ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ

Kannadaprabha News   | Kannada Prabha
Published : Mar 22, 2026, 04:36 AM IST
Terrorist

ಸಾರಾಂಶ

: ಭಾರತಕ್ಕೆ ಬೇಕಿದ್ದ ಉಗ್ರರು, ಪಾಕ್‌ ನೆಲದಲ್ಲಿ ಅನಾಮಿಕ ವ್ಯಕ್ತಿಗಳ ದಾಳಿಗೆ ಬಲಿಯಾಗುವ ಸರಣಿ ಮುಂದುವರೆದಿದೆ. ಕಾಶ್ಮೀರದಲ್ಲಿ ಜಿಹಾದ್ ನಡೆಸುತ್ತಿದ್ದ ಲಷ್ಕರ್‌ ಎ ತೊಯ್ಬಾ ಕಮಾಂಡರ್‌ ಬಿಲಾಲ್ ಆರಿಫ್‌ ಸಲಾಫಿಯಾನನ್ನು ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಇಸ್ಲಾಮಾಬಾದ್‌: ಭಾರತಕ್ಕೆ ಬೇಕಿದ್ದ ಉಗ್ರರು, ಪಾಕ್‌ ನೆಲದಲ್ಲಿ ಅನಾಮಿಕ ವ್ಯಕ್ತಿಗಳ ದಾಳಿಗೆ ಬಲಿಯಾಗುವ ಸರಣಿ ಮುಂದುವರೆದಿದೆ. ಕಾಶ್ಮೀರದಲ್ಲಿ ಜಿಹಾದ್ ನಡೆಸುತ್ತಿದ್ದ ಲಷ್ಕರ್‌ ಎ ತೊಯ್ಬಾ ಕಮಾಂಡರ್‌ ಬಿಲಾಲ್ ಆರಿಫ್‌ ಸಲಾಫಿಯಾನನ್ನು ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇದರೊಂದಿಗೆ ಕಳೆದ 4 ವರ್ಷದಲ್ಲಿ ಪಾಕ್‌ನಲ್ಲಿ ಇದೇ ರೀತಿ ಹತ್ಯೆಯಾದ ಉಗ್ರರ ಸಂಖ್ಯೆ 33ಕ್ಕೆ ತಲುಪಿದೆ.

ಗುಂಡೇಟು:

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮುರ್ಡಿಕೆಯ ಮರ್ಕಜ್‌ ತೈಬಾದಲ್ಲಿ ರಂಜಾನ್‌ ಪ್ರಾರ್ಥನೆ ಮುಗಿಸಿ ಹೊರಬರುವ ವೇಳೆ ಬಿಲಾಲ್‌ ಮೇಲೆ ಅನಾಮಿಕ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಏಕಾಏಕಿ ಗುಂಡಿನ ದಾಳಿಯಾಗುತ್ತಿದ್ದಂತೆ ಸ್ಥಳದಲ್ಲಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಸಲಾಫಿಯನ್ನು ಸಮೀಪದಲ್ಲಿದ್ದ ಜನರು ಎತ್ತಿಕೊಳ್ಳಲು ಪ್ರಯತ್ನಿಸುತ್ತಿರುವುದು, ಆತ ಒದ್ದಾಡುತ್ತಿರುವುದು ಸಮೀಪದ ಸಿಸಿಟೀವಿಯಲ್ಲಿ ಸೆರೆಯಾಗಿದೆ.

ಬಿಲಾಲ್‌ ಲಷ್ಕರ್‌ನ ಉನ್ನತ ಶ್ರೇಣಿಯ ಕಮಾಂಡರ್‌

ಬಿಲಾಲ್‌ ಲಷ್ಕರ್‌ನ ಉನ್ನತ ಶ್ರೇಣಿಯ ಕಮಾಂಡರ್‌ ಆಗಿದ್ದು, ಪಾಕಿಸ್ತಾನದಾದ್ಯಂತ ಯುವಕರನ್ನು ಕಾಶ್ಮೀರ ಜಿಹಾದ್‌ಗೆ ಸೇರಿಸುವ ಹೊಣೆ ಹೊತ್ತಿದ್ದನು. ಇದಕ್ಕಾಗಿ ಮರ್ಕಜ್‌ ತೈಬಾವನ್ನು ತನ್ನ ನೆಲೆಯಾಗಿ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌ ತೈಲದ ಮೇಲಿನ ಅಮೆರಿಕ ನಿರ್ಬಂಧ ತೆರವು - ವೈರಿ ದೇಶದ ಬಗ್ಗೆ ಮೆತ್ತಗಾದರೆ ಟ್ರಂಪ್‌?
ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ