ಬಂಗಾಳದಿಂದ ಬಾಂಗ್ಲಾ ಮೂಲಕ ತ್ರಿಪುರಾಗೆ ರೈಲು: 38 ಗಂಟೆಯ ಪ್ರಯಾಣ ಈಗ 12ಕ್ಕೆ ಇಳಿಕೆ

By Kannadaprabha NewsFirst Published Nov 2, 2023, 11:58 AM IST
Highlights
  • ಅಖೌರಾ-ಅಗರ್ತಲಾ ಲಿಂಕ್‌ ಯೋಜನೆಗೆ ಮೋದಿ, ಹಸೀನಾ ಚಾಲನೆ
  • ಇದರಿಂದ ಕೋಲ್ಕತಾ-ಅಗರ್ತಲಾ ಪ್ರಯಾಣ ಅವಧಿ 38 ತಾಸಿಂದ 12 ತಾಸಿಗೆ ಇಳಿಕೆ
  • ಈಗ ಅಸ್ಸಾಂ ಮೂಲಕ ಕೋಲ್ಕತಾ-ಅಗರ್ತಲಾ ರೈಲು ಪ್ರಯಾಣಕ್ಕೆ 38 ತಾಸು ಬೇಕು

ಪಿಟಿಐ ಅಗರ್ತಲಾ:  ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಬುಧವಾರ ಜಂಟಿಯಾಗಿ ವರ್ಚುವಲ್ ವಿಧಾನದಲ್ಲಿ ಎರಡೂ ದೇಶಗಳ ನಡುವಿನ 3 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲಿ ತ್ರಿಪುರಾದ ನಿಶ್ಚಿಂತಪುರ (Nishchintapur) ಮತ್ತು ನೆರೆಯ ದೇಶದ ಗಂಗಾಸಾಗರ (Gangasagar) ನಡುವಿನ ಅಖೌರಾ-ಅಗರ್ತಲಾ ರೈಲ್ವೆ ಲಿಂಕ್‌ ಯೋಜನೆ ಪ್ರಮುಖವಾಗಿದೆ. ಇದು ತ್ರಿಪುರಾವನ್ನು ಕೋಲ್ಕತಾಗೆ ಇನ್ನಷ್ಟು ಹತ್ತಿರ ಮಾಡಲಿದೆ.

ಮೋದಿ ಮತ್ತು ಹಸೀನಾ ಉದ್ಘಾಟಿಸಿದ ಇತರ ಎರಡು ಯೋಜನೆಗಳೆಂದರೆ, 65 ಕಿ.ಮೀ. ಖುಲ್ನಾ-ಮೊಂಗ್ಲಾ ಪೋರ್ಟ್ ರೈಲು ಮಾರ್ಗ (Khulna-Mongla Port railway line) ಮತ್ತು ಬಾಂಗ್ಲಾದೇಶದ ರಾಂಪಾಲ್‌ನಲ್ಲಿ ಭಾರತದ ಸಹಯೋಗದಲ್ಲಿ ನಿರ್ಮಿಸಲಾಗಿರುವ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ಲಾಂಟ್‌ನ 2ನೇ ಘಟಕ. ಈ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, 'ರೈಲ್‌ ಲಿಂಕ್‌ ಯೋಜನೆಯು ಐತಿಹಾಸಿಕವಾಗಿದ್ದು, ಇದು ಭಾರತ-ಬಾಂಗ್ಲಾದೇಶ ನಡುವಿನ ಮೊದಲ ರೈಲು ಲಿಂಕ್‌ ಯೋಜನೆ ಆಗಿದೆ' ಎಂದರು.

ಹಮಾಸ್‌ ಜತೆ ಕೈಜೋಡಿಸಿದ ಹೌಥಿ ಉಗ್ರರು: ಇಸ್ರೇಲ್ ಮೇಲೆ ಡ್ರೋನ್‌, ಕ್ಷಿಪಣಿ ದಾಳಿ

ರೈಲು ಲಿಂಕ್‌ ಯೋಜನೆಯ ಮಹತ್ವವೇನು?:

ಪ್ರಸ್ತುತ, ಕೋಲ್ಕತ್ತಾದಿಂದ ತ್ರಿಪುರಾದ ರಾಜಧಾನಿ ಅಗರ್ತಲಾಕ್ಕೆ ರೈಲಿನ ಮೂಲಕ ಪ್ರಯಾಣಿಸುವವರು ಅಸ್ಸಾಂ ಮೂಲಕ ಸಾಗಬೇಕು. ಇದು 38 ಗಂಟೆಗಳ ಸುದೀರ್ಘ ಪ್ರಯಾಣವಾಗಿದೆ. ಈಗ ಅಖೌರಾ-ಅಗರ್ತಲಾ ಕ್ರಾಸ್ ಬಾರ್ಡರ್ ರೈಲು (Akhaura-Agartala cross border rail link) ಸಂಪರ್ಕದೊಂದಿಗೆ ರೈಲುಗಳು ಕೋಲ್ಕತಾದಿಂದ ಬಾಂಗ್ಲಾದೇಶ ಮೂಲಕ ಅಗರ್ತಲಾಕ್ಕೆ ಚಲಿಸಬಹುದಾಗಿದೆ. ಇದರಿಂದ ಕೋಲ್ಕತಾದಿಂದ ತ್ರಿಪುರಾಗೆ ಪ್ರಯಾಣ ಅವಧಿ 38 ತಾಸಿನಿಂದ 12 ತಾಸಿಗೆ ಇಳಿಯುತ್ತದೆ.

ಗೆಳತಿ ಜಾಸ್ಮಿನ್‌ ಜೊತೆ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ನಿಶ್ಚಿತಾರ್ಥ

click me!