
ಪ್ಯೋಂಗ್ಯಾಂಗ್ (ಫೆ. 15): ಕೊರೋನಾ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಯಾರೂ ಶಂಕಿತರು ಮನೆಯಿಂದ ಹೊರಗೆ ಬರಬಾರದು ಎನ್ನುವ ಆಜ್ಞೆ ಉಲ್ಲಂಘಿಸಿ ಹೊರ ಬಂದ ಶಂಕಿತನೋರ್ವನನ್ನು ಉತ್ತರ ಕೊರಿಯಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.
ಕೊರೋನಾಗೆ ಭಾರತೀಯ ಮೂಲದ ವೈದ್ಯನಿಂದ ಲಸಿಕೆ: ಮಾದರಿಯಾದರು ವಿಶ್ವಕ್ಕೆ!
ಆ ಮೂಲಕ ಸರ್ವಾಧಿಕಾರಿ ಕಿಮ್ ಜೋಂಗ್ ದೇಶದಲ್ಲಿ ಕೊರೋನಾಗೆ ಮೊದಲ ಬಲಿ ಆದಂತಾಗಿದೆ. ಇತ್ತೀಚೆಗೆ ಚೀನಾದಿಂದ ಬಂದಿದ್ದ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿರಬಹುದೆಂಬ ಶಂಕೆಯಿಂದ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು.
ಆತ ಸ್ನಾನಕ್ಕಾಗಿ ಹೊರ ಬಂದಿದ್ದು, ತಕ್ಷಣವೇ ಆತನನ್ನು ಬಂಧಿಸಿ ಗುಂಡಿಕ್ಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಉತ್ತರ ಕೊರಿಯಾದಲ್ಲಿ ಈವರೆಗೆ ಯಾರಿಗೂ ಕೊರೋನಾ ಅಂಟದಿದ್ದರೂ, ಕಿಮ್ ಜೋಂಗ್ ದೇಶಾದ್ಯಂತ ಸೇನಾ ಕಾನೂನು ಹೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ