ಯಾಕಂತೆ!

ಬಿಕಿನಿ ತೊಟ್ಟು ಬೀಚ್ ನಲ್ಲಿ ಓಡಾಡುತ್ತಿದ್ದವಳು ಜೈಲು ಸೇರಿದಳು/ ಆಕೆಯ ಬಂಧನಕ್ಕೆ ಕಾರಣವಾದ ಬಿಕಿನಿಯಾದರೂ ಎಂಥದ್ದು?/ ತೈವಾನ್ ನ ಪ್ರವಾಸಿ ಫಿಲಿಪೈನ್ಸ್ ನಲ್ಲಿ ಸೆರೆ

Woman Arrested In Philippines For Wearing Tiny String Bikini
Author
Bengaluru, First Published Oct 15, 2019, 10:09 PM IST

ಬೀಚ್ ನಲ್ಲಿ ಬಿಕಿನಿ ತೊಟ್ಟು ಎಂಜಾಯ್ ಮಾಡ್ತಿದ್ದ ತೈವಾನ್ ಪ್ರವಾಸಿಯೊಬ್ಬರನ್ನು ಬಂಧಿಸಲಾಗಿದೆ.  ಫಿಲಿಪೈನ್ಸ್ ನಲ್ಲಿ ಈ ಘಟನೆ ನಡೆದಿದೆ. ಬಾಯ್ ಫ್ರೆಂಡ್ ಜತೆ ಎಂಜಾಯ್ ಮಾಡುತ್ತಿದ್ದವಳು ಜೈಲು ಸೇರಿದ್ದಾಳೆ.

ಲಿನ್ ಟುಂಜ್ ಟಿಂಗ್ (26)  ಮತ್ತು ಆಕೆಯ ಬಾಯ್ ಫ್ರೆಂಡ್  ಪುಕಾ ಬೀಚ್ ನಲ್ಲಿ ರೌಂಡ್ಸ್ ಹಾಕುತ್ತಿದ್ದರು.  ಈ ವೇಳೆ ಲಿನ್ ಟುಂಜ್ ಟಿಂಗ್ ಬಿಳಿ ಬಣ್ಣದ ಬಿಕಿನಿ ತೊಟ್ಟು ಸಮುದ್ರಕ್ಕೆ ತೀರಕ್ಕೆ ಇಳಿದಿದ್ದಾರೆ.

ಟಿಂಗ್ ದಾರದ  ಬಿಕಿನಿ ಧರಿಸಿದಾಗಲೇ ಹೊಟೆಲ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದರು. ಆದರೆ ಯುವತಿ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ದಾರದ  ಬಿಕಿನಿ ಧರಿಸಿ ನಡೆದಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿಗೆ ಇಂಥ ಬಿಕಿನಿ ಬೇಕಿತ್ತಾ!

ಕೆಲವೇ ಕ್ಷಣಗಳಲ್ಲಿ ಆಕೆಯ ಬಿಕಜಿನಿ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಬಾರಕಿ ಇಂಟರ್ ಏಜೆನ್ಸಿ ರಿಹ್ಯಾಬಿಟೇಶನ್ ಮ್ಯಾನೇಜ್ ಮೆಂಟ್ ಗ್ರೂಪ್ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ನಾವು ಫಿಲಿಫೆನ್ಸ್ ಮತ್ತು ಏಷಿಯಾದ ಎಲ್ಲರೂ ಒಂದು ಸಂಸ್ಕೃತಿ ಪರಂಪರೆ ಕಾಪಾಡಿಕೊಂಡು ಬಂದಿದ್ದೇವೆ. ಅದನ್ನು ಗೌರವಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಆಕೆಯನ್ನು ಬಂಧಿಸಿರುವ ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios