
ಕಬೂಲ್(ಆ.08): ಅಫ್ಘಾನ್ ವಾಯುಪಡೆಯು ಶೆಬರ್‌ಜೆನ್ ನಗರದಲ್ಲಿ ಏರ್‌ಸ್ಟ್ರೈಕ್ ನಡೆಸಿ ತಾಲಿಬಾನ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಿಂದ ತಾಲಿಬಾನಿಯರಿಗೆ ಅಪಾಯ ಹಾನಿಯುಂಟಾಗಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿಯಲ್ಲಿ 200 ಕ್ಕೂ ಹೆಚ್ಚು ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಅಧಿಕಾರಿ ಫವಾದ್ ಅಮನ್ ಟ್ವೀಟ್ ಈ ಬಗ್ಗೆ ಮಾತನಾಡಿದ್ದು, "ಶನಿವಾರ ಸಂಜೆ ತಾಲಿಬಾನಿಯರ ಶಿಬಿರಗಳ ಮೇಲೆ ವಾಯುದಾಳಿ ನಡೆಸಿದ್ದು, ಈ ದಾಳಿಯಲ್ಲಿ 200 ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಶೆಬರ್‌ಜೆನ್ ನಗರದಲ್ಲಿ ಹತರಾಗಿದ್ದಾರೆ. ಈ ದಾಳಿಯಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡುಗಳಿದ್ದ ಶಿಬಿರದ ಮೇಲೆ ದಾಳಿ ನಡೆಸಿದ್ದು, ಉಗ್ರರ 100 ಕ್ಕೂ ಹೆಚ್ಚು ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
ಬಿ -52 ಬಾಂಬರ್ ಶನಿವಾರ ಸಂಜೆ 6.30 ಕ್ಕೆ ಜವಾಜಾನ್ ಪ್ರಾಂತ್ಯದ ಶೆಬರ್ಜೆನ್ ಪಟ್ಟಣದಲ್ಲಿ ತಾಲಿಬಾನ್ ಕೂಟವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದು "ಇಂದು ಸಂಜೆ 6: 30 ಕ್ಕೆ ಜವಾಜಾನ್ ಪ್ರಾಂತ್ಯದ ಶೆಬರ್‌ಗಾನ್ ನಗರದಲ್ಲಿ ತಾಲಿಬಾನ್ ಕೂಟವನ್ನು ಬಿ -52 ವಿಮಾನವು ಗುರಿಯಾಗಿಸಿಕೊಂಡಿದೆ. ಯುಎಸ್ ವಾಯುಪಡೆಯ ವೈಮಾನಿಕ ದಾಳಿಯ ಪರಿಣಾಮವಾಗಿ ಭಯೋತ್ಪಾದಕರಿಗೆ ಭಾರೀ ಹಾನಿಯಾಗಿದೆ' ಎಂದಿದ್ದಾರೆ.
ಈ ಹಿಂದೆ, ಗಜನಿ ಪ್ರಾಂತೀಯ ಕೇಂದ್ರದ ಹೊರವಲಯದಲ್ಲಿ ಪಾಕಿಸ್ತಾನದ ಭಯೋತ್ಪಾದಕನನ್ನು ಅಫ್ಘಾನ್ ಕಮಾಂಡೋ ಪಡೆ ಬಂಧಿಸಿತ್ತು. ಆತ ಭಯೋತ್ಪಾದಕ ಚಟುವಟಿಕೆ ಮತ್ತು ನಾಗರಿಕರನ್ನು ಕೊಲ್ಲುವುದರಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಕೇಳಿ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ