ಚೀನಾಕ್ಕಿಂತ ಶಕ್ತಿಶಾಲಿಯಾಗಿವೆ ಕೇವಲ 2 ದೇಶಗಳು: ಇಲ್ಲಿಯವರೆಗೂ ಈ ಸೇನೆಯ ಯೋಧರು ಹುತಾತ್ಮರಾಗಿಲ್ಲ

By Mahmad Rafik  |  First Published Sep 8, 2024, 12:00 PM IST

ಇಂದು ಹಲವು ದೇಶಗಳ ನಡುವೆ ಯುದ್ಧಗಳು ನಡೆಯುತ್ತಿವೆ. ಈ ಹಿನ್ನೆಲೆ ಎಲ್ಲಾ ದೇಶಗಳು ರಕ್ಷಣಾ ವಲಯಕ್ಕಾಗಿಯೇ ಹೆಚ್ಚಿನ ಅನುದಾನ ಮೀಸಲಿಡುತ್ತವೆ. ಆದರೆ ಈ ದೇಶದ ಸೇನೆಯ ಸೈನಿಕರು ಹುತಾತ್ಮರಾಗಿಲ್ಲ.


ನವದೆಹಲಿ: ಪ್ರಪಂಚದಲ್ಲಿ ಹಲವು ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ರಷ್ಯಾ, ಇಸ್ರೇಲ್‌ಗಳು ತಮ್ಮ ನೆರೆಯ ರಾಷ್ಟ್ರಗಳ ಜೊತೆಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಅಪಾರ ಸಾವು-ನೋವು ಸಂಭವಿಸುತ್ತಿವೆ. ಈ ನಡುವೆ ಯಾವ ದೇಶ ಹೆಚ್ಚು ಶಕ್ತಿಶಾಲಿಯಾಗಿದೆ ಎಂಬುದನ್ನು ನೋಡೋಣ ಬನ್ನಿ. ಸೇನೆ ಸಾಮಾರ್ಥ್ಯದ ಮೇಲೆ ಆ ದೇಶದ ಶಕ್ತಿಯನನ್ನು ಲೆಕ್ಕ ಹಾಕಬಹುದಾಗಿದೆ. ಭಾರತವೂ ಸೇರಿದಂತೆ ಎಲ್ಲಾ ದೇಶಗಳು ರಕ್ಷಣಾ ವಲಯಕ್ಕೆ ಮೊದಲ ಆದ್ಯತೆ ನೀಡುತ್ತವೆ. ತನ್ನ ಸೇನೆಯ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ. ಪ್ರಪಂಚದಲ್ಲಿ ಪ್ರಮುಖ 10 ದೇಶಗಳು ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿರುವ ಸೇನೆಯನ್ನು ಹೊಂದಿವೆ. ಈ ದೇಶಗಳ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಸೈನಿಕರನ್ನು ಹೊಂದಿವೆ. ವಿಶ್ವದ ಈ ಒಂದು ದೇಶ ಇದುವರೆಗೂ ಯುದ್ಧದಲ್ಲಿಯೇ ಭಾಗಿಯಾಗಿಲ್ಲ. 

ಯಾವ ದೇಶದ ಬಳಿಯಲ್ಲಿದೆ ಬಲಿಷ್ಠ ಸೈನ್ಯ!
ಗ್ಲೋಬಲ್ ಫೈಯರ್ ಪವರ್ ಸೇನೆಯ ಶಕ್ತಿಯಾಧಾರದ ಮೇಲೆ 145 ದೇಶಗಳಿಗೆ ಶ್ರೇಯಾಂಕವನ್ನು (Rank) ನೀಡಿದೆ. ಈ ಶ್ರೇಯಾಂಕ ನೀಡುವಾಗ 60ಕ್ಕೂ ಅಧಿಕ ಸೇನೆಯ ವೈಯಕ್ತಿಕ ಅಂಶಗಳನ್ನು (Individual Factors) ಪರಿಗಣಿಸಲಾಗಿದೆ. ಸೇನೆಯ ಸೈನಿಕರು, ಮಿಲಿಟರಿ ಶಸ್ತಾಸ್ತ್ರಗಳು  ಹಾಗೂ ಹಣಕಾಸಿನ ಸ್ಥಿರತೆಯ ಅಂಶಗಳನ್ನು ಪರಿಗಣಿಸಿ ಶ್ರೇಯಾಂಕ ನೀಡಲಾಗಿದೆ. ಈ ಅಂಶಗಳನ್ನು ಪವರ್‌ ಇಂಡೆಕ್ಷ್ ಸ್ಕೋರ್ ಎಂದು ಕರೆಯಲಾಗುತ್ತದೆ. 2024ರ ಜಗತ್ತಿನ ಹತ್ತು ಪ್ರಭಾವಶಾಲಿ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ರಷ್ಯಾ, ಚೀನಾ, ಭಾರತ, ದಕ್ಷಿಣ ಕೊರಿಯಾ, ಇಂಗ್ಲೆಂಡ್, ಜಪಾನ್, ಟರ್ಕಿ, ಪಾಕಿಸ್ತಾನ ಮತ್ತು ಇಟಲಿ.

Tap to resize

Latest Videos

undefined

ಪಾಪಿ ಪಾಕಿಸ್ತಾನದ ಅಸಲಿಯತ್ತು, ಕಾರ್ಗಿಲ್ ಯುದ್ಧದಲ್ಲಿ ನೇರ ಕೈವಾಡ ಒಪ್ಪಿಕೊಂಡ ಪಾಕ್ ಸೇನೆ!

ಯಾವ ದೇಶದ ಸೈನಿಕರು ಹುತಾತ್ಮರಾಗಿಲ್ಲ?ಪ್ರಪಂಚದ ಈ ದೇಶ ಇದುವರೆಗೂ ಯುದ್ಧದಲ್ಲಿ ಭಾಗಿಯಾಗಿಲ್ಲ ಮತ್ತು ಸೈನಿಕರೂ ಸಹ ಹುತಾತ್ಮರಾಗಿಲ್ಲ. ಈ ದೇಶದ ಹೆಸರಿ ಸ್ವಿಟ್ಜರ್‌ಲ್ಯಾಂಡ್, ಇದು ತಟಸ್ಥ ರಾಜಕೀಯ ನೀತಿಯನ್ನು ಅನುಸರಿಸುವ ರಾಷ್ಟ್ರವಾಗಿದೆ. ಕಳೆದ 200 ವರ್ಷಗಳಿಂದ ಸ್ವಿಟ್ಜರ್‌ಲ್ಯಾಂಡ್ ತಟಸ್ಥ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದೆ. 

1815ರ ವಿಯೆನ್ನಾ ಕಾಂಗ್ರೆಸ್ ಬಳಿಕ ಸ್ವಿಟ್ಜರ್‌ಲ್ಯಾಂಡ್ ಸಂಪೂರ್ಣವಾಗಿ ತಟಸ್ಥತೆಯ ನೀತಿಯನ್ನು ಅಳವಡಿಸಿಕೊಂಡಿದೆ. ಈ ನೀತಿಯ ವಿಶೇಷತೆ ಅಂದ್ರೆ ದೇಶವು ಯಾವುದೇ ಅಂತರರಾಷ್ಟ್ರೀಯ ಸಂಘರ್ಷ ಅಥವಾ ಯುದ್ಧದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಜ್ಞೆ ತೆಗೆದುಕೊಂಡು, ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತದೆ. ಮೊದಲನೆಯ ಮಹಾಯುದ್ಧ ಮತ್ತು ಎರಡನೆಯ ಮಹಾಯುದ್ಧದಂತಹ ವಿನಾಶಕಾರಿ ಯುದ್ಧಗಳಲ್ಲಿಯೂ ಸ್ವಿಟ್ಜರ್ಲೆಂಡ್ ತನ್ನ ತಟಸ್ಥತೆಯನ್ನು ಕಾಯ್ದುಕೊಳ್ಳಲು ಇದೇ ಕಾರಣವಾಗಿತ್ತು.

ಪಾಕಿಸ್ತಾನ್ ಈಗ ‘ಭಿಕಾರಿ’ಸ್ತಾನ್.. ‘ದಿವಾಳಿ’ಸ್ತಾನ್..! ಅದೊಂದು ನಿಯಮದಿಂದ ದಿವಾಳಿ ಅಂಚಿಗೆ ಬಂದ ದೇಶ!

click me!