ಚೀನಾ ಜೊತೆ ಕೈಜೋಡಿಸಿದ ಪಾಕ್‌, ಕೊರೋನಾಗಿಂತ ಮಾರಕವಾದ 'ಡೆಡ್ಲಿ ವೈರಸ್‌' ಸಂಶೋಧನೆ!

By Santosh Naik  |  First Published Nov 8, 2022, 8:23 PM IST

ಸುದ್ದಿಸಂಸ್ಥೆ ಮಾಡಿರುವ ವರದಿಯ ಪ್ರಕಾರ ಚೀನಾದ ದೇಶವು ಪಾಕಿಸ್ತಾನದಲ್ಲಿ ಕೋವಿಡ್‌ ರೀತಿಯ ಮಾರಣಾಂತಿಕ ವೈರಸ್‌ಗಳನ್ನು ಸೃಷ್ಟಿ ಮಾಡುತ್ತಿದೆ. ಈ ವೈರಸ್‌ ಕೋವಿಡ್‌ಗಿಂತಲೂ ದೊಡ್ಡ ಪ್ರಮಾಣದಲ್ಲಿ ಸಾಂಕ್ರಾಮಿಕ ಉಂಟು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.


ಕರಾಚಿ (ನ.8): ಜಾಗತಿಕ ಕಳವಳಗಳಿಗೆ ಕಣ್ಣು ಮುಚ್ಚಿಕೊಂಡು ಕುಳಿತಿರುವ ಪಾಕಿಸ್ತಾನ ಮತ್ತು ಚೀನಾ ರಾವಲ್ಪಿಂಡಿ ಬಳಿಯ ರಹಸ್ಯ ಕೇಂದ್ರದಲ್ಲಿ ಜೈವಿಕ ಶಸ್ತ್ರಾಸ್ತ್ರಗಳ ಕುರಿತು ನಿರಂತರವಾಗಿ ಸಂಶೋಧನೆ ನಡೆಸುತ್ತಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ನವೆಂಬರ್ 6 ರಂದು ವರದಿ ಮಾಡಿದೆ. ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಪಾಕಿಸ್ತಾನದ ಸೇನೆ ಮೇಲ್ವಿಚಾರಣೆಯಲ್ಲಿರುವ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್‌ಟಿಒ), ಪಾಕಿಸ್ತಾನದಲ್ಲಿ ಮಾರಣಾಂತಿಕ ವೈರಸ್‌ಗಳ ಕುರಿತು ಸಂಶೋಧನೆ ನಡೆಸಲು ಹೆಚ್ಚು ಸುಧಾರಿತ ವೈಜ್ಞಾನಿಕ ಮೂಲಸೌಕರ್ಯವನ್ನು ಸ್ಥಾಪಿಸಿದೆ ಎಂದು ಮೂಲಗಳು ಏಜೆನ್ಸಿಗೆ ತಿಳಿಸಿವೆ. ಮೂರು ವರ್ಷಗಳ ಹಿಂದೆ ಕೋವಿಡ್‌-19ನ ಮೊದಲ ಪ್ರಕರಣದ ಚೀನಾದ ವುಹಾನ್‌ನಲ್ಲಿಯೇ ಪ್ರಕಟವಾಗಿತ್ತು. ಇಂದಿಗೂ ಕೂಡ ವಿಶ್ವದ ಬಹುತೇಕ ರಾಷ್ಟ್ರಗಳು, ಚೀನಾದ ವುಹಾನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿಯಿಂದಲೇ ಈ ಮಾರಣಾಂತಿಕ ವೈರಸ್‌ ಸೋರಿಕೆಯಾಗಿದೆ ಎಂದು ಹೇಳಿವೆ. ಜಗತ್ತು ಈ ಕ್ಷಣದಲ್ಲೂ ಕೂಡ ಚೀನಾದ ಸಾಂಕ್ರಾಮಿಕ ವೈರಸ್‌ ಹಾಗೂ ಅದರ ರೂಪಾಂತರಗಳಿಂದ ಉಂಟಾಗಿರುವ ಬಿಕ್ಕಟ್ಟಿನೊಂಡಿಗೆ ಹೋರಾಟ ನಡೆಸುತ್ತಿದೆ.

ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಚೀನಾವು ಪಾಕಿಸ್ತಾನದಲ್ಲಿ ಕೋವಿಡ್ ರೀತಿಯಲ್ಲಿ ರೋಗಸೃಷ್ಟಿ ಮಾಡುವ ವೈರಸ್‌ಗಳ  ರಚನೆಯಲ್ಲಿ ತೊಡಗಿದೆ. ಇದು ಕೋವಿಡ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಂಕ್ರಾಮಿಕವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಚೀನಾ ಹಾಗೂ ಪಾಕಿಸ್ತಾನ ಸಿದ್ಧ ಮಾಡುತ್ತಿರುವ ವೈರಸ್‌ನ ಪ್ರಯೋಗಾಲಯವು "ಬಯೋಸೇಫ್ಟಿ ಲೆವೆಲ್ 4" ಸೌಲಭ್ಯವಾಗಿದೆ (BSL-4) ಮತ್ತು ಎರಡು-ಸ್ಟಾರ್ ಜನರಲ್ ನೇತೃತ್ವದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ತಜ್ಞರ ಪ್ರಕಾರ ಬಿಎಸ್‌ಎಲ್‌-4 ಲ್ಯಾಬ್‌ಗಳನ್ನು ಸಾಂಕ್ರಾಮಿಕ ಅಂಶಗಳು ಮತ್ತು ಜೀವಾಣು ವಿಷಗಳನ್ನು ಅಧ್ಯಯನ ಮಾಡಲು ಬಳಸಲಾಗುತ್ತದೆ. ಇಂಥ ಲ್ಯಾಬ್‌ಗಳಲ್ಲಿ ಸೃಷ್ಟಿಯಾಗುವ ವೈರಸ್‌ಗಳು ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲದ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.

ರಹಸ್ಯ ಯೋಜನೆಗೆ, 'ಎಮರ್ಜಿಂಗ್ ಸಾಂಕ್ರಾಮಿಕ ರೋಗಗಳ ಸಹಯೋಗ ಮತ್ತು ವೆಕ್ಟರ್ ಹರಡುವ ರೋಗಗಳ ಜೈವಿಕ ನಿಯಂತ್ರಣದ ಅಧ್ಯಯನಗಳು'  ( Collaboration for Emerging Infectious Diseases and Studies on Biological Control of Vector Transmitting Diseases.) ಎಂದು ಶೀರ್ಷಿಕೆಯನ್ನು ಇಡಲಾಗಿದೆ ಎಂದು ಎಎನ್‌ಐ ವರದಿಯಲ್ಲಿ ಬರೆದಿದೆ. ಸಾರ್ಸ್‌ ಕೋವ್-2 (SARS-CoV-2) ವೈರಸ್‌ಗಿಂತ ಹೆಚ್ಚು ಸಾಂಕ್ರಾಮಿಕ ವೈರಸ್‌ಗಳನ್ನು ಸೃಷ್ಟಿ ಮತ್ತು ಪರೀಕ್ಷೆ ಮಾಡಬಹುದಾದ ಪ್ರಯೋಗಾಲಯಗಳ ಜಾಲವನ್ನು ಚೀನಾ ಪಾಕಿಸ್ತಾನಕ್ಕೆ ಹೊರಗುತ್ತಿಗೆ ನೀಡಿದೆ ಎಂದು ವರದಿ ಮಾಡಿದೆ.

Artificial Coronavirus: ಐಐಎಸ್‌ಸಿಯಲ್ಲಿ ಕೃತಕ ಕೊರೋನಾ ವೈರಸ್‌ ಸೃಷ್ಟಿ..!

"ಸೇನೆಯಿಂದ ನಿರ್ವಹಿಸಲ್ಪಡುವ ಪಾಕಿಸ್ತಾನದ ಲ್ಯಾಬ್ ಮತ್ತು ಪಿಎಲ್‌ಎ ನಡೆಸುತ್ತಿರುವ ಪ್ರಯೋಗಾಲಯಗಳು ಮತ್ತು ಸಂಸ್ಥೆಗಳ ನಡುವಿನ ಜಂಟಿ ಸಹಯೋಗವು ವೈಜ್ಞಾನಿಕ ಪ್ರಯೋಗಗಳಿಗಾಗಿ ಅಲ್ಲ, ಜೈವಿಕ ಶಸ್ತ್ರಗಳನ್ನು ಸೃಷ್ಟಿ ಮಾಡಲು ನೀಡಲಾಗಿದೆ" ಎಂದು ವರದಿಯುಲ್ಲಿ ತಿಳಿಸಲಾಗಿದೆ.

Latest Videos

ಕೋವಿಡ್‌ ಆಯ್ತು, ಈಗ ಚಿಕಿತ್ಸೆಯೇ ಇಲ್ಲದ ಹೊಸ ವೈರಸ್‌ ಪತ್ತೆ..!

2020 ರಲ್ಲಿ ಪಾಕಿಸ್ತಾನವು ಅಂತಹ ವರದಿಗಳನ್ನು ಮೊದಲು ನಿರಾಕರಿಸಿದಾಗ ಈ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿಯು "ವರದಿಯಲ್ಲಿ ಉಲ್ಲೇಖಿಸಲಾದ ಪಾಕಿಸ್ತಾನದ ಜೈವಿಕ-ಸುರಕ್ಷತಾ ಮಟ್ಟ -3 (ಬಿಎಸ್ಎಲ್ -3) ಪ್ರಯೋಗಾಲಯದ ಬಗ್ಗೆ ಯಾವುದೇ ರಹಸ್ಯವಿಲ್ಲ' ಜಿಯೋ ಸುದ್ದಿ ಸಂಸ್ಥೆ ಈ ಹಿಂದೆ ವರದಿ ಮಾಡಿತ್ತು. ಪಾಕಿಸ್ತಾನವು ತನ್ನ ವಿಶ್ವಾಸವನ್ನು ಹೆಚ್ಚಿಸುವ ಕ್ರಮಗಳ ಸಲ್ಲಿಕೆಯಲ್ಲಿ ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಸಮಾವೇಶಕ್ಕೆ (BTWC) ರಾಜ್ಯಗಳ ಪಕ್ಷಗಳೊಂದಿಗೆ ಸೌಲಭ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ ಎಂದು ವಿದೇಶಾಂಗ ಇಲಾಖೆ ಹೇಳಿತ್ತು. ಆರೋಗ್ಯ ಅಪಾಯಗಳು, ವೈರಸ್‌ಗಳ ಕಣ್ಗಾವಲು ಮತ್ತು ಸಾಂಕ್ರಾಮಿಕ ಪಿಡುಗಿನ ತನಿಖೆಯ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿಯಿಂದ ರೋಗನಿರ್ಣಯ ಮತ್ತು ರಕ್ಷಣಾತ್ಮಕ ವ್ಯವಸ್ಥೆಯನ್ನು ಸುಧಾರಿಸಲು ಈ ಸೌಲಭ್ಯವನ್ನು ನಿರ್ಮಾಣ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿತ್ತು.

click me!