ಸಾಯೋ ಮುನ್ನ ಕೊನೇ ಕ್ಷಣದಲ್ಲಿ ಜನರು ಏನು ಹೇಳ್ತಾರೆ? ನರ್ಸ್‌ ಬಿಚ್ಚಿಟ್ಟ ರಹಸ್ಯ!

By Suvarna News  |  First Published Nov 18, 2021, 1:32 PM IST

* ರೋಗಿಗಳ ಸೇವೆ ಮಾಡೋ ನರ್ಸ್‌ ಬಿಚ್ಚಿಟ್ಟ ರಹಸ್ಯ

* ಸಾಯೋ ಮುನ್ನ ಕೊನೇ ಕ್ಷಣದಲ್ಲಿ ಅನೇಕ ಮಂದಿ ಏನು ಹೇಳ್ತಾರೆ? 


ಲಾಸ್ ಏಂಜಲೀಸ್‌(ನ.18): ಲಾಸ್ ಏಂಜಲೀಸ್‌ನ ನೋಂದಾಯಿತ ನರ್ಸ್ ಜೂಲಿ ಮ್ಯಾಕ್‌ಫ್ಯಾಡೆನ್ (Julie McFadden) ಐದು ವರ್ಷಗಳಿಗೂ ಹೆಚ್ಚು ಕಾಲ ಧರ್ಮಶಾಲೆಯಲ್ಲಿ ಕೆಲಸ ಮಾಡಿದ್ದಾರೆ. ಆಗಾಗ ತನ್ನ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Sovcial Media) ಹಂಚಿಕೊಳ್ಳುತ್ತಿರುತ್ತಾರೆ. ಜನರನ್ನು ನೋಡಿಕೊಳ್ಳುವಾಗ, ಜನರು ಅವರ ಮುಂದೆ ಸಾಯುವ ಸಂದರ್ಭಗಳೂ ಬಂದಿವೆ ಎಂದು ತಿಳಿಸಿದ್ದಾರೆ. ಆಗ ಅವರು ಮೃತ ವ್ಯಕ್ತಿಯೊಂದಿಗೆ ಇರುತ್ತಾರೆ. ಸದ್ಯ ಜನರು ಸಾಯುವಾಗ, ತಮ್ಮ ಅಂತಿಮ ಕ್ಷಣದಲ್ಲಿ ಯಾವ ಮಾತುಗಳನ್ನು ಹೆಚ್ಚಾಗಿ ಹೇಳುತ್ತಾರೆಂದು ಜೂಲಿ ಹೇಳಿದ್ದಾರೆ. ಈ ಕುರಿತಾದ ಹೆಚ್ಚಿನ ವಿವರ ಇಲ್ಲಿದೆ ನೋಡಿ

10 ವರ್ಷಕ್ಕೂ ಹೆಚ್ಚು ಕಾಲ ಐಸಿಯುನಲ್ಲಿ ಕೆಲಸ ಮಾಡಿದ ಅನುಭವ

Tap to resize

Latest Videos

ಜೂಲಿ ಮ್ಯಾಕ್‌ಫ್ಯಾಡೆನ್ (@hospicenursejulie) ಈ ಹಿಂದೆ ಒಂದು ದಶಕಕ್ಕೂ ಹೆಚ್ಚು ಕಾಲ ICU ನಲ್ಲಿ ಕೆಲಸ ಮಾಡುತ್ತಿದ್ದರು. ಇದಾದ ನಂತರ 5 ವರ್ಷಗಳ ಕಾಲ ಧರ್ಮಶಾಲಾದಲ್ಲಿ ನರ್ಸ್ (Nurse) ಆಗಿ ಕೆಲಸ ಮಾಡಿದ್ದಾರೆ. ಟಿಕ್‌ಟಾಕ್‌ನಲ್ಲಿ (TikTok) ಅವರು ಕತಮ್ಮ ಕೆಲಸದ ಕುರಿತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ರೋಗಿಯು ಬದುಕಿಲ್ಲ ಎಂದು ತನ್ನ ಕುಟುಂಬಕ್ಕೆ ಹೇಳುವುದೇ ತನ್ನ ಕೆಲಸದ ಕಠಿಣ ಭಾಗವಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ತನ್ನನ್ನು ತಾನು ಸಾಕಷ್ಟು ಸಿದ್ಧಪಡಿಸಿಕೊಳ್ಳುತ್ತಾರಂತೆ. ದಿ ಸನ್ ಜೊತೆ ಮಾತನಾಡಿದ ಅವರು, "ರೋಗಿಗಳ (Patient) ಸಾವಿನ ನಂತರ ಕುಟುಂಬ ಸದಸ್ಯರಿಗೆ ವಿವರಿಸುವುದು ನನ್ನ ಕೆಲಸದ ಅತ್ಯುತ್ತಮ ಭಾಗವಾಗಿದೆ. ಅವರನ್ನು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಬೆಂಬಲಿಸಬೇಕು" ಎಂದಿದ್ದಾರೆ.

ಸಾವಿನ ಮೊದಲು ಜನರು ಏನು ಹೇಳುತ್ತಾರೆ?

ಹೆಚ್ಚಿನ ಜನರು ಸಾಯುವ (Death) ಮೊದಲು ಏನಾದರೂ ಹೇಳುತ್ತಾರೆ ಎಂದು ಜೂಲಿ ಹೇಳಿದ್ದಾರೆ. ಇದು ಸಾಮಾನ್ಯವಾಗಿ 'ಐ ಲವ್ ಯು' ಅಥವಾ ಅವರು ತಮ್ಮ ತಾಯಿ ಅಥವಾ ತಂದೆಯನ್ನು ಕರೆಯುತ್ತಾರೆ. ತಾಯಿ ಅಥವಾ ತಂದೆ ಮೊದಲೇ ಮೃತಪಟ್ಟಿದ್ದರೂ ಇದು ಸಾಮಾನ್ಯವಾಗಿರುತ್ತದೆ. ಕೊನೆಯ ಕ್ಷಣದಲ್ಲಿ ಉಸಿರಾಟದ ಬದಲಾವಣೆ, ಚರ್ಮದ ಬಣ್ಣ ಬದಲಾವಣೆ, ಜ್ವರ ಮುಂತಾದ ಲಕ್ಷಣಗಳು ವೇಗವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದ್ದಾರೆ. ನಾನು ಮೃತರ ಸಾವಿನ ವಿಚಾರವನ್ನು ಕುಟುಂಬಸ್ಥರಿಗೆ  ಅರ್ಥೈಸುವುದೇ ಬಹುದೊಡ್ಡ ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ಸತ್ತ ನಂತರ ಸಂಬಂಧಿಕರು ಮೃತದೇಹ ಇಟ್ಟಿರುವ ಕೊಠಡಿಗಳಲ್ಲಿ ಇರಲು ಒಪ್ಪುವುದಿಲ್ಲ, ಅಥವಾ ಮೃತರನ್ನು ನೊಡುವ ಧೈರ್ಯ ಇರುವುದಿಲ್ಲ. ಹೀಗಿರುವಾಗ ಅವರಿಗೆ ಧೈರ್ಯ ತುಂಬುವ ಕೆಲಸವನ್ನೂ ಜೂಲಿ ಮಾಡುತ್ತಾರೆ.

click me!