ಮಾಲ್ಡೀವ್ಸ್ ಒಂದು ಚಿಕ್ಕ ದ್ವೀಪ ರಾಷ್ಟ್ರ ಇರಬಹುದು ಆದರೆ ನಮ್ಮನ್ನು ಬೆದರಿಸಲು ಯಾವ ದೇಶಕ್ಕೂ ನಾವು ಪರವಾನಗಿ ನೀಡಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಶನಿವಾರ ಭಾರತದ ವಿರುದ್ಧ ಪರೋಕ್ಷವಾಗಿ ಹೇಳಿದ್ದಾರೆ.
ನವದೆಹಲಿ: ಮಾಲ್ಡೀವ್ಸ್ ಒಂದು ಚಿಕ್ಕ ದ್ವೀಪ ರಾಷ್ಟ್ರ ಇರಬಹುದು ಆದರೆ ನಮ್ಮನ್ನು ಬೆದರಿಸಲು ಯಾವ ದೇಶಕ್ಕೂ ನಾವು ಪರವಾನಗಿ ನೀಡಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಶನಿವಾರ ಭಾರತದ ವಿರುದ್ಧ ಪರೋಕ್ಷವಾಗಿ ಹೇಳಿದ್ದಾರೆ. 5 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದ ಮುಯಿಜು, ವಾಪಸ್ಸಾದ ಬಳಿಕ ವಿಮಾನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದು ಪರೋಕ್ಷವಾಗಿ ಭಾರತದ ವಿರುದ್ಧ ಗುಡುಗಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ನಮ್ಮದು ಚಿಕ್ಕ ದ್ವೀಪವೇ ಆಗಿರಬಹುದು. ಆದರೆ ನಾವು 9 ಲಕ್ಷ ಚ.ಕಿ.ಮೀ. ಆರ್ಥಿಕ ವಲಯವನ್ನು ಹೊಂದಿದ್ದೇವೆ. ಹಿಂದೂ ಮಹಾಸಾಗರ ಎಲ್ಲರಿಗೂ ಸೇರಿದೆ ಎಂದರು. ಮಾಲ್ಡೀವ್ಸ್ ಭಾರತದ ಹಿತ್ತಲಿನಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಯಾವುದೇ ದೇಶದ ಹಿತ್ತಲಿನಲ್ಲಿಲ್ಲ. ನಮ್ಮದು ಸ್ವತಂತ್ರ್ಯ, ಸಾರ್ವಭೌಮ ದೇಶವಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್ ಅಧ್ಯಕ್ಷ, ಸಚಿವರು ಮೋದಿ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿದ್ದು, ಮಾಲ್ಡೀವ್ಸ್ ರಾಯಭಾರಿಯನ್ನು ಕರೆಸಿ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.
ಮಾಲ್ಡೀವ್ಸ್ ಬುಕ್ಕಿಂಗ್ ಕ್ಯಾನ್ಸಲ್ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip
ಮುಂಬೈ ಏರ್‌ಪೋರ್ಟ್‌ನ ಏರೋಬ್ರಿಡ್ಡಲ್ಲೇ ನಟಿ ರಾಧಿಕಾ ಆಪ್ಟೆ ಲಾಕ್!
ಮುಂಬೈ: ವಿಮಾನ ತಡವಾದ ಹಿನ್ನೆಯಲ್ಲಿ, ಇನ್ನೇನು ವಿಮಾನ ಹತ್ತಲೆಂದು ನಿಲ್ದಾಣದ ಏರೋಬ್ರಿಡ್ಜ್‌ನಲ್ಲಿ ಹೊರಟಿದ್ದ ನಟಿ ರಾಧಿಕಾ ಆಪ್ಟೆ ಹಾಗೂ ಇತರ ಪ್ರಯಾಣಿಕರನ್ನು ಅಲ್ಲಿಯೇ ಗಂಟೆಗಳ ಕಾಲ ಕೂಡಿ ಹಾಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಶನಿವಾರ ಮುಂಜಾನೆ 8.30ಕ್ಕೆ ಮುಂಬೈನಿಂದ ಭುವನೇಶ್ವರಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನ ಹತ್ತಲೆಂದು ರಾಧಿಕಾ ಹಾಗೂ ಇತರ ಪ್ರಯಾಣಿಕರು ನಿಲ್ದಾಣದ ಏರೋಬ್ರಿಡ್ಜ್ ಏರಿದ್ದರು. ಆದರೆ ಆಗ ವಿಮಾನ ತಡವಾಗಿದೆ. ಆಗ ಪ್ರಯಾಣಿಕರನ್ನು ಹೊರಗೂ ಬಿಡದೇ ವಿಮಾನವನ್ನೂ ಹತ್ತಿಸಲಾಗದೇ ಗಂಟೆಗಟ್ಟಲೆ ಏರೋಬ್ರಿಡ್ಜ್‌ನಲ್ಲೇ ಕೂಡಿ ಹಾಕಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆದ ರಾದ್ಧಾಂತವನ್ನು ಸಂಪೂರ್ಣವಾಗಿ ಫೋಟೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಆದರೆ ಯಾವ ವಿಮಾನ ನಿಲ್ದಾಣ ಮತ್ತು ಏರ್‌ಲೈನ್ಸ್ ಸಂಸ್ಥೆ ಎಂದು ರಾಧಿಕಾ ಆಪ್ಟೆ ತಿಳಿಸಿಲ್ಲ
ಮಾಲ್ಡೀವ್ಸ್ ಬಗ್ಗೆ ಹಸ್ತಕ್ಷೇಪ ಸಲ್ಲ: ಮುಯಿಜು ಭೇಟಿ ಬೆನ್ನಲ್ಲೇ ಭಾರತಕ್ಕೆ ಚೀನಾ ಪರೋಕ್ಷ ಟಾಂಗ್