
ಲಂಡನ್[ಫೆ.14]: ನೀವು ಯಾವತ್ತಾದರೂ ಇಲಿಗಳು ಜಗಳವಾಡುವುದನ್ನು ಕಂಡಿದಿದ್ದೀರಾ? ಚೂಂ.. ಚೂಂ.. ಚೂಂ... ಎಂದು ಕೂಗುತ್ತಾ ಜಗಳವಾಡುವ ಇಲಿಗಳ ಫೋಟೋ ಒಂದು ಸದ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಫೋಟೋ ಸೆರೆ ಹಿಡಿದ ವ್ಯಕ್ತಿಗೆ Wildlife Photographer Of The Year ಸನ್ಮಾನ ಲಭಿಸಿದೆ.
ಇಲಿಗಳ ಈ ಜಗಳವಾಡುವ ಫೋಟೋ ಹಿಡಿದ ಫೋಟೋಗ್ರಾಫರ್ ಹೆಸರು Sam Rowley. ಸದ್ಯ ಈ ಫೋಟೋ Lumix People's Choice Awardಗೂ ಆಯ್ಕೆಯಾಗಿದೆ. ಈ ಸ್ಪರ್ಧೆಗೆ ಬರೋಬ್ಬರಿ 42 ಸಾವಿರ ಜನರು ಫೋಟೋಗಳನ್ನು ಕಳುಹಿಸಿದ್ದು, ಕೊನೆಯ 25 ಅತ್ಯುತ್ತಮ ಫೋಟೋಗಳಲ್ಲಿ ಇದು ಸ್ಥಾನ ಪಡೆದುಕೊಂಡಿತ್ತು.
ತಿಂಡಿಗಾಗಿ ನಡೆಯುತ್ತಿತ್ತು ಜಗಳ
ಇದು ಲಂಡನ್ ನ ಅಂಡರ್ ಗ್ರೌಂಡ್ ಸ್ಟೇಷನ್ ನಲ್ಲಿ ಸೆರೆ ಹಿಡಿದ ಫೋಟೋ ಆಗಿದೆ. ವಾಸ್ತವವಾಗಿ ಈ ಎರಡೂ ಇಲಿಗಳು ತಿಂಡಿಗಾಗಿ ಜಗಳವಾಡುತ್ತಿದ್ದವು. ಹೀಗಾಘೇ ಈ ಅಪರೂಪದ ಫೋಟೋಗೆ ಅವರು Wildlife Photographer Of The Year ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಫೋಟೋಗಳಿಗೂ ಮನ್ನಣೆ
ಈ ಸ್ಪರ್ಧೆಯಲ್ಲಿ, ಈ ಫೋಟೋಗಳನ್ನು Highly Recommended ಫೋಟೋ ಲಿಸ್ಟ್ ನಲ್ಲಿ ಇರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ