ಬ್ರಿಟನ್‌ ರಾಣಿ ಎಲಿಜಬೆತ್‌, ಫಿಲಿಪ್‌ ಸೇರಿ ಪ್ರಮುಖರಿಗೆ ಮೊದಲ ಫೈಝರ್‌ ಲಸಿಕೆ!

By Suvarna NewsFirst Published Dec 7, 2020, 7:54 AM IST
Highlights

 ಕೊರೋನಾ ಸೋಂಕಿತರ ಗುಣಮುಖಕ್ಕಾಗಿ ತುರ್ತು ಬಳಕೆಗೆ ಅಮೆರಿಕದ ಫೈಝರ್‌ ಲಸಿಕೆ| ಬ್ರಿಟನ್‌ ರಾಣಿ ಎಲಿಜಬೆತ್‌, ಫಿಲಿಪ್‌ ಸೇರಿ ಪ್ರಮುಖರಿಗೆ ಮೊದಲ ಫೈಝರ್‌ ಲಸಿಕೆ

ಲಂಡನ್‌(ಡಿ.07): ಕೊರೋನಾ ಸೋಂಕಿತರ ಗುಣಮುಖಕ್ಕಾಗಿ ತುರ್ತು ಬಳಕೆಗೆ ಅಮೆರಿಕದ ಫೈಝರ್‌ ಲಸಿಕೆ ಬಳಸಲು ಬ್ರಿಟನ್‌ನಲ್ಲಿ ಅನುಮೋದನೆ ಸಿಕ್ಕ ಬೆನ್ನಲ್ಲೇ, ಮೊದಲ ಹಂತದಲ್ಲಿ ಬ್ರಿಟನ್‌ ರಾಣಿ ಎಲಿಜಬೆತ್‌(94), ಪ್ರಿನ್ಸ್‌ ಫಿಲಿಪ್‌(99) ಸೇರಿದಂತೆ ಇನ್ನಿತರ ಪ್ರಮುಖರಿಗೆ ಲಸಿಕೆ ನೀಡುವ ಸಾಧ್ಯತೆಯಿದೆ.

ಕೊರೋನಾ ಲಸಿಕೆಗೆ ಕಾಯುತ್ತಿರುವವರಿಗೆ ಬಿಗ್ ಶಾಕ್ ನೀಡಿದ WHO!

ಕೊರೋನಾ ವಾರಿಯರ್ಸ್‌, ಆರೋಗ್ಯ ಸಿಬ್ಬಂದಿ ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ರಾಣಿ ಎಲಿಜಬೆತ್‌ರಂಥ ಪ್ರಮುಖರೇ ಲಸಿಕೆ ಹಾಕಿಸಿಕೊಳ್ಳುವುದರಿಂದ ಲಸಿಕೆ ಕುರಿತಾಗಿ ಜನರಿಗಿರುವ ಅನುಮಾನ ಮತ್ತು ಆತಂಕಗಳು ದೂರವಾಗಲಿವೆ ಎನ್ನಲಾಗಿದೆ. ರಾಣಿ ಎಲಿಜಬೆತ್‌ ಅವರು ಮಾಚ್‌ರ್‍ ಅಂತ್ಯದಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿತ್ತು.

ಲಸಿಕೆ ಅಂದರೆ ಶೂನ್ಯ ಕೊರೋನಾ ಅಲ್ಲ: ಡಬ್ಲ್ಯುಎಚ್‌ಒ!

ದೇಶಾದ್ಯಂತ ಮಂಗಳವಾರದಿಂದಲೇ ಸೋಂಕಿತರಿಗೆ ಈ ಲಸಿಕೆ ಕಲ್ಪಿಸುವ ಸಲುವಾಗಿ ಬ್ರಿಟನ್‌ ಈಗಾಗಲೇ 4 ಕೋಟಿ ಡೋಸ್‌ಗಳಷ್ಟುಫೈಝರ್‌ ಲಸಿಕೆಗೆ ಬೇಡಿಕೆ ಸಲ್ಲಿಸಿದ್ದು, ಈ ಪೈಕಿ ಮೊದಲ ಹಂತದಲ್ಲಿ 8 ಲಕ್ಷದಷ್ಟು ಡೋಸ್‌ಗಳು ಪೂರೈಕೆಯಾಗಿವೆ. ಅಲ್ಲದೆ, ಒಟ್ಟಾರೆ 30 ಕೋಟಿ ಡೋಸ್‌ಗಳಷ್ಟುಲಸಿಕೆ ತರಿಸಿಕೊಳ್ಳಲು ಇನ್ನಿತರ ಕೊರೋನಾ ಲಸಿಕೆ ಉತ್ಪನ್ನ ಕಂಪನಿಗಳ ಜೊತೆ ಬ್ರಿಟನ್‌ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.

click me!