ವಿಶ್ವದ ಹಲವು ರಾಜಕೀಯ ನಾಯಕರು, ಉದ್ಯಮಿಗಳು ತಮ್ಮ ತಮ್ಮ ದೇಶದಲ್ಲಿರುವ ಹಿಂದೂ ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿದ ಉದಾಹರಣೆ ಸಾಕಷ್ಟಿದೆ. ಹಿಂದೂ ಧರ್ಮದ ಆಚಾರ-ವಿಚಾರಗಳಿಂದ ಆಕರ್ಷಿತರಾದವರೂ ಇದ್ದಾರೆ. ಇದೀಗ ನ್ಯೂಜಿಲೆಂಡ್ ಪ್ರಧಾನಿ ಜಾಸಿಂಡ ಆರ್ಡ್ರನ್ ಹಿಂದೂ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇದು ವೈರಲ್ ಆಗಿದೆ.
ಆಕ್ಲೆಂಡ್(ಆ.08): ವಿಶ್ವದಲ್ಲಿ ಅತೀ ಹೆಚ್ಚುಮಂದಿ ಇಷ್ಟಪಡುವ ಪ್ರಧಾನಿಗಳ ಪೈಕಿ ನ್ಯೂಜಿಲೆಂಡ್ ಪ್ರಧಾನಿ ಜಾಸಿಂಡ ಅರ್ಡ್ರನ್ ಕೂಡ ಒಬ್ಬರು. 40 ವರ್ಷದ ಜಾಸಿಂಡ ತಮ್ಮ ಆಡಳಿತದಿಂದ ಎಲ್ಲರ ಗಮನಸೆಳೆದಿದ್ದಾರೆ. ಕಳೆದ ವರ್ಷ ನಡೆದ ಭಯೋತ್ಪಾದಕರ ದಾಳಿಯನ್ನು ನಿರ್ವಹಿಸಿದ ರೀತಿ, ಇದೀಗ ಮಹಾಮಾರಿ ಕೊರೋನಾವನ್ನು ನ್ಯೂಜಿಲೆಂಡ್‌ನಿಂದ ಹೊಡೆದೋಡಿಸಿದ ರೀತಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇದೀಗ ಇದೇ ನ್ಯೂಜಿಲೆಂಡ್ ಪ್ರಧಾನಿ ಜಾಸಿಂಡ ಅರ್ಡ್ರನ್ ಹಿಂದೂ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಸುದ್ದಿಯಾಗಿದ್ದಾರೆ.
ನ್ಯೂಜಿಲೆಂಡ್ ಪೂರ್ಣ ಕೊರೋನಾ ಮುಕ್ತ: ಸಾಮಾಜಿಕ ಅಂತರ, ಮಾಸ್ಕ್ ಬಳಕೆಯೂ ಇಲ್ಲ!.
ಆಕ್ಲೆಂಡ್‌ನಲ್ಲಿರುವ ರಾಧಾ ಕೃಷ್ಣ ಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಜಾಸಿಂಡ ಆರ್ಡ್ರನ್ ಪೂಜೆ ಸಲ್ಲಿಸಿದ್ದಾರೆ. ಕಾರಿನಿಂದ ಇಳಿದು ಮಂದಿರ ಪ್ರವೇಶಿಸುವ ಮೊದಲು ಹಿಂದೂ ಸಂಪ್ರದಾಯದಂತೆ ಪಾದರಕ್ಷೆಗಳನ್ನು ಕಳಚಿ ಮಂದಿರ ಒಳ ಪ್ರವೇಶಿಸಿದ್ದಾರೆ. ಮಂದಿರಕ್ಕೆ ಆಗಮಿಸಿದ ಪ್ರಧಾನಿಯನ್ನು ನಮಸ್ತೆ ಎಂದು ಹೇಳುವ ಮೂಲಕ ಸ್ವಾಗತಿಸಿದ್ದಾರೆ.
ಕೊರೋನಾ ಹೊಡೆದೋಡಿಸಿದ ನ್ಯೂಜಿಲೆಂಡ್‌ನಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ; ವಿಶ್ವಕ್ಕೆ ಮಾದರಿ!...
ಸಂಸ್ಕೃತ ಶ್ಲೋಕಗಳು, ಮಂತ್ರಗಳಿಂದ ಪೂಜೆ ಸಲ್ಲಿಸಿದ ಅರ್ಚಕರು ಜಾಸಿಂಡ್ ಆರ್ಡ್ರನ್‌ಗೆ ಪ್ರಸಾದ ನೀಡಿದ್ದಾರೆ. ಇದೇ ವೇಳೆ ಶಾಲು ಹೊದಿಸಿ ಗೌರವಿಸಿದ್ದಾರೆ. ಪ್ರಧಾನಿ ಕೂಡ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಹಿಂದೂ ಭಕ್ತರಂತೆ ಕೈಗೊಳ ಜೋಡಿಸಿ ನಿಂತು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.