ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ 5 ವರ್ಷದಲ್ಲಿ ಅರ್ಧ ಕುಸಿತ!

Published : Jun 10, 2022, 03:00 AM IST
ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ 5 ವರ್ಷದಲ್ಲಿ ಅರ್ಧ ಕುಸಿತ!

ಸಾರಾಂಶ

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ, ಅಲ್ಪಸಂಖ್ಯಾತರಾಗಿರುವ ಹಿಂದುಗಳ ಸಂಖ್ಯೆ ಐದೇ ವರ್ಷದಲ್ಲಿ ಅರ್ಧಕ್ಕರ್ಧ ಕುಸಿತವಾಗಿದೆ. 2017ರಲ್ಲಿ ನಡೆದ ಜನಗಣತಿಯಲ್ಲಿ 44.4 ಲಕ್ಷ ಇದ್ದ ಜನಸಂಖ್ಯೆ ಈಗ 22 ಲಕ್ಷಕ್ಕೆ ಕುಸಿದ ವಿಚಾರ ಬೆಳಕಿಗೆ ಬಂದಿದೆ.

ಪೇಷಾವರ್‌ (ಜೂ.10): ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ, ಅಲ್ಪಸಂಖ್ಯಾತರಾಗಿರುವ ಹಿಂದುಗಳ ಸಂಖ್ಯೆ ಐದೇ ವರ್ಷದಲ್ಲಿ ಅರ್ಧಕ್ಕರ್ಧ ಕುಸಿತವಾಗಿದೆ. 2017ರಲ್ಲಿ ನಡೆದ ಜನಗಣತಿಯಲ್ಲಿ 44.4 ಲಕ್ಷ ಇದ್ದ ಜನಸಂಖ್ಯೆ ಈಗ 22 ಲಕ್ಷಕ್ಕೆ ಕುಸಿದ ವಿಚಾರ ಬೆಳಕಿಗೆ ಬಂದಿದೆ.

‘ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಈಗ ಸುಮಾರು 22 ಲಕ್ಷದಷ್ಟಿದೆ. ಇದು ಪಾಕಿಸ್ತಾನದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ.1.18ರಷ್ಟಿದೆ’ ಎಂದು ಶಾಂತಿ ಮತ್ತು ನ್ಯಾಯಯುತ ಪಾಕಿಸ್ತಾನ ಕೇಂದ್ರ ಬಿಡುಗಡೆ ಮಾಡಿರುವ ವರದಿ ಹೇಳಿದೆ. 2017ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ.2.14 ಇತ್ತು.

ಇನ್ನು 1947ರಲ್ಲಿ ಸ್ವತಂತ್ರಗೊಂಡಾಗ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ.20ರಷ್ಟಿತ್ತು (4.38 ಲಕ್ಷ ಜನಸಂಖ್ಯೆ). ಆದರೆ ಈಗಿನ ಅಂಕಿ ಅಂಶ ನೋಡಿದರೆ ಹಿಂದೂಗಳ ಪರಿಸ್ಥಿತಿ ಹೇಗಿದೆ ಎಂಬುದು ಇದರಿಂದ ವಿದಿತವಾಗುತ್ತದೆ.

24 ಗಂಟೆಯಲ್ಲಿ 2 ಮದುವೆಯಾದ ಪಾಕ್ ಸಂಸದ ನಿಧನ!

ಯಾವ ಧರ್ಮೀಯರು ಎಷ್ಟು: ಪಾಕಿಸ್ತಾನದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.5ಕ್ಕಿಂತ ಕಡಿಮೆ ಇರುವ ಸಮುದಾಯವನ್ನು ಅಲ್ಪಸಂಖ್ಯಾತರು ಎಂದು ಗುರುತಿಸಲಾಗುತ್ತದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ 18.68 ಕೋಟಿಯಷ್ಟಿದೆ. ಇದರಲ್ಲಿ ಮುಸ್ಲಿಮರ ಸಂಖ್ಯೆ 18.25 ಕೋಟಿಯಷ್ಟಿದೆ. ಅಲ್ಲದೇ ಪಾಕಿಸ್ತಾನದಲ್ಲಿ ಒಟ್ಟು 17 ವಿವಿಧ ಧರ್ಮಗಳು ಮತ್ತು 1,400 ಮಂದಿ ನಾಸ್ತಿಕರಿದ್ದಾರೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿ 22,10,566 ಮಂದಿ ಹಿಂದುಗಳಿದ್ದಾರೆ. 18 ಸಾವಿರ ಕ್ರೈಸ್ತರು, 1.88 ಲಕ್ಷ ಅಹಮದಿಗಳು, 74 ಸಾವಿರ ಸಿಖ್ಖರು, 14 ಸಾವಿರ ಭಾಯಿಸ್‌, 3917 ಮಂದಿ ಪಾರ್ಸಿಗಳಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೇ 11 ಅಲ್ಪಸಂಖ್ಯಾತ ಸಮುದಾಯಗಳ ಸಂಖ್ಯೆ 2 ಸಾವಿರ ಜನಸಂಖ್ಯೆಗಿಂತ ಕಡಿಮೆ ಇದೆ. 1,787 ಬೌದ್ಧರು, 628 ಶಿಂಟೋಗಳು, 628 ಯಹೂದಿಗಳು, ಆಫ್ರಿಕಾದ ಧರ್ಮಗಳನ್ನು ಅನುಸರಿಸುವವರು 1,418, ಕೆಲಾಶಾ ಸಮುದಾಯದ 1,522 ಮತ್ತು ಜೈನ ಧರ್ಮದ 6 ಜನರಿದ್ದಾರೆ.

ಹಿಂದೂಗಳು ಸೇರಿದಂತೆ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಬಡತನ ರೇಖೆಗಿಂತ ಕೆಳಗಿದ್ದು, ಇವರ ಪ್ರಾತಿನಿಧ್ಯ ಅತ್ಯಲ್ಪವಾಗಿದೆ. ಬಹುಪಾಲು ಅಲ್ಪಸಂಖ್ಯಾತ ಸಮುದಾಯಗಳು ಸಿಂಧ್‌ ಪ್ರಾಂತ್ಯದಲ್ಲಿ ವಾಸಿಸುತ್ತಿವೆ ಎಂದು ವರದಿ ತಿಳಿಸಿದೆ.

ಪಾಕ್‌ನ ಅಲ್ಪಸಂಖ್ಯಾತರ ಸಂಖ್ಯೆ
ಹಿಂದುಗಳು 22 ಲಕ್ಷ
ಅಹಮದಿಗಳು 1.88 ಲಕ್ಷ
ಸಿಖ್ಖರು 74 ಸಾವಿರ
ಪಾರ್ಸಿ 3900
ಬೌದ್ಧರು 1787
ಯಹೂದಿಗಳು 628
ಜೈನರು 6

Hindu Temple ಕಿಡಿಗೇಡಿಗಳ ದಾಳಿಗೆ ಪಾಕಿಸ್ತಾನದ ಹಿಂದೂ ದೇವಾಲಯ ಸಂಪೂರ್ಣ ಧ್ವಂಸ!

ಕರಾಚಿಯಲ್ಲಿ ಹಿಂದು ದೇವತೆ ಮೂರ್ತಿ ಧ್ವಂಸ: ಪಾಕಿಸ್ತಾನದ ಕರಾಚಿಯಲ್ಲಿ ಮಾರಿ ಮಾತಾ ಮಂದಿರ ಎಂಬ ಹಿಂದುಗಳ ದೇವಾಲಯದ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳು ಮಾತೆಯ ವಿಗ್ರಹವನ್ನು ನಾಶಪಡಿಸಿದ್ದಾರೆ. ಈ ಘಟನೆಯಿಂದ ಹಿಂದುಗಳಲ್ಲಿ ಭೀತಿ ಮೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ