ಪಾಪಿ ಪಾಕಿಸ್ತಾನದ ಅಸಲಿಯತ್ತು, ಕಾರ್ಗಿಲ್ ಯುದ್ಧದಲ್ಲಿ ನೇರ ಕೈವಾಡ ಒಪ್ಪಿಕೊಂಡ ಪಾಕ್ ಸೇನೆ!

By Chethan KumarFirst Published Sep 7, 2024, 6:13 PM IST
Highlights

ಪಾಕಿಸ್ತಾನ ಇದೇ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ನೇರ ಕೈವಾಡವಿತ್ತು ಅನ್ನೋದನ್ನು ಒಪ್ಪಿಕೊಂಡಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಈ ಕುರಿತು ವೇದಿಕೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಲಾಹೋರ್(ಸೆ.07) ಕಾರ್ಗಿಲ್ ಯುದ್ಧದ ಘನಘೋರ ಚಿತ್ರಣ ಕೇಳಿದರೆ ಮೈ ಜುಮ್ಮೆನ್ನುತ್ತೆ. ಪಾಕಿಸ್ತಾನದ ಕುತಂತ್ರಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡಿತ್ತು. ಪಾಕಿಸ್ತಾನ ಆಕ್ರಮಿಸಿಕೊಂಡ ಕಾರ್ಗಿಲ್ ಮರಳಿ ಕೈವಶ ಮಾಡಿದ ಭಾರತೀಯ ಸೇನೆ ವಿಜಯೋತ್ಸವ ಆಚರಿಸಿತ್ತು. ಆದರೆ ಈ ಯುದ್ಧದಲ್ಲಿ ಪಾಕಿಸ್ತಾನ ತನ್ನ ಕೈವಾಡವಿಲ್ಲ, ಇದು ಮುಜಾಹಿದ್ದೀನ್, ಸ್ವತಂತ್ರ ಕಾಶ್ಮೀರಕ್ಕಾಗಿ ಹೋರಾಡಿದವರು ನಡೆಸಿದ ಕೃತ್ಯ. ಆದರೆ ಭಾರತ, ನಮ್ಮ ಮೇಲೆ ದಾಳಿ ಆರಂಭಿಸಿತ್ತು. ಹೀಗಾಗಿ ಸೇನೆ ಪ್ರತ್ಯುತ್ತರ ನೀಡಿತ್ತು ಎಂದೇ ಪಾಕಿಸ್ತಾನ ಇದುವರೆಗೂ ಹೇಳಿಕೊಂಡು ಬಂದಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮನೀರ್ ಸತ್ಯ ಒಪ್ಪಿಕೊಂಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯ ನೇರ ಕೈವಾಡವಿದೆ ಎಂದು ಮುನೀರ್ ವೇದಿಕೆಯಲ್ಲಿ ಅಧಿಕೃತ ಹೇಳಿಕೆ ನೀಡಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ಅಸೀಮ್ ಮುನೀರ್, ಭಾರತ ವಿರುದ್ದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ನೇರ ಕೈವಾಡ ಒಪ್ಪಿಕೊಂಡಿದ್ದಾರೆ. 1948, 1965, 1971 ಹಾಗೂ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆ ಕೈವಾಡವಿತ್ತು ಎಂದಿದ್ದಾರೆ. ಪಾಕಿಸ್ತಾನದ ಹಲವರು ಈ ಹೋರಾಟದಲ್ಲಿ ತಮ್ಮನ್ನು ತಾವು ದೇಶಕ್ಕಾಗಿ ಅರ್ಪಿಸಿಕೊಂಡಿದ್ದಾರೆ  ಎಂದಿದ್ದಾರೆ.

Latest Videos

ವಾಘ ಗಡಿ ರಿಟ್ರೀಟ್ ವೇಳೆ ಭಾರತದೊಳಗೆ ಓಡಿ ಬಂದ ಪಾಕಿಸ್ತಾನ ಬೀದಿ ನಾಯಿ ವಶಕ್ಕೆ ಪಡೆದ ಸೇನೆ!

ಕಾರ್ಗಿಲ್ ಯುದ್ಧ ನಡದು ಬರೋಬ್ಬರಿ 25 ವರ್ಷಗಳ ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥರು ಈ ಮಾತು ಹೇಳಿದ್ದಾರೆ. ಇಷ್ಟು ದಿನ ಕತೆ ಕಟ್ಟಿದ್ದ ಪಾಕಿಸ್ತಾನದ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ. ಕಾರ್ಗಿಲ್ ಜಿಲ್ಲೆಯ ಎತ್ತರ ಪರ್ವತ ಪ್ರದೇಶಗಳನ್ನು ಕೈವಶ ಮಾಡಲು ಪಾಕಿಸ್ತಾನ ಸೇನೆ ಬಹುದೊಡ್ಡ ಪ್ಲಾನ್ ರಚಿಸಿತ್ತು. ಇದಕ್ಕೆ ಪಾಕಿಸ್ತಾನ ಸರ್ಕಾರದ ಬೆಂಬಲ ಕೂಡ ಇತ್ತು.

 

For the First time, sitting Pakistan Army Chief (General Asim Munir) confirms Pakistan Army involvement in Kargil War with India.

The Pak Army at that time had refused it's role in said war & left their dead troppers on India's soil let alone honor them. pic.twitter.com/s7Vq7v3GCy

— Megh Updates 🚨™ (@MeghUpdates)

 

ಪಾಕಿಸ್ತಾನ ಸೇನೆ ಪ್ರಾಯೋಜಕತ್ವದ ನುಸುಳುಕೋರರನ್ನು ಆರಂಭದಲ್ಲಿ ಬಿಡಲಾಗಿತ್ತು. ಈ ನುಸುಳುಕೋರರು ಭಾರತ ಗಾರ್ಗಿಲ್ ಜಿಲ್ಲೆಯ ಪ್ರಮುಖ ಪ್ರದೇಶಗಳನ್ನ ಕೈವಶ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಸೇನೆ ಈ ಪ್ರದೇಶಕ್ಕೆ ದಾಂಗುಡಿ ಇಟ್ಟಿತ್ತು. ಆಕಿಸ್ತಾನ ಆಕ್ರಮಿಸಿಕೊಂಡ ಕಾರ್ಗಿಲ್ ಜಿಲ್ಲೆಯ ಹಲವು ಪ್ರದೇಶಗಳ ಮರು ವಶಕ್ಕೆ ಭಾರತ ಯುದ್ಧ ಘೋಷಿಸಿತ್ತು. ಮೇ ತಿಂಗಳಿನಿಂದ ಜುಲೈ ತಿಂಗಳ ವರೆಗೆ ಈ ಯುದ್ಧ ನಡೆದಿತ್ತು. ಪಾಕಿಸ್ತಾನ ನುಸುಳುಕೋರರು, ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿದ ಭಾರತ ಮರಳಿ ಕಾರ್ಗಿಲ್ ವಶಪಡಿಸಿಕೊಂಡಿತ್ತು.

ಭಾರತದಲ್ಲಿ ರೈಲು ಹಳಿ ತಪ್ಪಿಸಲು ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೂತ್ರಧಾರ ಪಾಕ್‌ ಉಗ್ರನಿಂದ ಅನುಯಾಯಿಗಳಿಗೆ ಕರೆ!
 

click me!