ತನ್ನ ಬಹು ಕಾಲದ ಬಾಯ್‌ಫ್ರೆಂಡನ್ನು ವರಿಸಿದ ಚಾಟ್ ಜಿಪಿಟಿ ತಯಾರಕ ಸ್ಯಾಮ್ ಆಲ್ಟ್‌ಮ್ಯಾನ್

By Suvarna News  |  First Published Jan 13, 2024, 6:45 PM IST

ಚಾಟ್‌ ಜಪಿಟಿ ಸಧ್ಯ ಆ್ಯಪ್‌ ಕ್ಷೇತ್ರದಲ್ಲಿ ಹೊಸ ಸೆನ್ಸೇಶನ್. ಇದೀಗ ಚಾಟ್ ಜಿಪಿಟಿಯ ತಯಾರಕ ಸ್ಯಾಮ್ ಆಲ್ಟ್‌ಮ್ಯಾನ್ ತನ್ನ ಧೀರ್ಘ ಕಾಲದ ಬಾಯ್‌ಫ್ರೆಂಡ್ ಆಲಿವರ್ ಮುಲ್ಹೆರಿನ್ ‌ರೊಂದಿಗೆ ರಿಂಗ್ ಬದಲಾಯಿಸಿಕೊಂಡಿದ್ದಾರೆ. 


OpenAI ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ ತಮ್ಮ ದೀರ್ಘಕಾಲದ ಗೆಳೆಯ ಆಲಿವರ್ ಮುಲ್ಹೆರಿನ್ ಅವರನ್ನು ವಿವಾಹವಾಗಿದ್ದಾರೆ. ಅವರ ಉಂಗುರ ಸಮಾರಂಭದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಇದೇ ಸ್ಯಾಮ್ ಆಲ್ಟ್‌ಮ್ಯಾನ್ ಪ್ರಸಿದ್ಧ ಆ್ಯಪ್ ಚಾಟ್ ಜಿಪಿಟಿಯ ತಯಾರಕರಾಗಿದ್ದಾರೆ. ಅವರು ಅಲಿವರ್ ಜೊತೆಗೆ ತಮ್ಮ ಸಂಬಂಧವನ್ನು ಬಹುತೇಕ ಗೌಪ್ಯವಾಗಿಯೇ ಇಟ್ಟಿದ್ದರೂ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಯೋಜಿಸಿದ್ದ ಯುಎಸ್ ಸ್ಟೇಟ್ ಡಿನ್ನರ್‌ನಲ್ಲಿ ಮೊದಲ ಬಾರಿ ಗೆಳೆಯನೊಂದಿಗೆ ಭಾಗವಹಿಸಿದ್ದರು.

Tap to resize

Latest Videos

ಚಿತ್ರಗಳು ಸುಂದರವಾದ ಸ್ಥಳದಲ್ಲಿ ಆಲ್ಟ್‌ಮ್ಯಾನ್ ಮತ್ತು ಮುಲ್ಹೆರಿನ್ ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ತೋರಿಸುತ್ತದೆ. ಇವುಗಳನ್ನು ಮುಲ್ಹೆರಿನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಸ್ಯಾಮ್ ತಾವು ನ್ಯೂಯಾರ್ಕ್ ಮ್ಯಾಗಜೀನ್‌ಗೆ ಕೊಟ್ಟಿರುವ ಸಂದರ್ಶನದಲ್ಲಿ ತಾನು ಮತ್ತು ಗೆಳೆಯ ಆಲಿವರ್ ಮುಲ್ಹೆರಿನ್ ಶೀಘ್ರದಲ್ಲೇ ಮಕ್ಕಳನ್ನು ಹೊಂದಲು ಬಯಸುವುದಾಗಿ ಹೇಳಿದ್ದರು.

ವಾರದ ದಿನಗಳಲ್ಲಿ, ಆಲ್ಟ್‌ಮ್ಯಾನ್ ಮತ್ತು ಮುಲ್ಹೆರಿನ್ ಸ್ಯಾನ್ ಫ್ರಾನ್ಸಿಸ್ಕೋ ನಗರದ ರಷ್ಯನ್ ಹಿಲ್‌ನಲ್ಲಿರುವ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಾರೆ. ವಾರಾಂತ್ಯದಲ್ಲಿ, ಅವರು ಕ್ಯಾಲಿಫೋರ್ನಿಯಾದ ನಾಪಾದಲ್ಲಿನ ಖಾಸಗಿ ರಾಂಚ್‌ನಲ್ಲಿ 25 ವರ್ಷ ಹಳೆಯ ಮನೆಯಲ್ಲಿ ವಾಸಿಸುತ್ತಾರೆ. ಅಲ್ಲಿ ಆಲ್ಟ್‌ಮ್ಯಾನ್ ಹಸುಗಳನ್ನು ಸಾಕುತ್ತಾರೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ.

ಮೆಲ್ಬೋರ್ನ್ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟಿಂಗ್ ಮತ್ತು ಸಾಫ್ಟ್‌ವೇರ್ ಸಿಸ್ಟಮ್ಸ್ ವಿದ್ಯಾರ್ಥಿಯಾಗಿ, ಆಲ್ಟ್‌ಮ್ಯಾನ್ ಪಾಲುದಾರನು ಭಾಷಾ ಪತ್ತೆ ಮತ್ತು ಆಟಗಳಿಗೆ ಸಂಬಂಧಿಸಿದ AI ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.

ನೆಲದ ಮೇಲೆ ಊಟ ಮಾಡಿದ ಸುಂದರಿ; ನಮ್ಮ ಸಂಸ್ಕೃತಿಯ ರಾಯಭಾರಿ ಎಂದ ನೆಟ್ಟಿ ...

ಮುಲ್ಹೆರಿನ್‌ಗಿಂತ ಮೊದಲು, ಆಲ್ಟ್‌ಮ್ಯಾನ್ ಕೊನೆಯದಾಗಿ ನಿಕ್ ಸಿವೊ ಜೊತೆ ಡೇಟಿಂಗ್ ಮಾಡುತ್ತಿದ್ದರು; ಅವರು ಒಂಬತ್ತು ವರ್ಷಗಳ ಕಾಲ ಒಟ್ಟಿಗೆ ಇದ್ದರು. ನ್ಯೂಯಾರ್ಕ್ ಮ್ಯಾಗಜೀನ್ ವರದಿಯಂತೆ  ಆಲ್ಟ್‌ಮ್ಯಾನ್ ಮತ್ತು ಅವರ ಮಾಜಿ ಗೆಳೆಯ ಲೂಪ್ಟ್ ಎಂಬ ಸ್ಟಾರ್ಟ್-ಅಪ್ ಅನ್ನು ಶುರು ಮಾಡಿದ್ದರು ಮತ್ತು ಅದರ ಮುಖಾಂತರ ಸ್ನೇಹಿತರಿಗಾಗಿ ಜಿಯೋಲೊಕೇಶನ್ ಸಾಫ್ಟ್‌ವೇರ್ ಅನ್ನು ನಿರ್ಮಿಸಿದ್ದಾರೆ.

click me!