
Un Married Girls: ಪ್ರಪಂಚದಲ್ಲಿ ಕೆಲವು ದೇಶಗಳಲ್ಲಿ ಒಂಟಿಯಾಗಿರಲು ಇಷ್ಟಪಡದೇ ಸಂಗಾತಿ ಸಾಮೀಪ್ಯವನ್ನು ಬಯಸುತ್ತಾರೆ. ಇಳಿವಯಸ್ಸಿನಲ್ಲಿಯೂ ಮದುವೆಯಾಗುವ ಮೂಲಕ ಹೊಸ ಬದುಕು ಕಟ್ಟಿಕೊಳ್ಳುವ ತವಕದಲ್ಲಿರುತ್ತಾರೆ. ಆದ್ರೆ ಒಂದಿಷ್ಟು ದೇಶಗಳಲ್ಲಿ ಮದುವೆ ಎಂಬ ಬಂಧನವೇ ಬೇಡ ಎಂದು ಏಕಾಂಗಿಯಾಗಿರಲು ಬಯಸುತ್ತಾರೆ. ಇಂತಹ ನಿರ್ಧಾರಗಳಿಗೆ ಅಲ್ಲಿಯ ಸಾಮಾಜಿಕ, ರಾಜಕೀಯ ಕಾರಣಗಳಾಗಿರುತ್ತವೆ. ಈ ಒಂದು ದೇಶದಲ್ಲಿ ಅತಿ ಹೆಚ್ಚು ಮಹಿಳೆಯರು ಮದುವೆ ಬೇಡ ಅಂತಾರೆ. ಈ ದೇಶದ ಮಹಿಳೆಯರು ಮದುವೆಯಾಗದಿರೋದಕ್ಕೂ ಕೆಲವು ಕಾರಣಗಳಿವೆ.
ದಕ್ಷಿಣ ಕೊರಿಯಾದ ಮಹಿಳೆಯರು ಒಂದು ಗುಂಪು ಇಡೀ ಜೀವನ ಒಂಟಿಯಾಗಿರಲು ಬಯಸುತ್ತಾರೆ. ಮದುವೆಯಾಗೋದು ಒಂದು ಹೆಚ್ಚಿನ ಜವಾಬ್ದಾರಿ ಎಂಬವುದು ಈ ಮಹಿಳೆಯ ಅಭಿಪ್ರಾಯವಾಗಿದೆ. ಇದರ ಜೊತೆಗೆ ಮದುವೆ ಬಳಿಕ ಪುರುಷರಿಂದ ದಬ್ಬಾಳಿಕೆ, ಕಿರುಕುಳ, ಜೀವನದ ಒತ್ತಡದ, ಅವಲಂಬಿತಳಾಗಿ ಬದುಕಲು ಈ ಮಹಿಳೆಯರು ಇಷ್ಟಪಡಲ್ಲ. ಈ ಎಲ್ಲಾ ಕಾರಣಗಳಿಂದ ಮಹಿಳೆಯರು ಮದುವೆಯಾಗಲು ಇಷ್ಟಪಡುವುದಿಲ್ಲ.
ಮೀರಿದ ಮದುವೆ ವಯಸ್ಸು
ವರದಿಯೊಂದರ ಪ್ರಕಾರ, ಗಲ್ಫ್ ರಾಷ್ಟ್ರಗಳಲ್ಲಿ ಒಟ್ಟಾರೆಯಾಗಿ ಸುಮಾರು 2.5 ಕೋಟಿ (25 ಮಿಲಿಯನ್) ಮಹಿಳೆಯರು ಅವಿವಾಹಿತರಾಗಿದ್ದಾರೆ. ಇವರೆಲ್ಲರ ವಯುಸ್ಸು ಅಂದಾಜು 24ಕ್ಕಿಂತಲೂ ಅಧಿಕವಾಗಿದ್ದು, ಇದೇ ಸಮೂಹದಲ್ಲಿ 35 ವರ್ಷ ಮೇಲ್ಪಟ್ಟವರು ಸಹ ಸೇರಿದ್ದಾರೆ. ಸಂಶೋಧನಾ ವರದಿ ಪ್ರಕಾರ, ಈಜಿಪ್ಟ್ ದೇಶದಲ್ಲಿಯೇ ಸುಮಾರು 9 ಮಿಲಿಯನ್ ಮದುವೆಯಾಗದ ಮಹಿಳೆಯರಿದ್ದು, ಇವರನ್ನು Spinsters ಎಂದು ಕರೆಯಲಾಗುತ್ತದೆ. ಇವರೆಲ್ಲರದ್ದೂ ಸಾಂಪ್ರದಾಯಿಕ ಮದುವೆ ವಯಸ್ಸು ಮೀರಿದ್ದು, ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.
ಇದನ್ನೂ ಓದಿ: Intimate Relationships: ಲವ್, ಬ್ರೇಕಪ್ ಬಗ್ಗೆನೂ ಇನ್ಮುಂದೆ ಸಿಗಲಿದೆ ಶಿಕ್ಷಣ! ಏನಿದು ಕೋರ್ಸ್?
ಕುವೈತ್‌ನ ಪತ್ರಿಕೆಯಿಂದ ವರದಿ
ಈಜಿಪ್ಟ್ ನಂತರದ ಸ್ಥಾನದಲ್ಲಿ ಅಲ್ಜಿರಿಯಾ ಬರುತ್ತದೆ. ಇಲ್ಲಿಯ ಅವಿವಾಹಿತ ಮಹಿಳೆಯರ ಸಂಖ್ಯೆ 40 ಲಕ್ಷಕ್ಕೂ ಅಧಿಕವಾಗಿದೆ. ಇರಾಕ್‌ನಲ್ಲಿ 30 ಲಕ್ಷ, ಯಮನ್‌ನಲ್ಲಿ 2 ಲಕ್ಷದ ಆಸುಪಾಸಿನಲ್ಲಿ ಮದುವೆಯಾಗದ ಮಹಿಳೆಯರನ್ನು ಕಾಣಬಹುದಾಗಿದೆ. ಇದೆಲ್ಲದರ ಜೊತೆಯಲ್ಲಿ ಸುಡಾನ್, ತುನಸಿಯಾ ಮತ್ತು ಸೌದಿ ಅರೇಬಿಯಾದಲ್ಲಿ ಸುಮಾರು 1.5 ಲಕ್ಷ ಅವಿವಾಹಿತ ಮಹಿಳೆಯರಿದ್ದಾರೆ ಎಂದು ವರದಿಯಾಗಿದೆ. ಈ ಸಂಶೋದನಾ ವರದಿಯನ್ನು 2010 ರಲ್ಲಿ ಕುವೈತ್‌ನ ಪತ್ರಿಕೆ ಅಲ್ರೈ ನಡೆಸಿದ್ದು, ಅದರಲ್ಲಿ ಈ ಅಂಕಿ ಅಂಶಗಳು ಬೆಳಕಿಗೆ ಬಂದಿದೆ.
ಮದುವೆಯಾಗದ ಮುಸ್ಲಿಂ ಮಹಿಳೆಯರ ಪಟ್ಟಿಯಲ್ಲಿ ಸಿರಿಯಾ ಮತ್ತು ಲೆಬನಾನ್ ಸಹ ಸೇರಿವೆ. ಇಲ್ಲಿ ಕ್ರಮವಾಗಿ 70 ಮತ್ತು 45 ಸಾವಿರ ಮಹಿಳೆಯರು ಕನ್ಯೆಯಾಗಿಯೇ ಉಳಿದುಕೊಂಡಿದ್ದಾರೆ. ಇಲ್ಲಿಯ ರಾಜಕೀಯ ಸಂಘರ್ಷ, ಯುದ್ಧದ ವಾತಾವರಣದಿಂದ ಮಹಿಳೆಯರು ಕನ್ಯೆಯರಾಗಿಯೇ ಉಳಿಯಲು ಇಚ್ಛಿಸುತ್ತಾರೆ. ಜಾರ್ಡನ್‌ನಲ್ಲಿ ಅವಿವಾಹಿತ ಮಹಿಳೆಯರ ವಯಸ್ಸು 30 ರಿಂದ 32ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ವಿಭಿನ್ನ ಕಾರಣಗಳು
ಇಂದು ಮಹಿಳೆಯರು ಮದುವೆಯಾಗದಿರಲು ವಿಭಿನ್ನ ಕಾರಣಗಳಿರಬಹುದು. ಉನ್ನತ ಶಿಕ್ಷಣ ಪಡೆಯುತ್ತಿರುವ ಕಾರಣದಿಂದ ಮಹಿಳೆಯರು ಮದುವೆ ಬಂಧನದಿಂದ ದೂರ ಉಳಿದಿರಬಹುದು. ಇನ್ನು ಕೆಲವರು ವೃತ್ತಿಜೀವನಕ್ಕೆ ತಮ್ಮ ಮೊದಲ ಆದ್ಯತೆ ನೀಡುತ್ತಿರಬಹುದು. ಉದ್ಯೋಗ ಸಿಕ್ಕು ನೆಲೆಗೊಳ್ಳುವವರೆಗೆ ಮದುವೆಯಾಗದಿರಲು ನಿರ್ಧರಿಸುತ್ತಿರಬಹುದು. ಅನೇಕ ಮುಸ್ಲಿಂ ದೇಶಗಳಲ್ಲಿ ಮದುವೆಯಾಗುವುದು ತುಂಬಾ ದುಬಾರಿಯಾಗಿದೆ. ವರದಕ್ಷಿಣೆ, ಉಡುಗೊರೆಗಳು ಮತ್ತು ಸ್ವಾಗತದಂತಹ ವೆಚ್ಚಗಳು ಸಾಮಾನ್ಯವಾಗಿದೆ.
ಇದನ್ನೂ ಓದಿ: ರಾತ್ರೋರಾತ್ರಿ ಸಾವಿರಾರು ಮಹಿಳೆಯರ ನಾಗರೀಕತ್ವ ರದ್ದುಗೊಳಿಸಿದ ಮುಸ್ಲಿಂ ರಾಷ್ಟ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ