ಭಾರತ, ಚೀನಾಗೆ ಪ್ರಯಾಣಿಸ ಬೇಡಿ; ನಾಗರಿಕರಿಗೆ ಅಮೆರಿಕ ಸೂಚನೆ!

By Suvarna News  |  First Published Aug 7, 2020, 5:43 PM IST

ಅಮೆರಿಕದಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಹೇರಲಾಗಿದ್ದ ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ಇದೀಗ ಸಡಿಲಗೊಳಿಸಲಾಗುತ್ತಿದೆ. ಸೋಂಕಿತರ ಸಂಖ್ಯೆ ಕೊಂಚ ಮಟ್ಟಿನ ಇಳಿಕೆ ಕಂಡುಬಂದಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಿದೆ.. ಆದರೆ ಭಾರತ ಹಾಗೂ ಚೀನಾ ಸೇರಿದಂತೆ ಕೆಲ ದೇಶಗಳಿಗೆ ಪ್ರಯಾಣ ಮಾಡದಂತೆ ನಾಗರಿಕರಲ್ಲಿ ಅಮೆರಿಕ ಅಗ್ರಹಿಸಿದೆ.


ವಾಶಿಂಗ್ಟನ್(ಆ.07): ಕೊರೋನಾ ವೈರಸ್ ವಿರುದ್ಧದ ಹೋರಾಡುತ್ತಿರುವ ಅಮೆರಿಕ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಜಾಗತಿಕ ಪ್ರಯಾಣ ಮಟ್ಟವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಅಮೆರಿಕ ಟ್ರಾವೆಲ್ ಲೆವಲ್ 4 ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೊರೋನಾ ವೈರಸ್ ಕಾರಣ  ಮಾರ್ಚ್ 19 ರಂದು ಅಮೆರಿಕ, ತನ್ನ ನಾಗರಿಕರಲ್ಲಿ ವಿದೇಶಗಳಿಗೆ ಪ್ರಯಾಣ ಮಾಡಬೇಡಿ ಎಂದು ಸೂಚಿಸಿತ್ತು. 

ಯಾವುದೇ ಕಂಪನಿ ಟಿಕ್‌ಟಾಕ್ ಖರೀದಿಸಿದರೆ ಸರ್ಕಾರಕ್ಕೆ ಪಾಲು ನೀಡಬೇಕು; ನಿರ್ಧಾರ ಸಮರ್ಥಿಸಿದ ಟ್ರಂಪ್!

Latest Videos

undefined

ಇದೀಗ ಲೆವೆಲ್ 4 ಟ್ರಾವೆಲ್ ಸಲಹೆಯಲ್ಲಿ 50 ದೇಶಗಳಿಗೆ ಪ್ರಯಾಣ ಮಾಡದಂತೆ ಸೂಚಿಸಿದೆ. ಇದರಲ್ಲಿ ಚೀನಾ ಹಾಗೂ ಭಾರತ ಅಗ್ರಸ್ಥಾನದಲ್ಲಿದೆ. ಚೀನಾ ಹಾಗೂ ಭಾರತದಲ್ಲಿ ಕೊರೋನಾ ವೈರಸ್ ಪ್ರಮಾಣ ಹೆಚ್ಚಾದ ಕಾರಣ ಲೆವಲ್ 4 ಮಾರ್ಗಸೂಚಿಯಲ್ಲಿ ಈ ದೇಶಕ್ಕೆ ಪ್ರಯಾಣ ಮಾಡದಂತೆ ಸಲಹೆ ನೀಡಿದೆ.

ಭಾರತೀಯರಿಗಿನ್ನು ಅಮೆರಿಕದ ಸರ್ಕಾರಿ ಕೆಲಸ ಇಲ್ಲ!.

ಭಾರತದ ಕೆಲ ಭಾಗಗಳಲ್ಲಿ ನಿರ್ಬಂಧವಿದೆ. ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ವ್ಯಾಪಾರ ವಹಿವಾಟುಗಳೆಲ್ಲಾ ತಾತ್ಕಾಲಿಕ ಸ್ಥಗಿತಗೊಂಡಿದೆ. ಕೊರೋನಾ ವೈರಸ್ ದಿನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಭಾರತ ಪ್ರಯಾಣ ರದ್ದು ಮಾಡಿ ಎಂದು ಕೋರಿದೆ.

ಲೆವಲ್ 4 ಮಾರ್ಗಸೂಚಿಯಲ್ಲಿ ಭಾರತ, ಚೀನಾ ಜೊತೆಗೆ ಬ್ರೆಜಿಲ್, ರಷ್ಯಾ, ಸೌದಿ ಅರೆಬಿಯಾ, ಮೆಕ್ಸಿಕೋ, ಈಜಿಪ್ಟ್, ಭೂತಾನ್, ಬಾಂಗ್ಲಾದೇಶ, ಆಫ್ಘಾನಿಸ್ತಾನ ಸೇರಿದಂತೆ ಕೆಲ ದೇಶಗಳಿಗೆ ಪ್ರಯಾಣ ಮಾಡದಂತೆ ಅಮೆರಿಕ ಸೂಚಿಸಿದೆ. ವಿದೇಶದಿಂದ ಅಮೆರಿಕಕ್ಕೆ ಆಗಮಿಸುವವರು ಕಟ್ಟು ನಿಟ್ಟಾಗಿ ಮಾರ್ಗಸೂಚಿ ಪಾಲಿಸಲು ಸೂಚಿಸಿದೆ. 

click me!