
ವಾಷಿಂಗ್ಟನ್: ಭಾರತ ಸೇರಿದಂತೆ ನೆರೆಹೊರೆ ದೇಶದಲ್ಲಿ ಭಯೋತ್ಪಾದನೆಗೆ ನೇರ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನವನ್ನು ‘ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನವು ನಮ್ಮ ಅತ್ಯಾಪ್ತ ರಾಷ್ಟ್ರವಾಗಿದೆ’ ಎಂದು ಅಮೆರಿಕ ಹೇಳಿದೆ. ಜೊತೆಗೆ ಭಾರತದ ಜತೆ ನಾವು ಸಂಬಂಧ ಹೊಂದುವ ಸಲುವಾಗಿ ಪಾಕಿಸ್ತಾನದ ಜತೆ ನಂಟು ಹೊಂದುವಂತಿಲ್ಲ ಎಂದು ಹೇಳಲಾಗದು ಎಂದು ಹೇಳಿದ್ದಾರೆ.
ಈ ಬಗ್ಗೆ ಅಮೆರಿಕ ಸಂಸತ್ತಿನ ಸಶಸ್ತ್ರ ಪಡೆಗಳ ಸಮಿತಿ ಮುಂದೆ ಹಾಜರಾಗಿ ಮಾತನಾಡಿದ ಅಮೆರಿಕ ಸೇನೆಯ ಕೇಂದ್ರ ಕಮಾಂಡ್‌ನ ಮುಖ್ಯಸ್ಥ ಮೈಕೆಲ್ ಕುರಿಲ್ಲಾ,‘ ನಾವಿಬ್ಬರು ಉಗ್ರವಾದದ ವಿರುದ್ಧ ಜಂಟಿಯಾಗಿ ಹೋರಾಡುತ್ತಿದ್ದೇವೆ. ಅದಕ್ಕಾಗಿ ನಮ್ಮ ಗುಪ್ತಚರ ಮಾಹಿತಿ ಪಾಕ್ ಬಳಿ ಹಂಚಿಕೊಂಡಿದ್ದೇವೆ. ಪಾಕ್ ತನ್ನ ಪಶ್ಚಿಮ ಗಡಿಯಲ್ಲಿ ಐಸಿಸ್ ಖರೋಸನ್ ಉಗ್ರರ ವಿರುದ್ಧ ಹೋರಾಡುತ್ತಿದೆ. ಅಮೆರಿಕದ ವಾಂಟೆಡ್ ಲಿಸ್ಟ್‌ನಲ್ಲಿದ್ದ ಉಗ್ರ ಮೊಹಮ್ಮದ್ ಶರೀಫುಲ್ಲಾನನ್ನು ಹಸ್ತಾಂತರಿಸಿದೆ’ ಎಂದು ಗುಣಗಾನ ಮಾಡಿದರು.
ಈ ನಡುವೆ ಅಮೆರಿಕದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್, ಇದು ಮೋದಿ ರಾಜತಾಂತ್ರಿಕತೆಗೆ ಆದ ಹಿನ್ನಡೆಯೇ ಎಂದು ಪ್ರಶ್ನಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ