ವಿಶ್ವ ಸಂಸ್ಥೆಗೆ ಮತಾಂತರ ಬಿಸಿ; UN ನೌಕರರನ್ನು ಇಸ್ಲಾಂಗೆ ಮತಾಂತರಿಸಿದ ಪಾಕ್ ಸೇನಾಧಿಕಾರಿ!

By Suvarna News  |  First Published Jan 1, 2021, 3:31 PM IST

ಭಾರತದಲ್ಲಿ ಮಾತ್ರವಲ್ಲ ಇದೀಗ ವಿಶ್ವ ಸಂಸ್ಥೆಗೂ ಮತಾಂತರ ಬಿಸಿ ತಟ್ಟಿದೆ. ಯುನೈಟೆಡ್ ನೇಷನ್ಸ್ ಮಿಶನ್ ನೌಕರರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇದರ ಬೆನಲ್ಲೇ ಪಾಕಿಸ್ತಾನ ಸೇನಾಧಿಕಾರಿ ಮೇಲೆ ತನಿಖೆ ಆರಂಭಗೊಂಡಿದೆ.
 


ನವದೆಹಲಿ(ಜ.01): ಭಾರತದಲ್ಲಿ ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧಕ್ಕೆ ಕಾಯ್ದೆ ತರಲಾಗಿದೆ. ಇದು ಪರ ವಿರೋಧಕ್ಕೂ ಕಾರಣವಾಗಿದೆ. ಮತಾಂತರವೇ ಇಲ್ಲ, ಇನ್ನೂ ಅದರ ವಿರುದ್ಧ ಕಾನೂನು ಯಾಕೆ ಎಂದು ಪ್ರಶ್ನಿಸಿದವರು ಇದ್ದಾರೆ. ಇದೀಗ ಭಾರತದಲ್ಲಿ ಮಾತ್ರವಲ್ಲ, ವಿಶ್ವ ಸಂಸ್ಥೆಯಲ್ಲೂ ಮತಾಂತರ ಜೋರಾಗಿದೆ. ಈ ಕಾರಣದಿಂದ ಪಾಕಿಸ್ತಾನ ಸೇನಾಧಿಕಾರಿ ಇದೀಗ ತನಿಖೆ ಎದುರಿಸಬೇಕಾಗಿದೆ.

ಪಾಕ್‌ನಲ್ಲಿ ಪ್ರತಿ ವರ್ಷ 1000 ಬಾಲಕಿಯರ ಬಲವಂತದ ಮತಾಂತರ!...

Latest Videos

undefined

ರಿಪಬ್ಲಿಕನ್ ಆಫ್ ಕಾಂಗೋ ರಾಷ್ಟ್ರದಲ್ಲಿ ಕರ್ತವ್ಯದಲ್ಲಿರುವ ಪಾಕಿಸ್ತಾನ ಸೇನಾಧಿಕಾರಿ ಸಾಕಿಬ್ ಮುಷ್ತಾಕಿ, ಕಾಂಗೋದಲ್ಲಿ ವಿಶ್ವ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ನೌಕಕರನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ವಿಶ್ವ ಸಂಸ್ಥೆ ತನಿಖೆಗೆ ಆದೇಶಿಸಿದೆ.

ಮಧ್ಯ ಆಫ್ರಿಕಾದಲ್ಲಿ ಇಸ್ಲಾಂ ಅಲ್ಪ ಸಂಖ್ಯಾತ ಸಮುದಾಯವಾಗಿದೆ. ಕ್ರಿಶ್ಚಿಯನ್ ಸಮುದಾಯ ಹೆಚ್ಚಿರುವ ಈ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನಾ ಕರ್ನಲ್ ಸಾಕಿಬ್ ಮುಷ್ತಾಕಿ, ವಿಶ್ವ ಸಂಸ್ಥೆಯ ಕ್ರಿಶ್ಚಿಯನ್ ನೌಕರರನ್ನು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾನೆ. ಇಷ್ಟೇ ಅಲ್ಲ ಬೆದರಿಕೆ, ಹಣದ ಆಮಿಷ ನೀಡಿದ ಆರೋಪವೂ ಈ ಪಾಕ್ ಸೇನಾಧಿಕಾರಿ ಮೇಲೆ ಕೇಳಿ ಬಂದಿದೆ.

1999ರಲ್ಲಿ ಕಾಂಗೋದಲ್ಲಿ ವಿಶ್ವ ಸಂಸ್ಥ ತನ್ನ ಚಟುವಟಿಕೆ ಆರಂಭಿಸಿದ ಬಳಿಕ, ಅಲ್ಪ ಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯವನ್ನು ಬಹುಸಂಖ್ಯಾತ ಮಾಡಲು ಪಾಕಿಸ್ತಾನ ಅವಿರತ ಪ್ರಯತ್ನ ಮಾಡುತ್ತಿದೆ. ಈ ಕುರಿತು ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದೆ. ಇದೀಗ ಸೇನಾ ಅಧಿಕಾರಿಯೇ ಇಂತಹ ಕೆಲಸಕ್ಕೆ ಇಳಿದಿರುವುದು ವಿಶ್ವಸಂಸ್ಥೆಯನ್ನೇ ಬೆಚ್ಚಿ ಬೀಳಿಸಿದೆ. ಇದಕ್ಕಾಗಿ ಸಮಗ್ರ ತನಿಖೆಗೆ ಸೂಚಿಸಿದೆ.

click me!