ಇದುವರೆಗೆ ಜಗತ್ತಿನ ದುಬಾರಿ ಶ್ವಾನ ಬೆಕ್ಕುಗಳ ಬಗ್ಗೆ ಕೇಳಿದ್ದೆವು. ಈಗ ಜಗತ್ತಿನ ದುಬಾರಿ ಕುದುರೆ ಸರದಿ. ಇದರ ಬೆಲೆಯಲ್ಲಿ ಶಾರುಖ್ ಖಾನ್ ಅವರ 'ಮನ್ನತ್' ನಂತಹ 3 ಬಂಗಲೆಗಳನ್ನು ಖರೀದಿಸಬಹುದು ಎಂದರೆ ಊಹಿಸಿಕೊಳ್ಳಿ ಈ ಕುದುರೆ ಎಷ್ಟು ದುಬಾರಿ ಎಂದು. ಈ ಬಗ್ಗೆ ಒಂದು ಡಿಟೇಲ್ ಸ್ಟೋರಿ
ಬೆಂಗಳೂರು: ಕುದುರೆ ಸವಾರಿ ಪ್ರಪಂಚದ ಅತ್ಯಂತ ದುಬಾರಿ, ಹಳೆಯ ಮತ್ತು ಪ್ರಸಿದ್ಧ ಕ್ರೀಡೆಗಳಲ್ಲಿ ಒಂದಾಗಿದೆ. ಈ ರೇಸ್‌ನಲ್ಲಿ ಓಡುವ ಕುದುರೆಗಳು ಕೂಡ ತುಂಬಾ ದುಬಾರಿಯಾಗಿವೆ. ಅವುಗಳ ಬೆಲೆ ಕೋಟಿಗಟ್ಟಲೇ ಇದೆ. ಆದರೆ ಜಗತ್ತಿನ ಅತ್ಯಂತ ದುಬಾರಿ ಕುದುರೆಯ ಬೆಲೆ ಎಷ್ಟು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಜಗತ್ತಿನ ಅತ್ಯಂತ ದುಬಾರಿ ಕುದುರೆಯ ಬೆಲೆ ಎಷ್ಟು ಹೆಚ್ಚು ಎಂದರೆ ಅದರಲ್ಲಿ ನಟ ಶಾರುಖ್ ಖಾನ್ ಅವರ ಮುಂಬೈನ 'ಮನ್ನತ್' ನಂತಹ 3 ಬಂಗಲೆಗಳನ್ನು ಸುಲಭವಾಗಿ ಖರೀದಿಸಬಹುದು.
ಜಗತ್ತಿನ ಅತ್ಯಂತ ದುಬಾರಿ ಕುದುರೆಯ ಹೆಸರೇನು?
ಜಗತ್ತಿನ ಅತ್ಯಂತ ದುಬಾರಿ ಕುದುರೆ ಹೆಸರು ಫುಸೈಚಿ ಪೆಗಾಸಸ್. ಇದನ್ನು 2017 ರಲ್ಲಿ ಜಪಾನಿನ ಬಿಲಿಯನೇರ್ ಫುಸಾವೋ ಸೆಕಿಗುಚಿ ಎಂಬುವವರು 7.5 ಮಿಲಿಯನ್ ಡಾಲರ್‌ಗಳಿಗೆ (ಇಂದಿನ ದರದಲ್ಲಿ ಸುಮಾರು 622 ಕೋಟಿ ರೂಪಾಯಿಗಳು) ಖರೀದಿಸಿದ್ದರು. ಫುಸೈಚಿ ಪೆಗಾಸಸ್ ಒಂದು ಚಾಂಪಿಯನ್ ಅಮೇರಿಕನ್ ತಳಿಯ ರೇಸ್ ಕುದುರೆ ಆಗಿದ್ದು, ಇದು 2000ದಲ್ಲಿ ಕೆಂಟುಕಿ ಡರ್ಬಿಯಲ್ಲಿ(Horse race) ಗೆಲುವು ಸಾಧಿಸಿತ್ತು.
ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕುದುರೆ ರೇಸ್ ಆಯೋಜನೆಗೆ ತಡೆಯೊಡ್ಡಿದ ಹೈಕೋರ್ಟ್!
ಮೇ, 2023 ರಲ್ಲಿ ಮೃತಪಟ್ಟ ದುಬಾರಿ ಕುದುರೆ
ವರದಿಗಳ ಪ್ರಕಾರ, ಜಗತ್ತಿನ ಅತ್ಯಂತ ದುಬಾರಿ ಕುದುರೆ ಫುಸೈಚಿ ಪೆಗಾಸಸ್ ಮೇ 2023 ರಲ್ಲಿ ಮೃತಪಟ್ಟಿದೆ. ಆಗ ಅದಕ್ಕೆ 26 ವರ್ಷವಾಗಿತ್ತು ಎಂಬ ವರದಿ ಬಂದಿತ್ತು. ಆದರೆ ಈ ಬಗ್ಗೆ ಖಚಿತತೆ ಇಲ್ಲ. ಕೆಲವರು ಈ ಕುದುರೆ ಇನ್ನೂ ಬದುಕಿದೆ ಎಂದು ಹೇಳುತ್ತಾರೆ. ರೇಸ್‌ನಲ್ಲಿ ಓಡುವ ಈ ಕುದುರೆ ತನ್ನ ವೃತ್ತಿಜೀವನದಲ್ಲಿ $2 ಮಿಲಿಯನ್ (₹16.5 ಕೋಟಿ) ಗಿಂತಲೂ ಅಧಿಕ ಸಂಪಾದನೆ ಮಾಡಿದೆ.
ಇದರ ಬೆಲೆಗೆ ಖರೀದಿಸಹುದು ದುಬಾರಿ ಬಂಗ್ಲೆ
ಜಗತ್ತಿನ ಅತ್ಯಂತ ದುಬಾರಿ ಕುದುರೆ ಫುಸೈಚಿ ಪೆಗಾಸಸ್‌ನ ಬೆಲೆ 622 ಕೋಟಿ ರೂಪಾಯಿಗಳು. ಅಂದರೆ ಈ ಬೆಲೆಯಲ್ಲಿ ನಟ ಶಾರುಖ್ ಖಾನ್ ಅವರ ಐಷಾರಾಮಿ ಮನೆ ಮನ್ನತ್ ನಂತಹ 3 ಬಂಗಲೆಗಳನ್ನು ಸುಲಭವಾಗಿ ಖರೀದಿಸಬಹುದು. ಮನ್ನತ್‌ನ ಅಂದಾಜು ಬೆಲೆ ಸುಮಾರು 200 ಕೋಟಿ ರೂಪಾಯಿಗಳು. ಅಮೇರಿಕನ್ ತಳಿಯ ಈ ಕುದುರೆ ತನ್ನ ವೇಗ ಮತ್ತು ಎತ್ತರಕ್ಕೆ ಹೆಸರುವಾಸಿಯಾಗಿದೆ.
ಷರತ್ತು ಬದ್ಧ ಕುದುರೆ ರೇಸ್‌ಗೆ ರಾಜ್ಯ ಹೈಕೋರ್ಟ್ ಮಧ್ಯಂತರ ಒಪ್ಪಿಗೆ, 3 ತಿಂಗಳ ಬಳಿಕ ರೇಸ್ ಕೋರ್ಸ್ ಓಪನ್
ಜಗತ್ತಿನ ಎರಡನೇ ಅತ್ಯಂತ ದುಬಾರಿ ಕುದುರೆ ಯಾವುದು
ಹಾಗೆಯೇ ಜಗತ್ತಿನ ಎರಡನೇ ಅತ್ಯಂತ ದುಬಾರಿ ಕುದುರೆ ದುಬೈನ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಅವರ ಬಳಿ ಇದೆ. ವರದಿಗಳ ಪ್ರಕಾರ, ಈ ಕುದುರೆಯ ಬೆಲೆ ಸುಮಾರು $4 ಮಿಲಿಯನ್ ಅಥವಾ ₹332 ಕೋಟಿ.