
ಇಸ್ಲಾಮಾಬಾದ್/ಕಾಬೂಲ್: ಅಫ್ಘಾನಿಸ್ತಾನದ ಎರಡು ನಗರಗಳ ಮೇಲೆ ಪಾಕಿಸ್ತಾನ ಸೋಮವಾರ ವೈಮಾನಿಕ ದಾಳಿ ನಡೆಸಿದೆ. ಇದರಲ್ಲಿ ಮೂರು ಮಕ್ಕಳು ಮತ್ತು ಮಹಿಳೆಯರು ಸೇರಿ ಎಂಟು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಇತ್ತೀಚಿಗೆ ಪಾಕಿಸ್ತಾನದ ಕೆಲ ನಗರಗಳಲ್ಲಿ ನಡೆದ ಉಗ್ರ ದಾಳಿಯ ಹಿಂದೆ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿರುವ ಉಗ್ರರ ಕೈವಾಡ ಇದೆ ಎಂಬ ಆರೋಪದ ಮೇಲೆ ಪಾಕ್ ಈ ದಾಳಿ ನಡೆಸಿದೆ. ‘ಪಾಕಿಸ್ತಾನ ಗಡಿಯಲ್ಲಿರುವ ಅಫ್ಘಾನಿಸ್ತಾನ ಪ್ರಾಂತ್ಯದ ಪಾಕ್ತಿಕಾ ಮತ್ತು ಖೋಸ್ಟ್‌ನ ನಾಗರಿಕ ಮನೆಗಳ ಮೇಲೆ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವೈಮಾನಿಕ ದಾಳಿ ನಡೆದಿದೆ.
ನಿಷೇಧಿತ 6000 ಟಿಟಿಪಿ ಉಗ್ರರಿಗೆ ಆಫ್ಘನ್ ಆಶ್ರಯ
ಇಸ್ಲಾಮಾಬಾದ್: ನಿಷೇಧಿತ ಪಾಕಿಸ್ತಾನ ತೆಹ್ರೀಕ್-ಇ-ತಾಲಿಬಾನ್‌ನ 5000- 6000 ಉಗ್ರರು ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಆಫ್ಘಾನಿಸ್ತಾನದಲ್ಲಿನ ಪಾಕಿಸ್ತಾನದ ವಿಶೇಷ ಪ್ರತಿನಿಧಿ ಆಸಿಫ್ ದುರಾನಿ ಈ ಹಿಂದೆ ತಿಳಿಸಿದ್ದರು. ಟಿಟಿಪಿ ಉಗ್ರರು ಆಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿದ್ದು, ಅವರ ಕುಟುಂಬ ಸದಸ್ಯರ ಸಂಖ್ಯೆಯನ್ನೂ ಸೇರಿಸಿದರೆ ಅವರ ಪ್ರಮಾಣ 70000ಕ್ಕೆ ಏರುತ್ತದೆ ಎಂದಿದ್ದರು. ಟಿಟಿಪಿ ಉಗ್ರಗಾಮಿ ಗುಂಪು ಪಾಕಿಸ್ತಾನದ ಸಂವಿಧಾನವನ್ನು ಒಪ್ಪಲು ಸಿದ್ಧರಿಲ್ಲದ ಕಾರಣ ನಿಷೇಧಿತ ಟಿಟಿಪಿ ಉಗ್ರರೊಂದಿಗೆ ಪಾಕಿಸ್ತಾನದ ಶಾಂತಿ ಮಾತುಕತೆ ವಿಫಲವಾಗಿತ್ತು.
ನಮಗೆ 3 ಸ್ಟೇಡಿಯಂ ನಿರ್ವಹಿಸಲು ಆಗಲ್ಲ, ಧರ್ಮಶಾಲಾದಂತ ಸ್ಟೇಡಿಯಂ ನಿರ್ಮಾಣ ಕನಸಷ್ಟೇ: ವಾಸೀಂ ಅಕ್ರಂ
ಪಾಕ್ ಆರ್ಥಿಕ ದುಸ್ಥಿತಿ ಕಾರಣ ಸಂಬಳ ಪಡೆಯಲ್ಲ: ಜರ್ದಾರಿ ಘೋಷಣೆ
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ದೇಶದಲ್ಲಿ ಆರ್ಥಿಕ ದುಸ್ಥಿತಿ ಇರುವ ಕಾರಣ ತಮ್ಮ ಅಧಿಕಾರ ಅವಧಿಯಲ್ಲಿ ಸಂಬಳ ಸ್ವೀಕರಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಮಂಗಳವಾರ ಈ ಕುರಿತು ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಪಾಕ್ ಅಧ್ಯಕ್ಷರ ಕಚೇರಿ, ದೇಶ ಹಣಕಾಸಿನ ತೊಂದರೆಯಲ್ಲಿರುವಾಗ ನಾವು ವೇತನ ಪಡೆಯುವುದು ಸರಿಯಲ್ಲ. ದೇಶದ ವಿತ್ತೀಯ ಸ್ಥಿತಿ ಮೇಲೆ ಹೆಚ್ಚು ಭಾರ ಕೊಡಬಾರದು. ಈ ನಿಟ್ಟಿನಲ್ಲಿ ಅಧಿಕಾರದ ಅವಧಿಯಲ್ಲಿ ಸಂಬಳ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಇವರೊಂದಿಗೆ ಸಚಿವ ಮೊಹ್ಸಿನ್ ನಕ್ವಿ ಸಹ ಸಂಬಳ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಒಂದು ಸೈಡ್ ಮಾತ್ರ ನೋಟು ಪ್ರಿಂಟ್: ಹಣದುಬ್ಬರದ ನಡುವೆ ಪಾಕಿಸ್ತಾನ ನ್ಯಾಷನಲ್ ಬ್ಯಾಂಕ್‌ನ ದೊಡ್ಡ ಎಡವಟ್ಟು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ