ಮಿಲ್ಕ್‌ಶೇಕ್‌ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ನೀಡಿದ್ದು 'ಮೂತ್ರ' ಅನ್ನೋದು ಗುಟುಕು ಕುಡಿದ ನಂತರವೇ ಗೊತ್ತಾಯ್ತ!

By Santosh NaikFirst Published Nov 2, 2023, 1:52 PM IST
Highlights

ಭಾರತದಲ್ಲಿ ಸ್ವಿಗ್ಗಿ ಹಾಗೂ ಜೊಮೋಟೋ ಇರೋ ರೀತಿಯಲ್ಲಿಯೇ ಅಮೆರಿಕದಲ್ಲಿ ಗ್ರೂಬ್‌ಹಬ್‌ ಎನ್ನುವ ಫುಡ್‌ ಡೆಲಿವರಿ ಕಂಪನಿ ಇದೆ. ಇತ್ತೀಚೆಗೆ ವ್ಯಕ್ತಿಯೊಬ್ಬ ಇದರಲ್ಲಿ ಮಿಲ್ಕ್‌ಶೇಖ್‌ ಆರ್ಡರ್‌ ಮಾಡಿದ್ದ. ಆದರೆ, ಮಿಲ್ಕ್‌ಶೇಕ್‌ ಬದಲಾಗಿ ಆರ್ಡರ್‌ನಲ್ಲಿ ಬಂದಿದ್ದು ಮೂತ್ರ.

ನವದೆಹಲಿ (ನ.2): ಫುಡ್‌ ಡೆಲಿವರಿ ಆಪ್‌ನಲ್ಲಿ ಮಿಲ್ಕ್‌ಶೇಕ್‌ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಕಂಪನಿ, ಒಂದು ಕಪ್‌ ಮೂತ್ರವನ್ನು ಡೆಲಿವರಿ ಮಾಡಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ವರದಿಯಾಗಿದೆ. ಮಿಲ್ಕ್‌ಶೇಕ್‌ ಎಂದುಕೊಂಡು ಅದನ್ನು ಕುಡಿದ ವ್ಯಕ್ತಿಗೆ ಅದು ಮೂತ್ರದ ರೀತಿ ಎನಿಸಿದೆ. ಕಪ್‌ನ ಮುಚ್ಚಳವನ್ನು ತೆರೆದು ನೋಡಿದಾಗಲಷ್ಟೇ ತನಗೆ ಕಂಪನಿಯು ಮಿಲ್ಕ್‌ಶೇಕ್‌ ಬದಲು ಮೂತ್ರವನ್ನು ನೀಡಿದೆ ಎನ್ನುವುದು ಗೊತ್ತಾಗಿದೆ. ಬವರದಿಯ ಪ್ರಕಾರ, ಫುಡ್‌ ಡೆಲಿವರಿ ಆಪ್‌ನ ಮೂಲಕ ವ್ಯಕ್ತಿಯೊಬ್ಬ  ಮಿಲ್ಕ್‌ಶೇಖ್‌ ಆರ್ಡ್‌ ಮಾಡಿದ್ದ. ಆದರೆ, ಆತನಿಗೆ ಮಿಲ್ಕ್‌ಶೇಖ್‌ ಇರುವ ಕಪ್‌ನ ಬದಲು, ಮೂತ್ರವಿದ್ದ ಕಪ್‌ಅನ್ನು ಡೆಲಿವರಿ ಏಜೆಂಟ್‌ ನೀಡಿದ್ದಾನೆ. ಈ ಘಟನೆ ನಡೆದಿರುವುದು ಅಮೆರಿಕದ ಉಟಾಹ್‌ ಪ್ರಾಂತ್ಯದಲ್ಲಿ.

ಇಲ್ಲಿನ ನಿವಾಸಿಯಾಗಿರುವ ಸೆಲೆಬ್‌ ವುಡ್‌, ಗ್ರೂಬ್‌ಹಬ್‌ ಆಪ್‌ಅನ್ನು ಬಳಸಿ ಇತ್ತೀಚೆಗೆ ಫ್ರೈಸ್‌ ಹಾಗೂ ಮಿಲ್ಕ್‌ ಶೇಕ್‌ಅನ್ನು ನಾನು ಆರ್ಡರ್‌ ಮಾಡಿದ್ದೆ. ಡೆಲಿವರಿ ಏಜೆಂಟ್‌ ಬಂದು ಇದನ್ನು ನನಗೆ ನೀಡಿ ಹೋದಾಗ ನಾನು ಅದನ್ನು ಸೇವಿಸಲು ಆರಂಭಿಸಿದೆ.  ಕಪ್‌ನಲ್ಲಿ ಸ್ಟ್ರಾ ಹಾಕಿ ಮಿಲ್ಕ್‌ಶೇಖ್‌ಅನ್ನು ಒಂದು ಗುಟುಕು ಹೀರಿದೆ. ಆಗ ಏನೋ ಮೂತ್ರವನ್ನು ಕುಡಿದಂತೆ ನನಗೆ ಸನಿಸಿತು. ತಕ್ಷಣವೇ ನಾನು ಕಪ್‌ನ ಮುಚ್ಚಳವನ್ನು ತೆಗೆದು ಅದನ್ನು ನೋಡಿದಾಗ, ಲೋಟದಲ್ಲಿ ಇರುವುದು ಮೂತ್ರ ಎಂದು ಗೊತ್ತಾಗಿತ್ತು. ಇದಾದ ನಂತರ ತಕ್ಷಣವೇ ನಾನು ಡೆಲಿವರಿ ಏಜೆಂಟ್‌ಗೆ ಕರೆ ಮಾಡಿ ಆದ ವಿಚಾರ ತಿಳಿಸಿದೆ. ತಕ್ಷಣವೇ ನನ್ನ ಬಳಿಗೆ ಬಂದ ಡೆಲಿವರಿ ಏಜೆಂಟ್‌ ಆಗಿರುವ ತಪ್ಪು ಏನು ಎನ್ನುವುದನ್ನು ವಿವರಿಸಿದ್ದ ಎಂದು ವುಡ್‌ ತಿಳಿಸಿದ್ದಾರೆ.

ಫುಡ್‌ ಡೆಲಿವರಿ ಮಾಡುವಾಗ ನಾನು ಕಾರ್‌ನಲ್ಲಿ ಕೆಲವೊಂದು ಕಪ್‌ಗಳನ್ನು ಇರಿಸಿಕೊಂಡಿರುತ್ತೇನೆ. ಫುಡ್‌ ಡೆಲಿವರಿ ಕೆಲಸ ಆಗಿರುವ ಕಾರಣ ಹೆಚ್ಚು ಹೊತ್ತು ಪ್ರಯಾಣದಲ್ಲಿಯೇ ಇರುತ್ತೇವೆ. ಕೆಲವು ಸಮಯದಲ್ಲಿ ಎಷ್ಟೇ ಹುಡುಕಿದರೂ ವಾಶ್‌ ರೂಮ್‌ ಸಿಗೋದಿಲ್ಲ. ಆಗ ಇಂಥದ್ದೇ ಕಪ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿ ಕಾರ್‌ನಲ್ಲಿಯೇ ಇರಿಸಿಕೊಂಡಿರುತ್ತೇನೆ ಎಂದು ಡೆಲಿವರಿ ಏಜೆಂಟ್‌ ತಿಳಿಸಿದ್ದಾರೆ. ಸೆಲೆಬ್‌ ವುಡ್‌ ಅವರು ನೀಡಿದ್ದ ಆರ್ಡರ್‌ಅನ್ನು ನೀಡುವ ವೇಳೆ ಮಿಲ್ಕ್‌ಶೇಕ್‌ ಇರುವ ಕಪ್‌ ಬದಲು ಮೂತ್ರ ಇರುವ ಕಪ್‌ಅನ್ನು ಏಜೆಂಟ್‌ ತಪ್ಪಾಗಿ ನೀಡಿದ್ದಾನೆ. ಮಿಲ್ಕ್‌ ಶೇಕ್‌ ಇರುವ ಕಪ್‌ ಕಾರಿನಲ್ಲಿಯೇ ಬಾಕಿಯಾಗಿದೆ. ಇದನ್ನು ತಿಳಿದ ಬಳಿಕ ಕಂಪನಿಯು 25 ಡಾಲರ್‌ರ ಆರ್ಡರ್‌ಗಾಗಿ 18 ಡಾಲರ್‌ಅನ್ನು ಸೆಲೆಬ್‌ ವುಡ್‌ಗೆ ಮರು ಪಾವತಿ ಮಾಡಿದ್ದಲ್ಲದೆ. ತನ್ನ ತಪ್ಪಿನ ಬಗ್ಗೆ ಹೇಳಿಕೆಯನ್ನೂ ನೀಡಿದೆ.

ಫೇಸ್‌ಬುಕ್‌ನಲ್ಲಿ ವಾರ್ಷಿಕ 6.5 ಕೋಟಿ ವೇತನ ನೀಡುವ ಕೆಲಸ ತೊರೆದಿದ್ದಕ್ಕೆ ಕಾರಣ ತಿಳಿಸಿದ ಭಾರತದ ಟೆಕ್ಕಿ!

ಕಂಪನಿಯು, 'ನಾವು ಡೆಲಿವರಿ ಏಜೆಂಟ್‌ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದೇವೆ ಮತ್ತು ನಮ್ಮೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿದ್ದೇವೆ. ಕ್ಷಮೆಯಾಚಿಸಲು ನಾವು ಗ್ರಾಹಕರನ್ನು ಸಂಪರ್ಕಿಸುತ್ತಿದ್ದೇವೆ ಮತ್ತು ಈ ಹಿಂದೆ ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದೇವೆ ಎಂದು ಗ್ರೂಬ್‌ಹಬ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 

ಮುದ್ದಾಗಿ ಬೆಳೆಸಿದ ಮಗನನ್ನೇ ಮದುವೆಯಾದ 53 ವರ್ಷದ ತಾಯಿ!

click me!