ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಂಧನ

By Girish Goudar  |  First Published Apr 5, 2023, 4:51 AM IST

ಮ್ಯಾನಹಾಟನ್‌ ಜಿಲ್ಲಾ ಅಟಾರ್ನಿಯ ಕೋರ್ಟ್‌ ಸಭಾಂಗಣದಲ್ಲಿ ಟ್ರಂಪ್‌ ಶರಣಾದರು.  ಬಳಿಕ ಅವರನ್ನು ಬಂಧಿಸಿ ಬಿಗಿ ಪೊಲೀಸ್‌ ಭಧ್ರತೆಯಲ್ಲಿ ವಿಚಾರಣಗೆ ಕರೆದುಕೊಂಡು ಹೋಗಲಾಯಿತು.


ನ್ಯೂಯಾರ್ಕ್(ಏ.05): ನೀಲಿಚಿತ್ರಗಳ ನಟಿ ಸ್ಟಾರ್ಮಿ ಡೇನಿಯಲ್ಸ್‌ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (76) ಅವರನ್ನು ಸ್ಥಳೀಯ ಪೊಲೀಸರು ಮಂಗಳವಾರ ಬಂಧನಕ್ಕೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಟ್ರಂಪ್‌ ವಿರುದ್ಧ ಕೇಳಿಬಂದ ಆರೋಪ ತನಿಖೆ ನಡೆಸಲು ಸೂಕ್ತವಾಗಿದೆ ಎಂದು ಇತ್ತೀಚೆಗೆ ಗ್ರ್ಯಾಂಡ್‌ ಜ್ಯೂರಿ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಭಾರೀ ಬಿಗಿಭದ್ರತೆಯೊಂದಿಗೆ ಟ್ರಂಪ್‌ ಮಂಗಳವಾರ ಮ್ಯಾನ್‌ಹಟನ್‌ ನ್ಯಾಯಾಲಯಕ್ಕೆ ಹಾಜರಾದರು. ಈ ವೇಳೆ ಅವರನ್ನು ಬಂಧಿಸಿದ ಪೊಲೀಸರು ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ಸ್ಥಳೀಯ ನ್ಯಾಯಾಲಯ ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದೂ ಸೇರಿದಂತೆ ಹಣ ವಂಚನೆಯ 30ಕ್ಕೂ ಹೆಚ್ಚು ದೋಷಾರೋಪಗಳನ್ನು ಹೊರಿಸಿತು.

Tap to resize

Latest Videos

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಜೈಲಿಗೆ ಹೋಗ್ತಾರೆಂದು ಕೇಳಿ ಎಕ್ಸೈಟ್‌ ಆದ ಖ್ಯಾತ ನೀಲಿ ತಾರೆ..!

ಆದರೆ ಈ ಆರೋಪಗಳನ್ನು ಟ್ರಂಪ್‌ ಸ್ಪಷ್ಟವಾಗಿ ಅಲ್ಲಗಳೆದದರು. ಆದರೂ ಕ್ರಿಮಿನಲ್‌ ಆರೋಪಕ್ಕೆ ತುತ್ತಾದ ಅಮೆರಿಕದ ಮೊದಲ ಮಾಜಿ/ಹಾಲಿ ಅಧ್ಯಕ್ಷ ಎಂಬ ಕಳಂಕಕ್ಕೆ ಟ್ರಂಪ್‌ ತುತ್ತಾದರು. ಆದರೆ ಅಮೆರಿಕ ಮಾಜಿ ಅಧ್ಯಕ್ಷ ಮತ್ತು ಗುಪ್ತಚರ ಸಂಸ್ಥೆಯ ಭದ್ರತೆ ಹೊಂದಿರುವ ಕಾರಣ ಟ್ರಂಪ್‌ ಅವರನ್ನು ಜೈಲಿಗೆ ಕಳುಹಿಸದೇ ಬಿಟ್ಟು ಕಳುಹಿಸಲಾಯಿತು.

ಏನಿದು ಪ್ರಕರಣ?

ದಶಕಗಳ ಹಿಂದೆ ಗಾಲ್‌್ಫ ಪಂದ್ಯಾವಳಿ ಆಡಲು ತೆರಳಿದ್ದ ವೇಳೆ ನೀಲಿ ಚಿತ್ರಗಳ ನಟಿ ಸ್ಟಾರ್ಮಿ ಜೊತೆ ಟ್ರಂಪ್‌ ಲೈಂಗಿಕ ಸಂಪರ್ಕ ಬೆಳೆಸಿದ್ದರು. 2011ರಲ್ಲಿ ಸ್ಟಾರ್ಮಿ ಈ ವಿಷಯದ ಕುರಿತು ಬೆಳಕು ಚೆಲ್ಲಿದ್ದರು. ಈ ನಡುವೆ 2016ರಲ್ಲಿ ಟ್ರಂಪ್‌ ಚುನಾವಣಾ ಕಣಕ್ಕೆ ಇಳಿದ ವೇಳೆ, ಲೈಂಗಿಕ ಸಂಪರ್ಕದ ವಿಷಯ ಬಹಿರಂಗ ಮಾಡದಂತೆ ತಮ್ಮ ವಕೀಲರ ಮೂಲಕ ಸ್ಟಾರ್ಮಿಗೆ 1 ಕೋಟಿ ರು. ಹಣ ನೀಡಿದ್ದರು. ಈ ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗಿತ್ತು. ಟ್ರಂಪ್‌ ಪರವಾಗಿ ಹಣ ನೀಡಿದ್ದ ವಕೀಲರು ಕೂಡಾ ಇದನ್ನು ಒಪ್ಪಿಕೊಂಡಿದ್ದರು. 

ಫೋಟೋ, ಫಿಂಗರ್‌ಪ್ರಿಂಟ್‌ ಸಂಗ್ರಹ

ಕ್ರಿಮಿನಲ್‌ ಆರೋಪ ಹೊತ್ತವರ ವಿರುದ್ಧ ದೋಷಾರೋಪ ಹೊರಿಸುವ ವೇಳೆ ನಡೆಸುವ ಪ್ರಕ್ರಿಯೆಯ ಭಾಗವಾಗಿ ಪೊಲೀಸರ ತಂಡ ಟ್ರಂಪ್‌ರ ಫಿಂಗರ್‌ಪ್ರಿಂಟ್‌ (ಬೆರಳಚ್ಚು) ಮತ್ತು ಮಗ್‌ಶಾಟ್‌ (ಪಾಸ್‌ಪೋರ್ಚ್‌ ಫೋಟೋ) ಫೋಟೋ ಸಂಗ್ರಹಿಸಿತು.

ಟ್ರಂಪ್‌ ವಾದವೇನು?

ನಾನು ಸ್ಟರ್ಮಿ ಜೊತೆ ಯಾವುದೇ ನಂಟು ಹೊಂದಿಲ್ಲ. ನನ್ನ ಮೇಲಿನ ಆರೋಪ ಸಂಪೂರ್ಣ ರಾಜಕೀಯ ಪ್ರೇರಿತ. 2024ರ ಚುನಾವಣೆಯಲ್ಲಿ ನನ್ನ ಗೆಲುವನ್ನು ತಡೆಯಲು ಈ ತಂತ್ರ ರೂಪಿಸಲಾಗಿದೆ. ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ಪುತ್ರಿ ಈ ಹಿಂದೆ, ಹಾಲಿ ಅಮೆರಿಕ ಉಪಾಧ್ಯಕ್ಷೆ ಕಮಲ್ಯಾ ಹಾರಿಸ್‌ ಪರ ಪ್ರಚಾರ ನಡೆಸಿದ್ದರು. ನನ್ನ ವಿರುದ್ಧದ ಷಡ್ಯಂತ್ರದಲ್ಲಿ ಎಲ್ಲರೂ ಒಂದಾಗಿದ್ದಾರೆ ಎಂಬುದು ಟ್ರಂಪ್‌ ವಾದ.

ಅಮೆರಿಕ ಅಧ್ಯಕ್ಷ ಚುನಾವಣೆ: ಟ್ರಂಪ್‌ ವಿರುದ್ಧ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ

ಮುಂದೇನು?

ತಮ್ಮ ಮೇಲಿನ ಆರೋಪ ಒಪ್ಪಿದರೆ ಟ್ರಂಪ್‌ಗೆ ಶಿಕ್ಷೆಯಾಗಲಿದೆ. ಒಪ್ಪದೇ ಇದ್ದರೆ ಟ್ರಂಪ್‌ಗೆ ಕಾನೂನು ಹೋರಾಟ ನಡೆಸಲು ಕೋರ್ಚ್‌ ಅವಕಾಶ ನೀಡಲಿದೆ. ಹೀಗಾಗಿ ಒಂದಿಷ್ಟುವರ್ಷಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಒಳಪಡಲಿದೆ.

ಚುನಾವಣೆಗಿಳಿಯಲು ಅಡ್ಡಿ ಇಲ್ಲ

2024ರ ಅಮೆರಿಕ ಅಧ್ಯಕ್ಷ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಟ್ರಂಪ್‌ಗೆ ಈ ಪ್ರಕರಣ ಸಾಕಷ್ಟುಮುಳುವಾಗುವ ಸಾಧ್ಯತೆ ಇದೆ. ತಕ್ಷಣಕ್ಕೆ ಚುನಾವಣೆಗೆ ಸ್ಪರ್ಧಿಸಲು ಅಡ್ಡಿ ಇಲ್ಲವಾದರೂ, ಪ್ರಚಾರದ ವೇಳೆ ಎದುರಾಳಿಗಳು ಟ್ರಂಪ್‌ ವಿರುದ್ಧದ ಆರೋಪಗಳನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.

click me!