ರಾಫ್ತಾರ್ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ, ಪಾಕಿಸ್ತಾನದ ಎಫ್‌ಬಿಆರ್‌ನ ಮಾಜಿ ಅಧ್ಯಕ್ಷ ಶಬ್ಬರ್ ಜೈದಿ ಅವರು 1947 ರ ವಿಭಜನೆಯ ಸಮಯದಲ್ಲಿ ಪಾಕಿಸ್ತಾನವನ್ನು ಆಯ್ಕೆ ಮಾಡುವ ತಮ್ಮ ಕುಟುಂಬದ ಐತಿಹಾಸಿಕ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಜೂ.3): ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವಿನ್ಯೂ (ಎಫ್‌ಬಿಆರ್) ನ ಮಾಜಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಶಬ್ಬರ್ ಜೈದಿ ಅವರು, ದೇಶ ವಿಭಜನೆ ಸಮಯದಲ್ಲಿ ತಮ್ಮ ಅಜ್ಜ ಭಾರತದ ಬದಲು ಪಾಕಿಸ್ತಾನವನ್ನು ಆಯ್ಕೆ ಮಾಡುವ ಮೂಲಕ ದೊಡ್ಡ ತಪ್ಪು ಮಾಡಿದರು ಎಂದು ಹೇಳಿದ್ದಾರೆ. ಇತ್ತೀಚೆಗೆ ರಾಫ್ತಾರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬದ ನಿರ್ಧಾರಕ್ಕೆ ತೀವ್ರ ವಿವಾಷದ ವ್ಯಕ್ತಪಡಿಸಿದರು. ನನ್ನ ತಾಯಿಯ ಅಜ್ಜ ಮಾಡಿದ ಆಯ್ಕೆ ಬಗ್ಗೆ ನನಗೆ ಇಂದಿಗೂ ಬೇಸರವಿದೆ. ನನ್ನ ಪ್ರಕಾರ, ಭಾರತದಲ್ಲಿ ವಾಸ ಮಾಡುವುದೇ ನನ್ನ ಕುಟುಂಬಕ್ಕೆ ಹೆಚ್ಚು ಅನುಕೂಲಕರವಾಗಿತ್ತು ಎಂದು ಹೇಳಿದ್ದಾರೆ.
“ನನ್ನ ತಾಯಿಯ ಅಜ್ಜ ಸರ್ಕಾರಿ ನೌಕರರಾಗಿದ್ದರು. ವಿಭಜನೆಯ ಸಮಯದಲ್ಲಿ ಅವರು ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಂಡಿದ್ದರು. ಇದು ಅವರ ತಪ್ಪು ನಿರ್ಧಾರವಾಗಿತ್ತು. ಇದಕ್ಕಾಗಿ ನಾನು ಇಂದಿಗೂ ಪಶ್ಚಾತ್ತಾಪ ಪಡುತ್ತೇನೆ. ನನ್ನ ಅಜ್ಜ ತಪ್ಪು ಮಾಡಿದ್ದಾರೆ, ಹಾಗೇನಾದರೂ ಅವರು ಇದ್ದಲ್ಲಿ ಅವರ ಎದುರೇ ಈ ಮಾತು ಹೇಳುತ್ತಿದ್ದೆ. 1947ರಲ್ಲಿಅವರು ದೆಹಲಿಯಲ್ಲಿ ಕುಳಿಕೊಂಡು ಈ ನಿರ್ಧಾರ ಮಾಡಿದ್ದರು. ಇಂದು ನಾವು ಪಾಕಿಸ್ತಾನದಲ್ಲಿದ್ದುಕೊಂಡು, ಅವರು ಅಂದು ಯಾಕೆ ಭಾರತವನ್ನು ಆಯ್ಕೆ ಮಾಡಿಕೊಂಡಿಲ್ಲ ಎನ್ನುವುದನ್ನು ಯೋಚನೆ ಮಾಡುತ್ತೇವೆ. ಇದೇ ಪ್ರಶ್ನೆಯನ್ನು ನಾನು ಅವರಿಗೂ ಕೂಡ ಕೇಳಿದ್ದ, ಅದಕ್ಕೆ ಉತ್ತರವಾಗಿ ಅವರು 'ಸರ್ಕಾರಿ ಕೆಲಸ ಎಂದರೆ ನೀವು ನಿಮ್ಮ ಮಕ್ಕಳಿಗೆ 'ಹರಾಮ್' ಹಣದಿಂದ ಆಹಾರವನ್ನು ನೀಡಬೇಕಾಗುತ್ತದೆ" ಎಂದು ಹೇಳುತ್ತಿದ್ದರು ಎಊದ ಪಾಕಿಸ್ತಾನದ ಎಫ್‌ಬಿಆರ್ ಮಾಜಿ ಅಧ್ಯಕ್ಷರು ತಿಳಿಸಿದ್ದಾರೆ.
ಸರ್ಕಾರವು ತನ್ನ ನೌಕರರಿಗೆ ಕಡಿಮೆ ಸಂಬಳವನ್ನು ನಿಗದಿ ಮಾಡಲು ಕಾರಣವೂ ಇತ್ತು, ಯಾಕೆಂದರೆ, ಸರ್ಕಾರಗಳು ತಮ್ಮ ಅಧಿಕಾರಿಗಳು ಭ್ರಷ್ಟಚಾರದಲ್ಲಿ ತೊಡಗಿಕೊಳ್ಳಬೇಕು ಎಂದು ಬಯಸುತ್ತಾರೆ. ಪ್ರತಿಯಾಗಿ ಅಧಿಕಾರಿಗಳು ಅಂತಹ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. ಇದು ಬ್ರಿಟಿಷರು ರಚಿಸಿದ ವ್ಯವಸ್ಥೆಯಾಗಿದೆ. ಅವರ ಅಡಿಯಲ್ಲಿ ಕೆಲಸ ಮಾಡುವವರ ಮೇಲೆ ನಿಯಂತ್ರಣ ಮತ್ತು ಪಾಕಿಸ್ತಾನವು ಅದನ್ನೇ ಅಳವಡಿಸಿಕೊಂಡಿತು' ಎಂದಿದ್ದಾರೆ.
undefined
"ಪೇಶಾವರಕ್ಕಿಂತ ದೆಹಲಿಯಲ್ಲಿ ಹೆಚ್ಚು ಆರಾಮದಾಯಕ": ಸಂದರ್ಶನದ ಸಮಯದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಆದ್ಯತೆಯ ಬಗ್ಗೆ ಕೇಳಿದಾಗ, ಜೈದಿ ಭಾರತದ ಕಡೆಗೆ ಬಲವಾದ ಒಲವನ್ನು ವ್ಯಕ್ತಪಡಿಸಿದರು. ಪೇಶಾವರ, ಲಾಹೋರ್ ಅಥವಾ ಕರಾಚಿಗೆ ಹೋಲಿಸಿದರೆ ದೆಹಲಿಯಲ್ಲಿ ಬದುಕು ನೆಮ್ಮದಿಯಾಗಿದೆ ಎಂದರು. ಸಾಂಸ್ಕೃತಿಕ ಸಂಬಂಧಗಳು ಮತ್ತು ರಾಷ್ಟ್ರೀಯ ಗಡಿಗಳನ್ನು ಮೀರಿದ ವೈಯಕ್ತಿಕ ಸಂಪರ್ಕಗಳನ್ನು ಅವರು ತಿಳಿಸಿದ್ದಾರೆ.
ಸಲ್ಮಾನ್ ಹತ್ಯೆಗೆ ಪಾಕ್‌ನಿಂದ ಗನ್ ಆರ್ಡರ್ ಮಾಡಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್!
ಪಾಕಿಸ್ತಾನ ಹಾಗೂ ಭಾರತದ ನಡುವೆ ಘರ್ಷಣೆ ಇದ್ದರೆ, ನಾನು ಅದನ್ನು ಇಷ್ಟಪಡೋದಿಲ್ಲ. ನನಗೆ ಪೇಶಾವರಕ್ಕಿಂತ ದೆಹಲಿಯೇ ಆರಾಮದಾಯಕ ಎನಿಸುತ್ತಿದೆ. 20 ವರ್ಷಗಳಿಂದ ನಾನು ಲಾಹೋರ್‌ನಲ್ಲಿ ವಾಸಿಸುತ್ತಿದ್ದೇನೆ, ಪಾಕಿಸ್ತಾನದ ಲಾಹೋರ್, ಪೇಶಾವರಕ್ಕಿಂತ ಭಾರತದ ಅಮೃತ್‌ಸರ ಆರಾಮದಾಯಕ. ಹಾಗಂತ ನಾನು ಪಾಕಿಸ್ತಾನವನ್ನು ಧ್ವಂಸ ಮಾಡಿ ಎನ್ನುತ್ತಿಲ್ಲ. ನಾನು ಸೌತ್ ಏಷ್ಯನ್ ಫೆಡರೇಶನ್ ಆಫ್ ಅಕೌಂಟೆಂಟ್ಸ್ (SAFA) ದ ಅಧ್ಯಕ್ಷನಾಗಿದ್ದೆ, ನನ್ನ ಕಛೇರಿ ದೆಹಲಿಯಲ್ಲಿತ್ತು. ಆ ವೇಳೆ ಹಳೇ ದೆಹಲಿಯ ಊಟವನ್ನು ನನ್ನೊಂದಿಗೆ ಹಂಚಿಕೊಳ್ಳುವಂತೆ ಐಸಿಎಥ ಅಧ್ಯಕ್ಷ ವೇದ್ ಜೈನ್‌ಗೆ ಕೇಳುತ್ತಿದ್ದೆ. ಅದಕ್ಕೆ ಆತ ಅಚ್ಚರಿ ಪಡುತ್ತಾ ಅದು ಯಾವ ಸಿಟಿ ಎಂದು ಕೇಳಿದ್ದ. ಅದಕ್ಕೆ ನಾನು ಅದು ನಿಮ್ಮ ನಗರ, ನಾನು ಇನ್ನೊಂದು ದೇಶದಿಂದ ಬಂದಿದ್ದೇನೆ ನನಗೆ ಹೇಗೆ ಗೊತ್ತು ಎಂದು ತಮಾಷೆಯಿಂದ ಕೇಳಿದ್ದೆ. ಬಳಿಕ ಆತನಿಗೆ ಅದು ನನ್ನ ಹಳೆಯ ಊರಾಗಿತ್ತು ಎಂದು ತಿಳಿಸಿದ್ದಾಗಿ ಜೈದಿ ಹೇಳಿದ್ದಾರೆ.
ಪಿಒಕೆ ನಮ್ಮದಲ್ಲ: ಹೈಕೋರ್ಟ್‌ಗೆಪಾಕ್ ವಕೀಲರ ಅಚ್ಚರಿ ಮಾಹಿತಿ
Asaduddin Owaisi: "The position of Muslims in today's India is the same as the situation which Jews witnessed or experienced during Hitler's era in the 1930s,"
Meanwhile Pakistani Muslims: pic.twitter.com/ynxzBcb89o