ಅಮ್ಯೂಸ್‌ಮೆಂಟ್ ಪಾರ್ಕ್‌ನ ಫನ್‌ ರೈಡ್‌ ವೇಳೆ ಮಗನ ಸಾವು, ಪೋಷಕರಿಗೆ ಸಿಕ್ತು 2624 ಕೋಟಿ ಪರಿಹಾರ!

By Santosh Naik  |  First Published Dec 7, 2024, 5:58 PM IST

ಅಮೆರಿಕದ ಓರ್ಲಾಂಡೋ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಫನ್‌ ರೈಡ್‌ ಮಾಡುವ ವೇಳೆ 14 ವರ್ಷದ ಹುಡುಗನೊಬ್ಬ ಸಾವು ಕಂಡಿದ್ದ. ಇದಕ್ಕೆ ಕೋರ್ಟ್ ಪೋಷಕರಿಗೆ 310 ಮಿಲಿಯನ್‌ ಡಾಲರ್‌ ಪರಿಹಾರ ನೀಡುವಂತೆ ಆದೇಶ ನೀಡಿದೆ.


ನ್ಯೂಯಾರ್ಕ್‌ (ಡಿ.7): ಓರ್ಲಾಂಡೋ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಫನ್‌ ರೈಡ್‌ ಮಾಡುವ ವೇಳೆ 14 ವರ್ಷದ ಮಿಸ್ಸೌರಿ ಬಾಲಕ ದಾರುಣವಾಗಿ ಸಾವು ಕಂಡಿದ್ದ. 2022ರಲ್ಲಿ ನಡೆದ ಈ ಘಟನೆಯ ಬಗ್ಗೆ ಅಮೆರಿಕದ ಕೋರ್ಟ್‌ ತೀರ್ಪು ನೀಡಿದ್ದು, ಆತನ ಪೋಷಕರಿಗೆ 310 ಮಿಲಿಯನ್‌ ಡಾಲರ್‌ ಅಂದರೆ, 2624 ಕೋಟಿ ರೂಪಾಯಿ ಪರಿಹಾರವಾಗಿ ನೀಡುವಂತೆ ಅಮ್ಯೂಸ್‌ಮೆಂಟ್‌ ಪಾರ್ಕ್‌ನ ಆಸ್ಟ್ರಿಯಾ ದೇಶದ ಬಿಲ್ಡರ್‌ಗೆ ಆದೇಶ ನೀಡಿದೆ. ಕಳೆದ ಗುರುವಾರ ಆರೆಂಜ್‌ ಕೌಂಟಿ ಜ್ಯೂರಿ ಈ ಅದೇಶ ನೀಡಿದೆ. ಮ್ಯಾನುಫ್ಯಾಕ್ಟರರ್‌ ಆಗಿರುವ ಫನ್‌ಟೈಮ್‌ ತಲಾ 155 ಮಿಲಿಯನ್‌  ಡಾಲರ್‌ ಹಣವನ್ನು 14 ವರ್ಷದ ಬಾಲಕ ಟೈರ್‌ ಸ್ಯಾಂಪ್ಸನ್‌ ಅವರ ತಂದೆ ತಾಯಿ ಆಗಿರುವ ನೆಕಿಯಾ ಡೊಡ್‌ ಹಾಗೂ ಯಾರ್ನೆಲ್‌ ಸ್ಯಾಂಪ್ಸನ್‌ ಅವರಿಗೆ ನೀಡಬೇಕು ಎಂದು ಆದೇಶ ನೀಡಿದೆ. ಟೈರ್‌ ಸ್ಯಾಂಪ್ಸನ್‌ 2022ರ ಮಾರ್ಚ್‌ 24 ರಂದು ಸಾವು ಕಂಡಿದ್ದ. ಐಕಾನ್‌ ಪಾರ್ಕ್‌ನಲ್ಲಿದ್ದ ಓರ್ಲಾಂಡೋ ಫ್ರೀ ಫಾಲ್‌ ರೈಡ್‌ನಲ್ಲಿ 70 ಫೀಟ್‌ ಮೇಲಿನಿಂದ ಬಿದ್ದು ಅಸುನೀಗಿದ್ದ. ವಿಚಾರಣೆ ಕೇವಲ ಒಂದೇ ದಿನ ನಡೆದಿದ್ದು, ಫನ್‌ಟೈಮ್‌ ಈ ಕೇಸ್‌ನ ಪರವಾಗಿ ವಾದ ಮಾಡಲು ಕೋರ್ಟ್‌ಗೆ ಬಂದಿರಲಿಲ್ಲ. 

ಐಕಾನ್‌ ಪಾರ್ಕ್‌, ತನ್ನ ಸ್ಥಳವನ್ನು ಓರ್ಲಾಂಡೋ ಸ್ಲಿಂಗ್‌ಶಾಟ್‌ಗೆ ಜಾಗ ನೀಡಿತ್ತು. ಇವರೇ ರೈಡ್‌ಗೆ ಮಾಲೀಕರು ಹಾಗೂ ಆಪರೇಟರ್‌ ಆಗಿದ್ದರು. ಈಗಾಗಲೇ ಸ್ಯಾಂಪ್ಸನ್‌ ಕುಟುಂಬದೊಂದಿಗೆ ಬಹಿರಂಗಪಡಿಸದ ಮೊತ್ತದೊಂದಿಗೆ ಕೇಸ್‌ಅನ್ನು ಸೆಟಲ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Tap to resize

Latest Videos

ಜ್ಯೂರಿ ನಿರ್ಧಾರವೇ ನಾವು ತುಂಬಾ ವಾದ ಮಾಡಿದ್ದೇವೆ ಅನ್ನೋದನ್ನು ತೋರಿಸಿದೆ. ಟೈರ್‌ ಸಾವು, ದೊಡ್ಡ ನಿರ್ಲಕ್ಷ್ಯತನದಿಂದ ಸಂಭವಿಸಿದೆ. ಸುರಕ್ಷತೆಗಿಂತ ಆದಾಯವೇ ಮುಖ್ಯ ಎಂದಾಗ ಮಾತ್ರ ಈ ರೀತಿಯ ಘಟನೆ ಆಗುತ್ತದೆ' ಎಂದು ಕುಟುಂಬದ ಪರ ವಕೀಲರಾಗಿರುವ ಬೆನ್‌ ಕ್ರುಂಪ್‌ ಹಾಗೂ ನಟಾಲಿ ಜಾಕ್ಸನ್‌ ಹೇಳಿದ್ದಾರೆ. ರೈಡ್‌ ನಡೆಸುವವರು ಜನರನ್ನು ರಕ್ಷಿಸುವ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದ್ದಾರೆ, ಮತ್ತು ಫಲಿತಾಂಶವು ಅವರು ಪರಿಣಾಮಗಳನ್ನು ಎದುರಿಸುವುದನ್ನು ಖಚಿತಪಡಿಸುತ್ತದೆ ಎಂದಿದ್ದಾರೆ.

ಕುಟುಂಬವು ಈಗ ಹಾನಿಯನ್ನು ಸಂಗ್ರಹಿಸಲು ಆಸ್ಟ್ರಿಯನ್ ನ್ಯಾಯಾಲಯದಿಂದ ಆದೇಶವನ್ನು ಪಡೆಯಬೇಕಾಗಿದೆ. ಈ ಬಗ್ಗೆ ಫನ್‌ ಟೈಮ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಪನಿಯ ವೆಬ್‌ಸೈಟ್ ವೊಮ್ಯಾಟ್ರಾನ್, ಸ್ಲಿಂಗ್ ಶಾಟ್ ಮತ್ತು ಚೋಸ್ ಪೆಂಡಲ್ ಎಂಬ ಹೆಸರಿನ ಆಕರ್ಷಣೆಗಳನ್ನು ಒಳಗೊಂಡಂತೆ ಹೆಚ್ಚಿನ ವೇಗದಲ್ಲಿ ತಿರುಗುವ ಹಾಗೂ ಅತೀ ಎತ್ತರದಿಂದ ಗ್ರಾಹಕರನ್ನು ಕೆಳಗೆ ಹಾಕುವ, ಅವರನ್ನು ಸ್ಪಿನ್‌ ಮಾಡುವ ಥ್ರಿಲ್‌ ರೈಡ್‌ಗಳನ್ನು ತಯಾರಿಸುತ್ತದೆ ಎಂದು ತಿಳಿಸಿದೆ.

ಫುಟ್‌ಬಾಲ್‌ ಪ್ಲೇಯರ್‌ ಆಗಿದ್ದ ಸ್ಯಾಂಪ್ಸನ್‌, 6 ಫೀಟ್‌ 2 ಇಂದು ಎತ್ತರ ಹಾಗೂ 173 ಕೆಜಿ ತೂಕವಿಲ್ಲ. ಸೇಂಟ್‌ ಲೂಯಿಸ್‌ ಪ್ರದೇಶದ ಸ್ಪ್ರಿಂಗ್‌ ಬ್ರೇಕ್‌ ಸಮಯದಲ್ಲಿ ಓರ್ಲಾಂಡೋಗೆ ಭೇಟಿ ನೀಡಿದ್ದ. ಈ ಪ್ರದೇಶದ ಹೊರವಲಯದಲ್ಲಿದ್ದ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ಸ್ನೇಹಿತರೊಂದಿಗೆ ತೆರಳಿದ್ದ. ಓರ್ಲಾಂಡೋ ಫ್ರೀ ಫಾಲ್‌ ಎನ್ನುವ ಥ್ರಿಲ್‌ ರೈಡ್‌ಗೆ ಟೈರ್‌ ಏರಿದ್ದ. ಒಂದು ಟವರ್‌ಗೆ ಕಟ್ಟಿದ್ದ ಸೀಟ್‌ಗಳಲ್ಲಿ ಒಟ್ಟು 30 ಮಂದಿ ರೈಡರ್‌ಗಳಿದ್ದರು. ಅವರ ಭುಜಕ್ಕೆ ಭದ್ರತಾ ಪಟ್ಟ ಕೂಡ ಇದ್ದವು. ಇವರನ್ನು 430 ಫೀಟ್‌ ಎತ್ತರಿಂದ ಡ್ರಾಪ್‌ ಮಾಡುವ ರೈಡ್‌ ಇದಾಗಿತ್ತು. ಆದರೆ, ಇದಕ್ಕೆ ಸೀಟ್‌ ಬೆಲ್ಟ್‌ ಇದ್ದಿರಲಿಲ್ಲ. ಇದೇ ಅನಾಹುತಕ್ಕೆ ಕಾರಣವಾಗಿದೆ.

ಜ್ಯೋತಿ ರೈ ಜೊತೆ ಕೆಲಸ ಮಾಡ್ತೀರಾ, ಇಲ್ಲಿದೆ ನೋಡಿ ಬ್ಯೂಟಿ ಕೊಟ್ಟಿರೋ ಭರ್ಜರಿ ಆಫರ್‌!

ಸ್ಯಾಂಪ್ಸನ್‌ ದೈತ್ಯ ದೇಹಿ ಆಗಿದ್ದರಿಂದ ಭುಜದ ಭದ್ರತಾ ಪಟ್ಟಿ ಕೂಡ ಸರಿಯಾಗಿ ಲಾಕ್‌ ಆಗಿರಲಿಲ್ಲ. ರೈಡ್‌ ಅತ್ಯಂತ ವೇಗವಾಗಿ ಕೆಳಗೆ ಬಂದು 70 ಫೀಟ್‌ಗೆ ಇಳಿದಾಗ, ಟೈರ್‌ ಸ್ಯಾಂಪ್ಸನ್‌ ಕುಳಿತಿದ್ದ ಸೀಟ್‌ನ ಲಾಕ್‌ ತಪ್ಪಿಹೋಗಿ ಕೆಳಗೆ ಬಿದ್ದು ಸಾವು ಕಂಡಿದ್ದಾನೆ. ಓರ್ಲಾಂಡೋ ಸ್ಲಿಂಗ್‌ಶಾಟ್‌ ಅಥವಾ ಫನ್‌ಟೈಮ್‌ ಆಗಲಿ ಈ ಬಗ್ಗೆ ನನ್ನ ಮಗನಿಗೆ ಎಚ್ಚರಿಕೆ ನೀಡಬೇಕಿತ್ತು. ಅದಲ್ಲದೆ, ಒಂದು ಸೀಟ್‌ಬೆಲ್ಟ್‌ಗೆ ಹೆಚ್ಚೆಂದರೆ 660 ಡಾಲರ್‌ ಖರ್ಚಾಗುತ್ತಿತ್ತು ಎಂದು ಈತನ ಪೋಷಕರು ವಾದ ಮಾಡಿದ್ದರು.ಇನ್ನು ಘಟನೆ ನಡೆದ ಬಳಿಕ ಅಮ್ಯೂಸ್‌ಮೆಂಟ್‌ ಪಾರ್ಕ್‌ಅನ್ನು ಸ್ಥಳೀಯ ಸರ್ಕಾರ ಮುಚ್ಚಿದ್ದು, ಇದನ್ನು ಈಗ ಧ್ವಂಸ ಮಾಡಲಾಗುತ್ತಿದೆ. 

Breaking: ಕರ್ನಾಟಕಕ್ಕೆ ಮೋದಿ ಸರ್ಕಾರ ಗುಡ್‌ ನ್ಯೂಸ್‌, ಮೂರು ಹೊಸ ಕೇಂದ್ರೀಯ ವಿದ್ಯಾಲಯಗಳಿಗೆ ಒಪ್ಪಿಗೆ

click me!