* ಒಟ್ಟಿಗೆ ಮಲಗಬೇಡಿ, ಮುತ್ತು ಕೊಡಬೇಡಿ
* ಶಾಂಘೈ ನಿವಾಸಿಗೆ ಸರ್ಕಾರದ ಸೂಚನೆ!
* ಕೊರೋನಾ ಪ್ರಕರಣಗಳು ವಿಪರೀತ ಏರಿಕೆ
* ಅಪ್ಪಿಕೊಳ್ಳುವುದನ್ನು ನಿಷೇಧಿಸಲಾಗಿದೆ
ಶಾಂಘೈ(ಏ. 08) ಚೀನಾದ ಅತಿದೊಡ್ಡ ವಾಣಿಜ್ಯ ನಗರವಾದ ಶಾಂಘೈನಲ್ಲಿ(Shanghai) ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ನಗರದಲ್ಲಿ ಕಠಿಣ ಲಾಕ್ಡೌನ್ (Lockdown)ವಿಧಿಸಲಾಗಿದೆ. ಹಾಗಾಗಿ ಜನರಿಗೆ ಒಟ್ಟಿಗೆ (Sleeping) ಮಲಗಬೇಡಿ, ಪರಸ್ಪರ ಅಪ್ಪಿಕೊಳ್ಳಬೇಡಿ, ಮುತ್ತು (Kiss)ಕೊಡಬೇಡಿ ಎಂದು ಸರ್ಕಾರ ಸೂಚನೆ ನೀಡಿದೆ.
ಆರೋಗ್ಯ ಕಾರ್ಯಕರ್ತರು ಮೆಗಾಫೋನ್‌ಗಳಲ್ಲಿ, ‘ಇಂದಿನಿಂದ ದಂಪತಿಗಳು ಒಟ್ಟಿಗೆ ಮಲಗಬೇಡಿ, ಮುತ್ತುಕೊಡಬೇಡಿ, ಅಪ್ಪಿಕೊಳ್ಳುವುದನ್ನು ನಿಷೇಧಿಸಲಾಗಿದೆ, ನಿಮ್ಮ ಸಹಕಾರಕ್ಕೆ ಧನ್ಯವಾದಗಳು’ ಎನ್ನುವಂತಹ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೇ ನಾಯಿಗಳನ್ನು ವಾಕಿಂಗ್ ಸಹ ಕರೆತರಬಾರದು, ಮನೆಯ ಕಿಟಕಿಗಳನ್ನು ತೆರೆದು ಹಾಡಬೇಡಿ, ಸ್ವಾತಂತ್ರ್ಯಕ್ಕಾಗಿ ನಿಮ್ಮ ಆಸೆಗಳನ್ನು ನಿಯಂತ್ರಿಸಿಕೊಳ್ಳಿ ಎಂಬ ಸೂಚನೆಗಳನ್ನು ನೀಡಲಾಗಿದೆ.
undefined
ಇದಕ್ಕೂ ಮೊದಲು ಜನರಿಗೆ ಕೋವಿಡ್ ಕುರಿತಾದ ಅರಿವನ್ನು ಮೂಡಿಸಲು ರೋಬೋಗಳ ಮೂಲಕ, ಡ್ರೋನ್‌ಗಳ ಮೂಲಕ ಆರೋಗ್ಯ ಘೋಷಣೆಗಳನ್ನು ಮಾಡಲಾಗಿತ್ತು. ಮಂಗಳವಾರ ಒಂದೇ ದಿನ ಶಾಂಘೈನಲ್ಲಿ 17 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದ ಕಾರಣದಿಂದ ಲಾಕ್ಡೌನ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ಸತತ 6ನೇ ದಿನವೂ 20 ಸಾವಿರ ಕೇಸು: ಚೀನಾದ ಶಾಂಘೈ ನಗರ ಕೋವಿಡ್ ಕೇಂದ್ರವಾಗಿ ಮಾರ್ಪಟ್ಟಿದೆ. ಸತತ 6ನೇ ದಿನವೂ ಇಲ್ಲಿ ಸರಾಸರಿ 20 ಸಾವಿರದಷ್ಟುಪ್ರಕರಣಗಳು ದಾಖಲಾಗಿವೆ. ಬುಧವಾರ ಚೀನಾದಲ್ಲಿ ಒಟ್ಟು 21,784 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಶಾಂಘೈ ನಗರದ್ದೇ 19,660 ಪ್ರಕರಣಗಳಿವೆ.
ಬೆಂಗಳೂರಿನಲ್ಲಿ ಕೊರೋನಾ ಏರಕೆ: ರಾಜಧಾನಿಯಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಒಂದೇ ದಿನಕ್ಕೆ ದುಪ್ಪಟ್ಟಾಗಿದ್ದು, ಪಾಸಿಟಿವಿಟಿ ದರ ಶೇ.1.5ಕ್ಕೆ ಹೆಚ್ಚಳವಾಗಿದೆ.
ಗುರುವಾರ 57 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 44 ಮಂದಿ ಗುಣಮುಖರಾಗಿದ್ದಾರೆ. ಸಾವು ವರದಿಯಾಗಿಲ್ಲ. ಸದ್ಯ 1,350 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 3854 ನಡೆದಿದ್ದು, ಪಾಸಿಟಿವಿಟಿ ದರ ಶೇ.1.5 ರಷ್ಟುದಾಖಲಾಗಿದೆ.
ಬಯೋಬಬಲ್ ವ್ಯವಸ್ಥೆ ಕೈಬಿಡಲು ಬಿಸಿಸಿಐ ಚಿಂತನೆ..!
ಬುಧವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 500 ಇಳಿಕೆಯಾಗಿವೆ. ಆದದೂ, ಹೊಸ ಸೋಂಕಿತರ ಸಂಖ್ಯೆ ಏರಿಕೆಯಾಗಿವೆ (ಬುಧವಾರ 28 ಕೇಸ್, ಒಂದು ಸಾವು).
ಸದ್ಯ ಸಕ್ರಿಯ ಸೋಂಕಿತರ ಪೈಕಿ 11 ಮಂದಿ ಆಸ್ಪತ್ರೆಯಲ್ಲಿದ್ದಾರೆ. ನಗರದಲ್ಲಿ ಸತತ 12ನೇ ದಿನ ಹೊಸ ಕೊರೋನಾ ಕಂಟೈನ್ಮೆಂಟ್ ಪ್ರದೇಶಗಳು ವರದಿಯಾಗಿಲ್ಲ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.
ಭಾರತಕ್ಕೂ ಬಂತು ಒಮಿಕ್ರೋನ್‌ಗಿಂತ 10 ಪಟ್ಟು ಹೆಚ್ಚು ಸೋಂಕುಕಾರಕ ಎಕ್ಸ್‌ಇ: ದೇಶದಲ್ಲಿ ಕೊರೋನಾ ಅಬ್ಬರ ತೀವ್ರಗತಿಯಲ್ಲಿ ಇಳಿಕೆ ಆಗಿರುವ ಮಧ್ಯೆಯೇ, ವೈರಸ್‌ನ ಹೊಸ ರೂಪಾಂತರಿ ತಳಿಯಾದ ‘ಎಕ್ಸ್‌ಇ’ ಮುಂಬೈನಲ್ಲಿ ಪತ್ತೆಯಾಗಿದೆ. ಇದು ದೇಶದಲ್ಲಿ ಪತ್ತೆಯಾದ ಮೊದಲ ‘ಎಕ್ಸ್‌ಇ’ ರೂಪಾಂತರಿ ಪ್ರಕರಣ.
ಕಳೆದ ಜನವರಿಯಲ್ಲಿ ಬ್ರಿಟನ್‌ನಲ್ಲಿ ಇದು ಮೊದಲ ಬಾರಿ ಕಾಣಿಸಿತ್ತು ಹಾಗೂ ವಿಶ್ವಾದ್ಯಂತ 647 ಪ್ರಕರಣಗಳು ಈವರೆಗೆ ವರದಿಯಾಗಿವೆ. ಇದು ಒಮಿಕ್ರೋನ್‌ನ ‘ಬಿಎ.1’ ಹಾಗೂ ‘ಬಿಎ.2’ ಉಪತಳಿಯ ಸಂಗಮವಾಗಿದ್ದು, ‘ಬಿಎ.2’ಗಿಂತ 10 ಪಟ್ಟು ಹೆಚ್ಚು ಸೋಂಕುಕಾರಕ ಆಗಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇತ್ತೀಚೆಗೆ ಎಚ್ಚರಿಸಿತ್ತು. ಭಾರತದಲ್ಲಿಯೂ ಎಚ್ಚರಿಕೆ ಸೂತ್ರ ತೆಗೆದುಕೊಳ್ಳಲಳಾಗಿದೆ.