ಆತ್ಮಗೌರವ ಅಡವಿಟ್ಟು ಮಿತ್ರ ದೇಶಗಳ ಬಳಿ ಸಾಲ: ತಾವು ಬಿಕಾರಿಯಾಗಿದ್ದನ್ನು ಒಪ್ಪಿಕೊಂಡ ಪಾಕ್ ಪ್ರಧಾನಿ ಷರೀಫ್!

Kannadaprabha News   | Kannada Prabha
Published : Feb 01, 2026, 02:59 PM IST
Pakistan Prime Minister Shehbaz Sharif

ಸಾರಾಂಶ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ದೇಶದ ತೀವ್ರ ಆರ್ಥಿಕ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ. ಐಎಂಎಫ್ ಮತ್ತು ಮಿತ್ರ ದೇಶಗಳ ಮುಂದೆ ಸಾಲ ಕೇಳುವುದು ಆತ್ಮಗೌರವಕ್ಕೆ ಧಕ್ಕೆ ತಂದಂತೆ ಮತ್ತು ತಲೆಬಗ್ಗಿಸಿದಂತೆ ಎಂದು ಅವರು ತಮ್ಮ ಅಸಹಾಯಕತೆಯನ್ನು ಬಣ್ಣಿಸಿದ್ದಾರೆ.  

ಇಸ್ಲಾಮಾಬಾದ್‌: ‘ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ಮಿತ್ರ ದೇಶಗಳ ಮುಂದೆ ಸಾಲದ ನೆರವು ಕೇಳುವುದೆಂದರೆ ಅದು ಅವರ ಮುಂದೆ ನಾವು ತಲೆಬಗ್ಗಿಸಿದಂತೆ ಮತ್ತು ಆತ್ಮಗೌರವದ ಜೊತೆ ರಾಜೀ ಮಾಡಿಕೊಂಡಂತೆ. ನಮ್ಮ ಪರಿಸ್ಥಿತಿಯೂ ಅದೇ ಆಗಿತ್ತು’ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಅನುಭವಿಸಿದ್ದ ಭಾರೀ ಆರ್ಥಿಕ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ.

ಪಾಕ್ ದೇಶದ ಉದ್ಯಮಿಗಳನ್ನು ಸನ್ಮಾನಿಸಿ ಮಾತಾಡಿದ ಷರೀಫ್

ಇಲ್ಲಿ ದೇಶದ ಉದ್ಯಮಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಶೆಹಬಾಜ್‌, ‘ನಾವು ಅಧಿಕಾರ ವಹಿಸಿಕೊಂಡಾಗ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ನಾವು ದಿವಾಳಿಯ ಹಂತದಲ್ಲಿದ್ದೆವು. ಈ ಹಂತದಲ್ಲಿ ನಾನು ಮತ್ತು ಅಂದಿನ ಸೇನಾಪಡೆಗಳ ಮುಖ್ಯಸ್ಥರಾದ ಆಸಿಂ ಮುನೀರ್‌, ಐಎಂಎಫ್‌ ಮತ್ತು ಹಲವು ಮಿತ್ರ ದೇಶಗಳ ಮುಂದೆ ಸಾಲದ ನೆರವು ಯಾಚನೆ ಮಾಡಬೇಕಾಗಿ ಬಂತು’ ಎಂದರು.

‘ಈ ಹಂತದಲ್ಲಿ ನಮ್ಮ ಮಿತ್ರದೇಶಗಳು ಮತ್ತು ಹಣಕಾಸು ಸಂಸ್ಥೆಗಳು ನಮಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದವು. ಆದರೆ ನಾವು ಮಿತ್ರ ದೇಶಗಳ ಬಳಿ ಸಾಲ ಯಾಚಿಸಿದ ರೀತಿಯನ್ನು ನಾವು ನಿಮ್ಮ ಮುಂದೆ ಬಣ್ಣಿಸುವುದಾದರೂ ಹೇಗೆ? ಏಕೆಂದರೆ ಯಾರ ಬಳಿಯಾದರೂ ನೀವು ಸಾಲ ಕೇಳಲು ಹೋಗುತ್ತಿದ್ದೀರಿ ಎಂದರೆ ಅವರ ಮುಂದೆ ನೀವು ತಲೆ ಬಾಗಲೇಬೇಕು. ನಿಮ್ಮ ಆತ್ಮಗೌರವದ ಜೊತೆಗೆ ರಾಜಿ ಮಾಡಿಕೊಳ್ಳಲೇಬೇಕು. ಇಂಥ ವೇಳೆ ಕೆಲವೊಂದು ಅನಗತ್ಯ ಷರತ್ತುಗಳೂ ಮುಂದೆ ಬರುತ್ತವೆ. ಅವು ಅನಪೇಕ್ಷಿತವಾದರೂ ನಾವು ಒಪ್ಪಿಕೊಳ್ಳಲೇಬೇಕು’ ಎಂದು ತಾವು ಎದುರಿಸಿದ ಅಸಹಾಯಕ ಪರಿಸ್ಥಿತಿಯನ್ನು ಬಣ್ಣಿಸಿದರು.

ಹಣಕಾಸಿಗಾಗಿ ಚೀನಾ, ಸೌದಿ ಅರೇಬಿಯಾ ಅವಲಂಬಿಸಿರುವ ಪಾಕ್

ತನ್ನ ವಿದೇಶಿ ವಿನಿಮಯ ಸಂಗ್ರಹ ಮತ್ತು ಸಾಲ ನಿರ್ವಹಣೆಗೆ ಪಾಕಿಸ್ತಾನವು ಹಲವು ವರ್ಷಗಳಿಂದ ಚೀನಾ, ಸೌದಿ ಅರೇಬಿಯಾ, ಕತಾರ್‌, ಐಎಂಎಫ್‌ ಮೊದಲಾದವುಗಳ ಮೇಲೆ ಅವಲಂಬಿತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಪ್‌ಸ್ಟೀನ್‌ ಫೈಲಲ್ಲಿ ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್‌ ರಾಸ*ಲೀಲೆ ವಿಡಿಯೋ ಬಹಿರಂಗ! ಭಾರತದ ಈ ಉದ್ಯಮಿಯ ಹೆಸರಿದೆ!
Operation Herof 2.0: ಹತ್ತು ನಗರಗಳಲ್ಲಿ ಬಲೂಚ್ ಭೀಕರ ದಾಳಿ, 12 ಪಾಕ್ ಸೈನಿಕರು ಖತಂ, ಡಿಸಿ ಕಿಡ್ನ್ಯಾಪ್!