
ಫ್ಲೋರಿಡಾ(ಮಾ.23) ಎಲಾನ್ ಮಸ್ಕ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ಬಾರಿ ಉದ್ಯಮಿ ಏಲಿಯನ್ ಇರಬೇಕು ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಎಲನ್ ಮಸ್ಕ್ ಏಲಿಯನ್ ಅನ್ನೋದಕ್ಕೆ ಸಾಕ್ಷಿ ಲಭ್ಯವಾಗಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಯೋಜಿಸಿದ್ದ 1 ಮಿಲಿಯನ್ ಅಮೆರಿಕನ್ ಡಾಲರ್ ಡಿನ್ನರ್ ಪಾರ್ಟಿಯಲ್ಲಿ ಎಲಾನ್ ಮಸ್ಕ್ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ಕ್ಯಾಂಡಲ್‌ಲೈಟ್ ಡಿನ್ನರ್ ಪಾರ್ಟಿಯಲ್ಲಿ ಇದೀಗ ಎಲಾನ್ ಮಸ್ಕ್ ವಿಡಿಯೋ ಭಾರಿ ಚರ್ಚೆಯಾಗುತ್ತಿದೆ.
ಫ್ಲೋರಿಡಾದ ಪಾಮ್ ಬೀಚ್ ಬಳಿ ಇರುವ ಡೋನಾಲ್ಡ್ ಟ್ರಂಪ್ ಅವರ ಮಾರ್ ಎ ಲ್ಯಾಗೋ ಎಸ್ಟೇಟ್‌ನಲ್ಲಿ ಈ ಡಿನ್ನರ್ ಪಾರ್ಟಿ ಆಯೋಜಿಸಲಾಗಿದೆ. ಖುದ್ದ ಡೋನಾಲ್ಡ್ ಟ್ರಂಪ್ ಮುಂದೆ ಕುಳಿತಿದ್ದಾರೆ. ಮತ್ತೊಂದು ಟೇಬಲ್‌ನಲ್ಲಿ ಉದ್ಯಮಿ, ಟ್ರಂಪ್ ಸರ್ಕಾರದ ಭಾಗವಾಗಿರುವ ಎಲಾನ್ ಮಸ್ಕ್ ಹಾಗೂ ಪಾರ್ಟ್ನರ್ ಶಿವೊನ್ ಝಿಲಿಸ್ ಕುಳಿತಿದ್ದಾರೆ. ಡಿನ್ನರ್ ಪಾರ್ಟಿ ಟೇಬಲ್‌ನಲ್ಲಿ ಎಲಾನ್ ಮಸ್ಕ್, ಎರಡು ಸ್ಪೂನ್ ಹಾಗೂ ಫೋರ್ಕನ್ನು ಕಿರುಬೆರಳಿನಲ್ಲಿ ಬ್ಯಾಲೆನ್ಸ್ ಮಾಡುತ್ತಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ಕಡಿಮೆ ಬೆಲೆಗೆ ಟೆಸ್ಲಾ Y ಮಾಡೆಲ್ ಕಾರು ಪರಿಚಯಿಸಲು ಮುಂದಾದ ಎಲಾನ್ ಮಸ್ಕ್
ಶಿವೊನ್ ಝಿಲಿಸ್ ಜೊತೆ ಕುಳಿತುಕೊಂಡಿರುವ ಎಲಾನ್ ಮಸ್ಕ್ ಸ್ಪೂನ್ ಹಿಡಿದು ಬ್ಯಾಲೆನ್ಸಿಂಗ್ ಮಾಡುತ್ತಾ ಸಮಯ ಕಳೆದಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿ, ಟ್ರಂಪ್ ಸರ್ಕಾರದಲ್ಲಿ ಪ್ರಮುಖ ಹುದ್ದೆ ನಿರ್ವಹಿಸುತ್ತಿರುವ ಎಲಾನ್ ಮಸ್ಕ್, ಟೇಬಲ್ ಮೇಲೆ ಕುಳಿತು ಸ್ಪೂನ್ ಬ್ಯಾಲೆನ್ಸಿಂಗ್ ಮಾಡುತ್ತಿದ್ದಾರೆ ಅನ್ನೋದು ಉಹಿಸಲು ಅಸಾಧ್ಯ. ಇದಕ್ಕೆ ಹೇಳುವುದು ಎಲಾನ್ ಮಸ್ಕ್ ಏಲಿಯನ್ ಎಂದು ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ಕಸರತ್ತು ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಹಲವು ಪ್ರಶ್ನೆಗಳು ಎದ್ದಿದೆ. ಎಲಾನ್ ಮಸ್ಕ್ ನಿಜಕ್ಕೂ ತಮ್ಮ ಅರಿವಿನಲ್ಲಿ ಈ ರೀತಿ ಮಾಡಿದ್ದಾರಾ? ಅಥವಾ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಟ್ರಂಪ್ 1 ಮಿಲಿಯನ್ ಕ್ಯಾಂಡಲ್ ಲೈಟ್ ಡಿನ್ನರ್ ಇದೀಗ ಹಲವು ಕಾರಣಗಳಿಂದ ಚರ್ಚೆಯಾಗುತ್ತಿದೆ.
ಈ ಕ್ಯಾಂಡಲ್‌ಲೈಟ್ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಮಂದಿ ಒಂದು ಕುರ್ಚಿಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಪಾವತಿಸಬೇಕು. ಹೀಗೆ ಪಾವತಿಸದವರಿಗೆ ಮಾತ್ರ ಈ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ.ಇದೀಗ ಮಿಲಿಯನ್ ಡಾಲರ್ ಡಿನ್ನರ್ ಹಾಗೂ ಎಲಾನ್ ಮಸ್ಕ್ ಕಸರತ್ತಿನ ವಿಡಿಯೋ ಭಾರಿ ಚರ್ಚೆಯಾಗುತ್ತಿದೆ.
ವಿಶ್ವದ ನಂ.1 ಶ್ರೀಮಂತ ಮಸ್ಕ್ ಆಸ್ತಿ ಮೌಲ್ಯ 10 ಲಕ್ಷ ಕೋಟಿ ಕುಸಿತ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ