ಬೈಡೆನ್‌ ಹೊಸ ಸಮಿತಿಗೆ 20 ಭಾರತೀಯರ ನೇಮಕ!

Published : Nov 12, 2020, 11:57 AM IST
ಬೈಡೆನ್‌ ಹೊಸ ಸಮಿತಿಗೆ 20 ಭಾರತೀಯರ ನೇಮಕ!

ಸಾರಾಂಶ

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌| ಬೈಡೆನ್‌ ಹೊಸ ಸಮಿತಿಗೆ 20 ಭಾರತೀಯರ ನೇಮಕ| ‘ಇಲಾಖೆಗಳ ಪರಿಶೀಲನಾ ತಂಡ’ಗಳ ಸದಸ್ಯರನ್ನಾಗಿ 20 ಭಾರತೀಯ ಅಮೆರಿಕನ್ನರನ್ನು ನೇಮಕ 

ವಾಷಿಂಗ್ಟನ್‌(ನ.12): ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಅವರು ಸರ್ಕಾರದ ಹಲವು ಇಲಾಖೆಗಳು ಕೈಗೊಳ್ಳುವ ಕ್ರಮಗಳ ಪರಿಶೀಲನೆಗಾಗಿ ರಚಿಸಿರುವ ‘ಇಲಾಖೆಗಳ ಪರಿಶೀಲನಾ ತಂಡ’ಗಳ ಸದಸ್ಯರನ್ನಾಗಿ 20 ಭಾರತೀಯ ಅಮೆರಿಕನ್ನರನ್ನು ನೇಮಕ ಮಾಡಿದ್ದಾರೆ.

ಇದರಲ್ಲಿ ತಂಡದ ಮುಖ್ಯಸ್ಥನ್ನಾಗಿ ಮೂವರನ್ನು ನೇಮಿಸಲಾಗಿದೆ. ಸರ್ಕಾರದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ಸುಗಮವಾಗಿರಲು ಈ ತಂಡವನ್ನು ರಚಿಸಿರುವುದಾಗಿ ಬೈಡೆನ್‌ ಅವರ ತಂಡ ತಿಳಿಸಿದೆ. ನೂರಕ್ಕೂ ಹೆಚ್ಚು ಸದಸ್ಯರಿರುವ ಪರಿಶೀಲನಾ ತಂಡದಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರಿದ್ದಾರೆ.

ಎಲ್‌ಜಿಬಿಟಿ ಸಮುದಾಯ, ಅಂಗವಿಕಲರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸುವ ಅಂದಾಜು ಶೇ.40ರಷ್ಟುಸದಸ್ಯರಿದ್ದಾರೆ. ಅರ್ಜುನ್‌ ಮುಜುಂದಾರ್‌, ರಾಹುಲ್‌ ಗುಪ್ತಾ ಮತ್ತು ಕಿರಣ್‌ ಅಹುಜಾ ತಂಡಗಳ ಭಾರತೀಯ ಮುಖ್ಯಸ್ಥರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್