ಕೊರೋನಾ ಹೊಡೆದೋಡಿಸಿದ ನ್ಯೂಜಿಲೆಂಡ್‌ನಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ; ವಿಶ್ವಕ್ಕೆ ಮಾದರಿ!

By Suvarna News  |  First Published Jun 4, 2020, 9:48 PM IST

ಭಾರತ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಮಹಿಳೆಯರು ಅನುಭವಿಸುವ ಅತೀ ದೊಡ್ಡ ಸಮಸ್ಯೆ ಸ್ಯಾನಿಟರಿ ಪ್ಯಾಡ್. ಹಲವರಿಗೆ ಸ್ಯಾನಿಟರಿ ಪ್ಯಾಡ್ ಕೊಳ್ಳುವ ಶಕ್ತಿಯೇ ಇಲ್ಲ. ಈ ಸಮಸ್ಯೆ ನ್ಯೂಜಿಲೆಂಡ್‌ನಲ್ಲೂ ಇದೆ.  ಕೊರೋನಾ ವೈರಸ್ ಮಹಾಮಾರಿಯನ್ನು ಸಂಪೂರ್ಣವಾಗಿ ತೊಲಗಿಸಿ, ಕೊರೋನಾ ಮುಕ್ತ ದೇಶ ಅನ್ನೋ ಖ್ಯಾತಿಗಳಿಸಿರುವ ನ್ಯೂಜಿಲೆಂಡ್ ಇದೀಗ ಸ್ಯಾನಿಟರಿ ಪ್ಯಾಡ್ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.


ನ್ಯೂಜಿಲೆಂಡ್(ಜೂ.04):  ಕೊರೋನಾ ವೈರಸ್ ಹೊಡೆದೋಡಿಸಿದ ಮೊದಲ ದೇಶ ನ್ಯೂಜಿಲೆಂಡ್. ಕಟ್ಟು ನಿಟ್ಟಿನ ನಿಯಮ, ಜನರ ಸಹಕಾರದಿಂದ ನ್ಯೂಜಿಲೆಂಡ್ ಕೊರೋನಾ ವೈರಸ್ ಮುಕ್ತವಾಗಿಸಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ನ್ಯೂಜಿಲೆಂಡ್‌ನಲ್ಲಿನ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ನೀಡಲು ನಿರ್ಧರಿಸಿದೆ.

ಕೊರೋನಾಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ವೈರಸ್ ಮುಕ್ತ ಮೊದಲ ದೇಶ !

Tap to resize

Latest Videos

ಅಧ್ಯಯನ ವರದಿಗಳ ಪ್ರಕಾರ ನ್ಯೂಜಿಲೆಂಡ್‌ನಲ್ಲಿ 9 ರಿಂದ 18 ವರ್ಷದ 95,000 ವಿದ್ಯಾರ್ಥಿನಿಯರು ತಮ್ಮ ಮುಟ್ಟಿನ(period)ವೇಳೆ ಶಾಲೆಗೆ ಗೈರಾಗುತ್ತಿದ್ದಾರೆ. ಕಾರಣ ಅವರಲ್ಲಿ ಸ್ಯಾನಿಟರಿ ಪ್ಯಾಡ್ ಕೊಳ್ಳುವ ಆರ್ಥಿಕ ಸಾಮರ್ಥ್ಯವಿಲ್ಲ. ಹೀಗಾಗಿ ನ್ಯೂಜಿಲೆಂಡ್ ಪ್ರಧಾನ ಮಂತ್ರಿ ಜಾಸಿಂದ ಅರ್ಡ್ರೆನ್ ಉಚಿತ ಪ್ಯಾಡ್ ವಿತರಿಸಲು ನಿರ್ಧರಿಸಿದ್ದಾರೆ. ಸ್ಯಾನಿಟರ್ ಪ್ಯಾಡ್ ಖರೀದಿಗೆ ಆರ್ಥಿಕ ಶಕ್ತಿ ಇಲ್ಲದೆ ಯಾವ ವಿದ್ಯಾರ್ಥಿನಿ ಕೂಡ ಶಾಲೆಗೆ ಗೈರಾಗಬಾರದು ಎಂದು ಪ್ರಧಾನಿ ಹೇಳಿದ್ದಾರೆ.

ಜುಲೈ 15 ರಿಂದು ವೈಕಾಟೋ ಶಾಲೆಯಿಂದ ನೂತನ ಯೋಜನೆ ಜಾರಿಗೆ ಬರಲಿದೆ. ಇದಕ್ಕಾಗಿ 1.7 ಮಿಲಿಯನ್ ಅಮೆರಿಕನ್ ಡಾಲಕ್ ಹಣವನ್ನು ಮೀಸರಿಸಲಾಗಿದೆ. ವಿಶ್ವದಲ್ಲಿ ಈ ಕುರಿತು ಹಲವು ಅಧ್ಯನಗಳು ನಡೆದಿದೆ. ಈ ಪ್ರಕಾರ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಶಕ್ತಿ ಇಲ್ಲದ ಮಹಿಳೆಯರು ತಮ್ಮ ಮುಟ್ಟಿನ ಸಂದರ್ಭದಲ್ಲಿ ಪೇಪರ್, ಬಟ್ಟೆ, ಹುಲ್ಲು ಬಳಸುತ್ತಾರೆ. ಇದು ಅಪಾಯಕಾರಿಯಾಗಿದೆ. 

 

Brilliant stuff. The Ardern Govt is just one to watch. They eradicate communal spread of Covid-19, tackle period poverty and the pink tax which a lot of other nations still impose on women, it's really WELL done. Kudos.

— rud (@onlyonerudziee)

ನ್ಯೂಜಿಲೆಂಡ್‌ನ ಶಾಲೆಗಳಲ್ಲಿ 12 ರಂದು ಒರ್ವ ವಿದ್ಯಾರ್ಥಿನಿ ಸ್ಯಾನಿಟರಿ ಪ್ಯಾಡ್ ಇಲ್ಲದ ಕಾರಣ ಶಾಲೆಗೆ ಗೈರಾಗುತ್ತಿರುವುದು ಅಧ್ಯಯನದಲ್ಲಿ ಹೇಳಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯೂಜಿಲೆಂಡ್ ಪ್ರಧಾನಿ, ಈ ನಿರ್ಧಾರಕ್ಕೆ ಬಂದಿದ್ದಾರೆ. ಭಾರತದಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ನೀಡಬೇಕು ಅನ್ನೋ ಕೂಗು ಹಲವು ವರ್ಷಗಳಿಂದ ಇದೆ. ಈ ಕುರಿತು ಬಾಲಿವುಡ್‌ನಲ್ಲಿ ಸಿನಿಮಾ ಕೂಡ ಬಿಡುಗಡೆಯಾಗಿದೆ.
 

click me!