
ವಾಷಿಂಗ್ಟನ್: ಶುಕ್ರವಾರ ಬಿಡುಗಡೆ ಆದ ಅಮೆರಿಕದ ಲೈಂ*ಗಿಕ ಅಪರಾಧಿ ಎಪ್‌ಸ್ಟೀನ್ ನಡೆಸಿದ ಹೈಪ್ರೊಫೈಲ್ ಲೈಂ*ಗಿಕ ಹಗರಣದ 3 ಲಕ್ಷ ಪುಟಗಳ ವಿವರಗಳು ಒಂದೊಂದಾಗಿ ಬಹಿರಂಗ ಆಗತೊಡಗಿವೆ. ಇವುಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಬ್ರಿಟನ್ ಪ್ರಿನ್ಸ್ ಆ್ಯಂಡ್ರೂ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಅವರ ತಾಯಿಯಾದ ಭಾರತೀಯ ಮೂಲದ ಚಿತ್ರ ನಿರ್ದೇಶಕಿ ಮೀರಾ ನಾಯರ್, ಭಾರತದ ಉದ್ಯಮಿ ಅನಿಲ್ ಅಂಬಾನಿ, ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್, ಉದ್ಯಮಿ ಜೆಫ್ ಬೆಜೋಸ್ ಹೆಸರುಗಳಿವೆ ಹಾಗೂ ಸ್ಫೋಟಕ ಅಂಶಗಳಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರಂಪ್ ತಮ್ಮ ಮಾರ್ಲಾ ಗೋ ಎಸ್ಟೇಟ್‌ನಲ್ಲಿ ಆಯೋಜಿಸುತ್ತಿದ್ದ ಐಷಾರಾಮಿ ಪಾರ್ಟಿಗಳಲ್ಲಿ ಉದ್ಯಮಿ ಎಲಾನ್ ಮಸ್ಕ್, ಟ್ರಂಪ್‌ರ ಮಕ್ಕಳಾದ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಮತ್ತು ಇವಾಂಕಾ ಟ್ರಂಪ್ ಭಾಗವಹಿಸಿದ್ದ ಅಂಶಗಳಿವೆ. ಜೊತೆಗೆ 13-14 ವರ್ಷದ ವಯಸ್ಸಿನವ ಬಾಲಕಿಯರ ಜೊತೆಗೆ ಟ್ರಂಪ್ ಮುಖಮೈ*ಥುನ ನಡೆಸಿದ ಹಾಗೂ ಟ್ರಂಪ್‌ಗೆ ಆ ಬಾಲಕಿಯರು ಕಚ್ಚಿದ ಅಸಹ್ಯಕರ ಅಂಶಗಳು ಕೂಡಾ ಇವೆ. ಅಲ್ಲದೆ ತಮ್ಮನ್ನು ಎಪ್‌ಸ್ಟೀನ್ ಲೈಂ*ಗಿಕವಾಗಿ ದುರ್ಬಳಕೆ ಮಾಡಿಕೊಂಡ ವಿಷಯವನ್ನೂ ಬಾಲಕಿಯರು ಹಂಚಿಕೊಂಡಿದ್ದಾರೆ.
ಮೈಕ್ರೋಸಾಫ್ಟ್ ಸಂಸ್ಥಾಪಕ, ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಬಿಲ್‌ಗೇಟ್ಸ್, ರಷ್ಯನ್ ಯುವತಿಯೊಂದಿಗೆ ಲೈಂ*ಗಿಕ ಸಂಪರ್ಕ ಬೆಳೆಸಿದ ಬಳಿಕ ಅವರಿಗೆ ಲೈಂ*ಗಿಕವಾಗಿ ಹರಡುವ ವ್ಯಾಧಿ ತಗುಲಿತ್ತು. ಹೀಗಾಗಿ ಸೋಂಕು, ಪತ್ನಿ ಮೆಲಿಂಡಾಗೆ ಹರಡದೇ ಇರಲಿ ಎಂದು ಅವರಿಗೆ ರಹಸ್ಯವಾಗಿ ಆ್ಯಂಟಿಬಯೋಟಿಕ್ ನೀಡಿ ಎಂದು ಎಪ್‌ಸ್ಟೀನ್ ಗೇಟ್ಸ್‌ಗೆ ಮಾಹಿತಿ ನೀಡಿದ್ದರು ಅಂಶಗಳು ವರದಿಯಲ್ಲಿವೆ. ಆದರೆ ಈ ಆರೋಪವನ್ನು ಬಿಲ್‌ಗೇಟ್ಸ್ ಪೂರ್ಣವಾಗಿ ಅಲ್ಲಗಳೆದಿದ್ದಾರೆ.
ಎಪ್‌ಸ್ಟೀನ್ ಕಡತಗಳಲ್ಲಿ ಬ್ರಿಟನ್ ರಾಜಕುವರ ಪ್ರಿನ್ಸ್ ಆ್ಯಂಡ್ರೂ ರಾಸ*ಲೀಲೆ ನಡೆಸುತ್ತಿರುವ ಫೋಟೋ ಇವೆ.
ಎಪ್‌ಸ್ಟೀನ್ ನಂಟಿನ ವ್ಯಕ್ತಿ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾರತೀಯ ಮೂಲದ ಚಿತ್ರ ನಿರ್ದೇಶಕಿ, ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರ ತಾಯಿ ಮೀರಾ ನಾಯರ್ ಕೂಡಾ ಭಾಗಿಯಾಗಿದ್ದರು ಎಂಬ ಮಾಹಿತಿ ವರದಿಯಲ್ಲಿದೆ. ಮೀರಾ ನಾಯರ್ ನಿರ್ದೇಶಿಸಿದ್ದ ಚಿತ್ರದ ಪ್ರದರ್ಶನದ ಬಳಿಕ ನ್ಯೂಯಾರ್ಕ್ ಟೌನ್‌ಹೌಸ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಅದರಲ್ಲಿ ಬಿಲ್ ಕ್ಲಿಂಟನ್, ಜೆಫ್ ಬೆಜೋಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಪಾರ್ಟಿಯನ್ನು ಲೈಂ*ಗಿಕ ಅಪಹರಣ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಘಿಸಾಲೈನ್ ಮ್ಯಾಕ್ಸ್‌ವೆಲ್ ಆಯೋಜಿಸಿದ್ದ ಎಂಬ ಮಾಹಿತಿ ವರದಿಯಲ್ಲಿದೆ.
ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರೂ ಸಹ ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ತಳುಕಾಡಿದೆ. ಮೇ 23, 2019ರಂದು ಅನಿಲ್ ಅವರು ಎಪ್‌ಸ್ಟೀನ್ ಅವರನ್ನು ಭೇಟಿಯಾಗಲಿದ್ದಾರೆ. ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದಾರೆ ಎಂಬ ಇ-ಮೇಲ್ ಎಪ್‌ಸ್ಟೀನ್ ಫೈಲ್‌ನಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ