ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಇರಾನ್‌ನಲ್ಲಿ ಹೋರಾಟ ಮಾಡಿ ಜೈಲು ಪಾಲಾಗಿರುವ ಇರಾನ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ, ನರ್ಗಿಸ್ ಮೊಹಮ್ಮದಿ ಅವರಿಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಒಸ್ಲೋ: ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಇರಾನ್‌ನಲ್ಲಿ ಹೋರಾಟ ಮಾಡಿ ಜೈಲು ಪಾಲಾಗಿರುವ ಇರಾನ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ, ನರ್ಗಿಸ್ ಮೊಹಮ್ಮದಿ ಅವರಿಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ 19ನೇ ಮಹಿಳೆಯಾಗಿ ನರ್ಗಿಸ್ ಹೊರಹೊಮ್ಮಿದ್ದು, ಪ್ರಸ್ತುತ ನರ್ಗಿಸ್ ಮೊಹಮ್ಮದಿ ಜೈಲಿನಲ್ಲೇ ಇದ್ದಾರೆ.
ನಾರ್ವೆಯ ನೊಬೆಲ್ ಪ್ರಶಸ್ತಿ ಸಮಿತಿ ಈ ಬಾರಿಯ ಅಂದರೆ 2023ರ ಶಾಂತಿ ಪ್ರಶಸ್ತಿಯನ್ನು ನರ್ಗಿಸ್ ಮೊಹಮ್ಮದ್ ಅವರಿಗೆ ನೀಡಲು ಬಯಸಿದೆ. ನರ್ಗಿಸ್ ಅವರು ಇರಾನ್‌ನ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆ ವಿರುದ್ಧ ಹೋರಾಟ ನಡೆಸಿ ಮಾನವ ಹಕ್ಕುಗಳ ಮರುಸ್ಥಾಪನೆಗೆ ಉತ್ತೇಜನ ನೀಡಿದ್ದರು ಎಂದು ನಾರ್ವೆಯ ನೊಬೆಲ್ ಕಮಿಟಿ ಹೇಳಿದೆ.
ಆಗ ಕೆಮಿಸ್ಟ್ರಿಯಲ್ಲಿ ಫೇಲ್ : ಈಗ ರಸಾಯನಶಾಸ್ತ್ರದಲ್ಲಿ ನೊಬೆಲ್: ವಿಜ್ಞಾನಿ ಬವೆಂಡಿ ರೋಚಕ ಕಹಾನಿ
ಈ ಪ್ರಶಸ್ತಿ ಮೊತ್ತವೂ 11 ಮಿಲಿಯನ್ ಸ್ವಿಡಿಶ್ ಕ್ರೌನ್ ( Swedish crowns) ಕರೆನ್ಸಿಯನ್ನು ಹೊಂದಿದೆ (ಅಂದಾಜು 1 ಮಿಲಿಯನ್ ಡಾಲರ್) ಈ ಪ್ರಶಸ್ತಿಯನ್ನು ಡಿಸೆಂಬರ್ 10 ರಂದು ಒಸ್ಲೋದಲ್ಲಿ ಪ್ರದಾನ ಮಾಡಲಾಗುತ್ತದೆ. ಅಂದೇ ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಿದ್ದ ಅಲ್ಫ್ರೆಡ್ ನೊಬೆಲ್ ಅವರ ಜನ್ಮದಿನವಾಗಿದೆ. 1895 ರಲ್ಲಿ ಅಲ್ಫ್ರೆಡ್ ನೊಬೆಲ್ ಅವರು ಈ ಪ್ರಶಸ್ತಿಯನ್ನು ಹುಟ್ಟು ಹಾಕಿದ್ದರು.
ಮೊಹಮ್ಮದಿ ಅವರು ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಿರುವ ಇರಾನ್‌ನಲ್ಲಿ(Iran) ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 16 ರಂದು ಮಹ್ಸಾ ಅಮ್ನಿ ಎಂಬ ಕುರ್ದಿಶ್ ಯುವತಿಯನ್ನು ಸರಿಯಾಗಿ ಬುರ್ಕಾ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಅಲ್ಲಿನ ಮೂಲಭೂತವಾದಿಗಳು (morality police) ಹೊಡೆದು ಕೊಂದಿದ್ದರು. ಇದಾದ ನಂತರ ಅಲ್ಲಿ ಮಹಿಳೆಯರು ಸಾವಿರ ಸಾವಿರ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ಮಾಡಿ ನ್ಯಾಯಕ್ಕೆ ಆಗ್ರಹಿಸಿದ್ದರು.
ಒಂದೇ ದಿನ ಆರು ಬಾರಿ ಹೃದಯಾಘಾತವಾದ ವಿದ್ಯಾರ್ಥಿಯ ಬದುಕಿಸಿದ ವೈದ್ಯರು
ಇದೇ ಹೋರಾಟದಲ್ಲಿ ನರ್ಗಿಸ್ ಮಹೊಮ್ಮದಿ ಭಾಗಿಯಾಗಿದ್ದರು. ಇವರನ್ನು ಇದುವರೆಗೆ 13 ಬಾರಿ ಬಂಧಿಸಲಾಗಿದೆ. ಐದು ಪ್ರಕರಣಗಳಲ್ಲಿ ಅಪರಾಧಿ ಮಾಡಲಾಗಿದ್ದು, ಒಟ್ಟು 31 ವರ್ಷಗಳ ಕಾಲ ಜೈಲು ಶಿಕ್ಷೆ 154 ಛಡಿ ಏಟಿನ ಶಿಕ್ಷೆಯನ್ನು ವಿಧಿಸಲಾಗಿದೆ. ಆಕೆಯ ಕೆಚ್ಚೆದೆಯ ಹೋರಾಟದಿಂದ ಸ್ವತಃ ಅವರು ವೈಯಕ್ತಿಕವಾಗಿ ಸಾಕಷ್ಟು ಹಾನಿಗೊಳಗಾಗಿದ್ದಾರೆ ಎಂದು ನೊಬೆಲ್ ಸಂಸ್ಥೆ ವೆಬ್‌ಸೈಟ್ ಹೇಳಿದೆ.
ನರ್ಗಿಸ್ ಮೊಹಮ್ಮದ್ ಓರ್ವ ಮಾನವ ಹಕ್ಕುಗಳ (human rights) ಹೋರಾಟಗಾರ್ತಿ, ವಕೀಲೆ ಹಾಗೂ ಸ್ವಾತಂತ್ರ ಹೋರಾಟಗಾರ್ತಿಯಾಗಿದ್ದು(freedom fighter), ಅವರಿಗೆ ಈ ಬಾರಿ ನೊಬೆಲ್ ನೀಡಲಾಗುತ್ತಿದೆ. ನಾರ್ವೆಯ ಇರಾನ್‌ನಲ್ಲಿ ಮಾನವ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಅವರ ಧೈರ್ಯಶಾಲಿ ಹೋರಾಟವನ್ನು ಗೌರವಿಸಲು ಬಯಸುತ್ತದೆ ಎಂದು ವೆಬ್‌ಸೈಟ್ ಹೇಳಿದೆ. ನರ್ಗಿಸ್ ಮೊಹಮ್ಮದಿ ಅವರು 2003 ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಶಿರಿನ್ ಎಬಾಡಿ (Shirin Ebadi) ನೇತೃತ್ವದ ಸರ್ಕಾರೇತರ ಸಂಸ್ಥೆಯಾದ ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್‌ನ ಉಪ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರೇಯಸಿ ಜಾಕ್ವೆಲಿನ್ ಫೋಟೋಗೆ ಕಾಮೆಂಟ್: ಗಾಯಕ ಮಿಕಾ ಸಿಂಗ್‌ಗೆ ನೊಟೀಸ್ ಕಳುಹಿಸಿದ ಸುಕೇಶ್ ಚಂದ್ರಶೇಖರ್
ಪ್ರಸ್ತುತ ತೆಹ್ರಾನ್‌ನ (Tehran prison) ಜೈಲಿನಲ್ಲಿ ಕೊಳೆಯುತ್ತಿರುವ ನರ್ಗಿಸ್ ಅವರ ವಿರುದ್ಧ ಮೂಲಭೂತವಾದಿ ಸರ್ಕಾರದ ವಿರುದ್ಧ ದಂಗೆಯೆದ್ದ ಹಾಗೂ ದಂಗೆಯನ್ನು ಪ್ರಚೋದಿಸಿದ ಆರೋಪವಿದೆ.
BREAKING NEWS
The Norwegian Nobel Committee has decided to award the 2023 to Narges Mohammadi for her fight against the oppression of women in Iran and her fight to promote human rights and freedom for all. pic.twitter.com/2fyzoYkHyf