ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ; ಕಬ್ಬಿಣದ ಬಳಕೆ ಇಲ್ಲ!

Kannadaprabha News   | Asianet News
Published : Feb 15, 2020, 10:50 AM ISTUpdated : Feb 15, 2020, 11:56 AM IST
ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ; ಕಬ್ಬಿಣದ ಬಳಕೆ ಇಲ್ಲ!

ಸಾರಾಂಶ

ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಮೊತ್ತಮೊದಲ ಹಿಂದೂ ದೇವಾಲಯ ಪರಿಸರ ಸ್ನೇಹಿಯಾಗಿರಲಿದೆ.

ದುಬೈ (ಫೆ. 15): ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಮೊತ್ತಮೊದಲ ಹಿಂದೂ ದೇವಾಲಯ ಪರಿಸರ ಸ್ನೇಹಿಯಾಗಿರಲಿದೆ. ದೇವಾಲಯ ನಿರ್ಮಾಣಕ್ಕೆ ಕಬ್ಬಿಣ ಹಾಗೂ ಉಕ್ಕನ್ನು ಬಳಸುವುದಿಲ್ಲ ಎಂದು ದೇವಸ್ಥಾನ ಸಮಿತಿ ಅಧಿಕಾರಿಗಳು ಹೇಳಿದ್ದಾರೆ.

ಹಚ್ಚೇವು ಕನ್ನಡದ ದೀಪ: ಇಂಗ್ಲೆಂಡ್ ಹಣಕಾಸು ಸಚಿವರಾಗಿ ಇನ್ಫಿ ಮೂರ್ತಿ ಅಳಿಯ!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಇಲ್ಲಿಗೆ ಆಗಮಿಸಿದಾಗ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಗುದ್ದಲಿ ಪೂಜೆ ನಡೆದ 2 ವರ್ಷದ ತರುವಾಯ ಕಟ್ಟಡದ ಒಂದು ಹಂತ  ಈಗ ಪೂರ್ಣಗೊಂಡಿದೆ. ತಳಪಾಯದ ಮೇಲೆ ಕಾಂಕ್ರೀಟ್ ಮಿಕ್ಸ್ ಹಾಗೂ ಹಾರುಬೂದಿ ಮಿಶ್ರಣ ಹಾಕುವ ಕೆಲಸ ಗುರುವಾರ ಮುಗಿದಿದೆ. ಹಾರುಬೂದಿಯು ಕಾಂಕ್ರೀಟನ್ನು ಬಲಗೊಳಿಸುತ್ತದೆ.

ಸಾಮಾನ್ಯವಾಗಿ ಕಾಂಕ್ರೀಟ್ ಮಿಕ್ಸ್‌ನಲ್ಲಿ ಕಬ್ಬಿಣ ಹಾಗೂ ಉಕ್ಕು ಬಳಸಲಾಗುತ್ತದೆ. ಆದರೆ ಇದರ ಬದಲು ಇಲ್ಲಿ ಪರಿಸರ ಸ್ನೇಹಿ ಹಾರುಬೂದಿ ಬಳಸಲಾಗಿದೆ. ಮುಂದಿನ ನಿರ್ಮಾಣ ಕಾರ‌್ಯದಲ್ಲೂ ಇದರದ್ದೇ ಬಳಕೆ ಆಗಲಿದೆ ಎಂದು ದೇವಾಲಯ ಸಮಿತಿ ಹೇಳಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!