
ಇಂಗ್ಲೆಂಡ್(ನ.23): ಕೊರೋನಾ ವೈರಸ್ ವಿರುದ್ಧ ಹೋರಾಡಲು ಆಕ್ಸ್‌ಫರ್ಡ್ ಈಗಾಗಲೇ ಲಸಿಕೆ ಅಭಿವೃದ್ಧಿಯಲ್ಲಿ ನಿರತವಾಗಿದೆ. ಸತತ ಪ್ರಯತ್ನ ಹಾಗೂ ಸಂಶೋಧನೆಗೆ ಫಲ ಸಿಕ್ಕಿದೆ. ಆಕ್ಸ್‌ಫರ್ಡ್ ಲಸಿಕೆ 2 ಡೋಸ್‌ನಲ್ಲಿ ಶೇಕಡಾ 70 ರಷ್ಟು ಪರಿಣಾಮಕಾರಿ ಅನ್ನೋದು ಪ್ರಯೋಗದಲ್ಲಿ ಸಾಬೀತಾಗಿದೆ.
ಏಪ್ರಿಲ್‌ಗೆ ಆಕ್ಸ್‌ಫರ್ಡ್ ಲಸಿಕೆ ಮಾರುಕಟ್ಟೆಗೆ: 1000 ರೂ.ದರ?
ಆಕ್ಸ್‌ಫರ್ಡ್ ಯುನಿವರ್ಸಿಟಿ ಆತಂರಿಕ ಮಾಹಿತಿ ಬಹಿರಂಗ ಪಡಿಸಿದೆ. ಆಕ್ಸ್‌ಫರ್ಡ್ ಲಸಿಕೆ ಕೇವಲ 2 ಡೋಸೇಜ್‌ನಲ್ಲಿ ಕೊರೋನಾ ವಿರುದ್ಧ 70.4% ಪರಿಣಾಮಕಾರಿಯಾಗಿದೆ. 3 ಹಂತದ ಡೋಸೇಜ್ ಲಸಿಕೆ ತೆಗದುಕೊಂಡರೆ ಶೇಕಡಾ 90 ರಷ್ಟು ಪರಿಣಾಮಕಾರಿಯಾಗಲಿದೆ ಎಂದು ಆಕ್ಸ್‌ಫರ್ಡ್ ಯುನಿವರ್ಸಿಟಿ ಹೇಳಿದೆ.
ಇನ್ನು ಆಕ್ಸ್‌ಫರ್ಡ್ ಲಸಿಕೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಜನಸಾಮಾನ್ಯರಿಗೂ ಸುಲಭವಾಗಿ ಸಿಗಲಿದೆ. ಆಕ್ಸ್‌ಫರ್ಡ್ ಯುನಿವರ್ಸಿಟಿ ಲಸಿಕೆ ಇದೀಗ ಕೊರೋನಾ ಸೋಂಕಿತರಿಗೆ ಅಶಾಕಿರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ