Viral video: ಮೊಸರಿಗಾಗಿ ರೈಲು ನಿಲ್ಲಿಸಿದ ಚಾಲಕ

Suvarna News   | Asianet News
Published : Dec 09, 2021, 11:56 AM ISTUpdated : Dec 09, 2021, 11:58 AM IST
Viral video: ಮೊಸರಿಗಾಗಿ ರೈಲು ನಿಲ್ಲಿಸಿದ ಚಾಲಕ

ಸಾರಾಂಶ

ಮೊಸರಿಗಾಗಿ ರೈಲು ನಿಲ್ಲಿಸಿದ ಪಾಕಿಸ್ತಾನ ಚಾಲಕ ವೈರಲ್‌ ಆಯ್ತು ಪಾಕಿಸ್ತಾನದ ವಿಡಿಯೋ ಚಾಲಕ ಹಾಗೂ ಸಹಾಯಕನ ಅಮಾನತು

ಲಾಹೋರ್‌: ಸಾಮಾಜಿಕ ಜಾಲತಾಣವೊಂದರಲ್ಲಿ ವೀಡಿಯೋವೊಂದು ವೈರಲ್‌(viral) ಆಗಿದ್ದು, ಅದರಲ್ಲಿ ಪಾಕಿಸ್ತಾನ(Pakistan) ರೈಲು ಚಾಲಕ ಹಾಗೂ ಆತನ ಸಹಾಯಕ ಮೊಸರು ಕೊಳ್ಳುವುದಕ್ಕೋಸ್ಕರ ಸಾವಿರಾರು ಜನರು ಪ್ರಯಾಣಿಸುತ್ತಿದ್ದ ರೈಲನ್ನು ನಿಲ್ಲಿಸಿದ ಘಟನೆ ನಡೆದಿದೆ. ಲಾಹೋರ್‌(Lahore)ನ ರೈಲ್ವೆ ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ. ರೈಲಿನ ಚಾಲಕನ ಸಹಾಯಕ ಅಲ್ಲೇ ಸಮೀಪದ ಅಂಗಡಿಯೊಂದರಿಂದ ಮೊಸರು ಖರೀದಿಸಿ ತರುತ್ತಿರುವ ಚಿತ್ರಣ ಈ ವಿಡಿಯೋದಲ್ಲಿದೆ. ಈ ಘಟನೆಯೂ ಪಾಕಿಸ್ತಾನದಲ್ಲಿ ರೈಲಿನ ಸುರಕ್ಷತೆ ಹಾಗೂ ನಿಯಮಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.

ಇಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಹಾಗೂ ನಿರ್ಲಕ್ಷ್ಯದಿಂದ ರೈಲ್ವೆ ಅಪಘಾತಗಳು ಸಾಮಾನ್ಯವಾಗಿವೆ. ಇನ್ನು ಮೊಸರಿಗಾಗಿ ರೈಲು ನಿಲ್ಲಿಸಿದ ಸಿಬ್ಬಂದಿಯನ್ನು ರಾಣಾ ಮೊಹಮ್ಮದ್‌ ಸೆಹ್ಜಾದ್(Rana Mohammed Sehzad) ಹಾಗೂ ಆತನ ಸಹಾಯಕ ಇಫ್ತಿಕರ್‌ ಹುಸೇನ್‌(Iftikhar Hussain)ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ  ಸಾಮಾಜಿಕ ಜಾಲತಾಣ(Social networking site)ಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಪಾಕಿಸ್ತಾನದ ರೈಲ್ವೆ ಸಚಿವ ಅಜಮ್‌ ಖಾನ್‌ ಸ್ವತಿ(Azam Khan Swati) ರೈಲಿನ ಚಾಲಕ ಹಾಗೂ ಆತನ ಸಹಾಯಕನನ್ನು ಸೇವೆಯಿಂದ ಅಮಾನತು ಗೊಳಿಸಿದ್ದಾರೆ.


Pak women paraded naked:ಪಾಕಿಸ್ತಾನದಲ್ಲಿ ಹೇಯ ಕೃತ್ಯ: 4 ಮಹಿಳೆಯರ ಬೆತ್ತಲೆಗೊಳಿಸಿ ಮೆರವಣಿಗೆ

ಪಾಕಿಸ್ತಾನದಲ್ಲಿ ಇಂತಹ ವಿಚಿತ್ರಗಳು ನಡೆಯುವುದು ಸಾಮಾನ್ಯವೆನಿಸಿದೆ. ಇತ್ತೀಚೆಗೆ ಪಾಕಿಸ್ತಾನದ ಪಂಜಾಬ್(Punjab) ಪ್ರಾಂತ್ಯದ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ ಒಂದು ವೈರಲ್ ಆಗಿದ್ದು, ಇದು ಬಹುತೇಕರನ್ನು ಅಚ್ಚರಿಗೊಳಿಸಿತ್ತು.  ಸಮವಸ್ತ್ರದಲ್ಲೇ ಇದ್ದ ಪೊಲೀಸ್ ಅಧಿಕಾರಿ ಮಹಿಳೆ ಜೊತೆ ಬಿಂದಾಸ್ ಆಗಿ ಸೊಂಟ ಬಳುಕಿಸಿದ್ದಾರೆ. ಈ ಅಧಿಕಾರಿಯ ಹೆಸರು ಅರ್ಶದ್(Arshad) ಎಂದು ತಿಳಿದು ಬಂದಿದೆ. 'ದ ಟ್ರಿಬ್ಯೂನ್' ಪ್ರಕಟಿಸಿರುವ ವರದಿಯನ್ವಯ ಇವರು ಕಲ್ಯಾನಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಗಿದ್ದಾರೆ. ಮಹಿಳೆ ಹಾಗೂ ಅರ್ಶದ್, ನಟ ಗೋವಿಂದರವರ 'ಕಿಸೀ ಹಿಸ್ಕೋ ಮೆಂ ಜಾಯೆ' ಎಂಬ ಹಾಡಿಗೆ ಹೆಜ್ಜೆ ಹಾಕಿರುವುದನ್ನು ಗಮನಿಸಬಹುದಾಗಿದೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಲ್ಲಿನ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಪೊಲೀಸ್ ಇಲಾಖೆಯು ಅಧಿಕಾರಿಯನ್ನು ಅಮಾನತುಗೊಳಿಸಿ ತನಿಖೆ ನಡೆಸಲು ಆದೇಶಿಸಿದೆ. 

ಹತ್ಯೆಗೀಡಾದ ಸೈನಿಕನ ಕೊನೆಯ ವಿಡಿಯೋ ವೈರಲ್

ಮೊದಲೆಲ್ಲಾ, ಪ್ರತಿಭೆ ಇದ್ದರು ಸರಿಯಾದ ವೇದಿಕೆ ಇಲ್ಲ ಎನ್ನುವ ಕೊರಗು ತುಂಬಾ ಜನರನ್ನು ಕಾಡುತ್ತಿತ್ತು. ಆದರೆ ಈಗ ಹಾಗಿಲ್ಲ. ಜನರು ತಮ್ಮ ಪ್ರತಿಭೆಗೆ ತಾವೇ ವೇದಿಕೆಯೊದಗಿಸಿಕೊಳ್ಳಬಹುದು. ಟಿಕ್‌ಟಾಕ್, ಸ್ನೇಪ್‌ ಚಾಟ್‌, ಮೊಜ್‌, ಚಿಂಗಾರಿ ಮುಂತಾದ ತರಹೇವಾರಿ ಆಪ್‌ಗಳಿದ್ದು, ಇವುಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಬಹುದಾಗಿದೆ. ಕೆಲವೊಬ್ಬರು ಇವುಗಳನ್ನು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಬಳಸಿದರೆ ಮತ್ತು ಕೆಲವರು ಇದನ್ನು ಇನ್ಯಾವುದಕ್ಕೆಲ್ಲಾ ಬಳಸುತ್ತಾರೆ. ಇದರಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡೂ ಅಂಶಗಳು ಇವೆ. ಇದರೊಂದಿಗೆ ಸಾಮಾಜಿಕ ಜಾಲತಾಣದಿಂದಾಗಿ ಇಂದು ಯಾರೇ ಕೆಟ್ಟ ನಡತೆ ತೋರಿದರು ಅಥವಾ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ದುರ್ವರ್ತನೆ ತೋರಿದರೆ ಆಗಲೇ ಅವರ ಕೃತ್ಯದ ವಿಡಿಯೋ ಮಾಡಿ ಜನ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡುತ್ತಾರೆ. ಹೀಗಾಗಿ ಇಂದು ಯಾರು ಏನೇ ಕೆಲಸ ಮಾಡಿದರು ಯೋಚಿಸಿ ಮಾಡುವಂತಾಗಿದೆ. ಒಟ್ಟಿನಲ್ಲಿ ಈ ಸಾಮಾಜಿಕ ಜಾಲತಾಣಗಳಿಂದ ಜನರಿಗೆ ಮನೋರಂಜನೆಯ ಜೊತೆ ಪ್ರಚಾರವೂ ಸಿಗುತ್ತಿದೆ ಎಂದರೆ ತಪ್ಪಾಗಲಾರದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?