ಭೀತಿ ದೂರಕ್ಕೆ ಸ್ವತಃ ಲಸಿಕೆ ಪಡೆಯಲಿರುವ ಒಬಾಮಾ, ಕ್ಲಿಂಟನ್‌, ಬುಷ್‌!

By Suvarna News  |  First Published Dec 7, 2020, 11:34 AM IST

ಕೊರೋನಾ ಲಸಿಕೆ ಕುರಿತು ಜನರಲ್ಲಿ ಇರಬಹುದಾದ ಭೀತಿ ದೂರ ಮಾಡಲು ಅಮೆರಿಕ ಮಾಜಿ ಮೂವರು ಅಧ್ಯಕ್ಷರ ನಿರ್ಧಾರ| ಮೊದಲಿಗೆ ಲಸಿಕೆ ಪಡೆಯುವ ಘೋಷಣೆ 


ವಾಷಿಂಗ್ಟನ್‌(ಡಿ.07): ಕೊರೋನಾ ಲಸಿಕೆ ಕುರಿತು ಜನರಲ್ಲಿ ಇರಬಹುದಾದ ಭೀತಿ ದೂರ ಮಾಡುವ ನಿಟ್ಟಿನಲ್ಲಿ ಅಮೆರಿಕ ಮೂವರು ಮಾಜಿ ಅಧ್ಯಕ್ಷರು ಸ್ವತಃ ತಾವೇ ಮೊದಲಿಗೆ ಲಸಿಕೆ ಪಡೆಯುವ ಘೋಷಣೆ ಮಾಡಿದ್ದಾರೆ.

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತುರ್ತು ಬಳಕೆ ಅನುಮತಿ ಕೇಳಿದ ಸೀರಂ!

Latest Videos

undefined

ಮಾಜಿ ಅಧ್ಯಕ್ಷರುಗಳಾದ ಬರಾಕ್‌ ಒಬಾಮಾ, ಜಾಜ್‌ರ್‍ ಡಬ್ಲ್ಯು ಬುಷ್‌ ಹಾಗೂ ಬಿಲ್‌ ಕ್ಲಿಂಟನ್‌ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ನಿರ್ಧಾರದಿಂದ ಲಸಿಕೆ ಕುರಿತಾಗಿ ಜನರಲ್ಲಿರುವ ಆತಂಕಗಳು ದೂರವಾಗಲಿವೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಗಳ ಬಗ್ಗೆ ದೇಶದ ಜನರಲ್ಲಿ ಅರಿವು ಮೂಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಫೈಝರ್‌ ಲಸಿಕೆ ಜನರ ಮೇಲೆ ಬಳಸಲು ಅನುಮತಿ ಲಭಿಸಿದ ಒಂದು ವಾರದ ಒಳಗಾಗಿ ಈ ಲಸಿಕೆಗೆ ಒಳಗಾಗುವುದಾಗಿ ಒಬಾಮಾ ಘೋಷಿಸಿದ್ದಾರೆ.

ಕೊರೋನಾ ಇಲ್ಲ, ಆಂಧ್ರದಲ್ಲಿ ನಿಗೂಢ ರೋಗದ ಕಾಟ!

ಭಾರತದಲ್ಲಿ ಲಸಿಕೆ ತುರ್ತು ಬಳಕೆ ಅನುಮತಿ ಕೋರಿದ ಫೈಝರ್‌!

ಇತ್ತೀಚೆಗಷ್ಟೇ ಬ್ರಿಟನ್‌ನಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದಿದ್ದ ಅಮೆರಿಕ ಮೂಲದ ಫೈಝರ್‌ ಕಂಪನಿ ಇದೀಗ ತನ್ನ ಕೊರೋನಾ ಲಸಿಕೆಯನ್ನು ಭಾರತದಲ್ಲೂ ಬಳಸಲು ಅನುಮತಿ ಕೋರಿದೆ. ಈ ಕುರಿತು ಅದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ. ಇದು ಭಾರತದಲ್ಲಿ ಯಾವುದೇ ಔಷಧ ಕಂಪನಿಯೊಂದು ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದ ಮೊದಲ ಪ್ರಕರಣವಾಗಿದೆ.

ವಿದೇಶದಿಂದ ಲಸಿಕೆ ಆಮದು ಮಾಡಿಕೊಂಡು ಅದನ್ನು ಭಾರತದಲ್ಲಿ ವಿತರಿಸಲು ಕಂಪನಿ ಅನುಮತಿ ಕೋರಿದೆ. ಇದುವರೆಗೆ ಫೈಝರ್‌ ಭಾರತದಲ್ಲಿ ಯಾವುದೇ ಪ್ರಾಯೋಗಿಕ ಪರೀಕ್ಷೆ ನಡೆಸಿಲ್ಲ.

click me!