ತಾಲಿಬಾನ್ ಆಕ್ರಮಣದ ಬಳಿಕ ಆಫ್ಘಾನ್‌ನಲ್ಲಿ ಇಳಿಯಿತು ಮೊದಲ ಅಂತಾರಾಷ್ಟೀಯ ವಿಮಾನ!

By Suvarna NewsFirst Published Sep 13, 2021, 7:04 PM IST
Highlights
  • ಆಫ್ಘಾನಿಸ್ತಾನ ತಾಲಿಬಾನ್ ಕೈವಶವಾದ ಬಳಿಕ ರದ್ದಾಗಿದ್ದ ವಿಮಾನ ಸೇವೆ
  • ಒಂದು ತಿಂಗಳ ಬಳಿಕ ಕಾಬೂಲ್‌ನಲ್ಲಿ ಇಳಿದ ಮೊದಲ ಅಂತಾರಾಷ್ಟ್ರೀಯ ವಿಮಾನ
  • ಆಫ್ಘಾನಿಸ್ತಾನ ತೊರೆಯುವವರಲ್ಲಿ ಮೂಡಿದ ಆಶಾಕಿರಣ, 

ಕಾಬೂಲ್(ಸೆ.13): ಆಫ್ಘಾನಿಸ್ತಾನ ತೊರೆಯಲು ಹವಣಿಸುತ್ತಿರುವವರಲ್ಲಿ ಆಶಾಕಿರಣವೊಂದು ಮೂಡಿದೆ. ಕಾರಣ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಆಫ್ಘಾನಿಸ್ತಾನ ವಿಮಾನ ಸೇವೆ ಮತ್ತೆ ಆರಂಭಗೊಂಡಿದೆ. ಆಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾದ ಬಳಿಕ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಇದೀಗ ಕಾಬೂಲ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ವಿಮಾನ ಲ್ಯಾಂಡ್ ಆಗಿದೆ.

ತಾಲಿಬಾನ್‌ಗೆ ಸೆರೆ ಸಿಕ್ಕರೆ ನನ್ನ ತಲೆಗೆ ಗುಂಡಿಕ್ಕಿ;ಭಾವಿ ಪತಿಗೆ ಸೂಚಿಸಿದ್ದ ಆಫ್ಘಾನ್ ಪಾಪ್ ಸ್ಟಾರ್ !

ಇಂದು ಪಾಕಿಸ್ತಾನದ ವಿಮಾನ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಈ ಮೂಲಕ ಆಫ್ಘಾನಿಸ್ತಾನದಲ್ಲಿ ಬಂದಿಳಿದ ಮೊದಲ ಅಂತಾರಾಷ್ಟ್ರೀಯ ವಿಮಾನವಾಗಿದೆ. ಇಸ್ಲಾಮಾಬಾದ್‌ನಿಂದ ಹೊರಟ ಪಾಕಿಸ್ತಾನ ವಿಮಾನ ಕಾಬೂಲ್‌ಗೆ ಬಂದಿಳಿದಿದೆ. ಕಾಬೂಲ್‌ನಿಂದ ಈ ವಿಮಾನ 70 ಪ್ರಯಾಣಿಕರನ್ನು ಹೊತ್ತು ಪಾಕಿಸ್ತಾನಕ್ಕೆ ಮರಳಿದೆ.

70 ಪ್ರಯಾಣಿಕರಲ್ಲಿ ಹಲವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ದಿನ ಜೀವಂತವಾಗಿದ್ದೇವೆ ಅನ್ನೋದೆ ಖುಷಿ ಎಂದ ಹೆಸರು ಹೇಳಲು ಇಚ್ಚಿಸದ ಪ್ರಯಾಣಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂತಿರುಗುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ, ಸದ್ಯ ಆಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಮತ್ತೊಬ್ಬ ಪ್ರಯಾಣಿಕ ಹೇಳಿದ್ದಾರೆ.

ಪಂಜಶೀರ್‌ ಮೇಲೆ ತಾಲಿಬಾನ್ ದಾಳಿ; ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಸಹೋದರನ ಹತ್ಯೆ!

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಿದೆ. ಬದಲಾದ ತಾಲಿಬಾನ್ ಎಂದು ಘೋಷಣೆ ಮಾಡಿದ್ದ ಉಗ್ರರು, ಕ್ರೌರ್ಯ, ಹಲ್ಲೆ, ಹತ್ಯೆ ಹಾಗೇ ಮುಂದುವರಿದಿದೆ. ಇದರ ನಡುವೆ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಂಡಿದೆ. ಸದ್ಯ ಇಸ್ಲಾಮಾಬಾದ್-ಕಾಬೂಲ್-ಇಸ್ಲಾಮಾಬಾದ್ ಸೇವೆ ಮಾತ್ರ ಲಭ್ಯವಿದೆ.

ತಾಬಿಬಾನ್ ಆಕ್ರಮಣದ ಬಳಿಕ ಆಫ್ಘಾನಿಸ್ತಾನ ತೊರೆಯಲು ಬಹುತೇಕ ಪ್ರಜೆಗಳು ಹಾತೊರೆಯುತ್ತಿದ್ದಾರೆ. ಅಮೆರಿಕ ನಡೆಸಿದ ರಕ್ಷಣಾ ಕಾರ್ಯದಲ್ಲಿ ಸುಮಾರು 1.20 ಲಕ್ಷ ಮಂದಿ ದೇಶ ತೊರೆದು, ಇತರ ದೇಶಗಳಲ್ಲಿ ನಿರಾಶ್ರಿತರಾಗಿದ್ದಾರೆ. 

click me!