ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನ, ಭೂತಾನ್ ಸೇರಿ 41 ದೇಶಗಳಿಗೆ ನೀಡುವ ವೀಸಾ ಮೇಲೆ ಕೆಲವು ನಿರ್ಬಂಧ ಹೇರುವ ಸಾಧ್ಯತೆ ಇದೆ.
ವಾಷಿಂಗ್ಟನ್ (ಮಾ.16): ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನ, ಭೂತಾನ್ ಸೇರಿ 41 ದೇಶಗಳಿಗೆ ನೀಡುವ ವೀಸಾ ಮೇಲೆ ಕೆಲವು ನಿರ್ಬಂಧ ಹೇರುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ ಕೆಲ ಮುಸ್ಲಿಂ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ್ದರು. ಇದೀಗ 41 ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಹೇರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
3 ಗುಂಪು: ಟ್ರಂಪ್ ಆಡಳಿತವು ನಿರ್ಬಂಧ ಹೇರಲು ಉದ್ದೇಶಿಸಿರುವ ಈ 41 ದೇಶಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದೆ. ಮೊದಲ ಗುಂಪಿನಲ್ಲಿ ಅಫ್ಘಾನಿಸ್ತಾನ, ಇರಾನ್, ಸಿರಿಯಾ, ಕ್ಯೂಬಾ, ಉತ್ತರ ಕೊರಿಯಾ ಸೇರಿ 10 ದೇಶಗಳಿವೆ. ಈ ದೇಶಗಳಿಗೆ ಅಮೆರಿಕದ ವೀಸಾವನ್ನು ಸಂಪೂರ್ಣವಾಗಿ ರದ್ದು ಮಾಡಲಾಗುವುದು.ಎರಡನೇ ಗುಂಪಿನಲ್ಲಿ ಎರಿಟ್ರಿಯಾ, ಹೈಟಿ, ಲಾವೋಸ್, ಮ್ಯಾನ್ಸಾರ್ ಮತ್ತು ದಕ್ಷಿಣ ಸುಡಾನ್ ದೇಶಗಳಿದ್ದು, ಕೆಲ ವಿನಾಯ್ತಿಗಳೊಂದಿಗೆ ಪ್ರವಾಸಿ, ಶೈಕ್ಷಣಿಕ ಸೇರಿ ಇತರೆ ವಲಸೆ ವೀಸಾಗಳ ಮೇಲೆ ನಿರ್ಬಂಧ ಹೇರಲಾಗುವುದು.
ಪ್ರಧಾನಿ ಮೋದಿ ಅವರ ಜೀವನದ ಕುರಿತು ಇಂದು 3 ಗಂಟೆ ಕುತೂಹಲಕಾರಿ ಪಾಡ್ ಕಾಸ್ಟ್
ಮೂರನೇ ಗುಂಪಿನಲ್ಲಿ ಪಾಕಿಸ್ತಾನ, ಭೂತಾನ್, ಮ್ಯಾನ್ಯಾರ್ ಸೇರಿ 26 ದೇಶಗಳಿದ್ದು, ಒಂದು ವೇಳೆ ಪ್ರಜೆಗಳ ಪೂರ್ವಾಪರಗಳ ಪರಿಶೀಲನಾ ಕ್ರಮಗಳಲ್ಲಿ ಕಂಡುಬಂದಿರುವ ನ್ಯೂನತೆಗಳನ್ನು 60 ದಿನಗಳಲ್ಲಿ ಈ ದೇಶಗಳ ಸರ್ಕಾರಗಳು ಸರಿಪಡಿಸದಿದ್ದರೆ ಅಮೆರಿಕದ ವೀಸಾಗಳನ್ನು ಭಾಗಶಃ ರದ್ದು ಮಾಡಲಾಗುವುದು ಎಂದು ಹೇಳಲಾಗಿದೆ.ಸದ್ಯಕ್ಕೆ 41 ದೇಶಗಳು ಈ ಪಟ್ಟಿಯಲ್ಲಿರಲಿವೆ ಎಂದು ಹೇಳಲಾಗಿದ್ದರೂ ಈವರೆಗೂ ಈ ಪಟ್ಟಿಗೆ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಈ ಪಟ್ಟಿಯಲ್ಲಿ ಅಂತಿಮ ಕ್ಷಣದಲ್ಲಿ ಬದಲಾವಣೆಯಾದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.
ಮುಸ್ಲಿಮರ ವಿರುದ್ಧ ಅಸಹಿಷ್ಣುತೆ ಸೆಹಿಸೆವು: ‘ಮುಸ್ಲಿಮರ ವಿರುದ್ಧದ ಧಾರ್ಮಿಕ ಅಸಹಿಷ್ಣುತೆಯನ್ನು ಖಂಡಿಸುವಲ್ಲಿ ಭಾರತವು ವಿಶ್ವಸಂಸ್ಥೆಯ ಇತರ ದೇಶಗಳೊಂದಿಗೆ ಒಗ್ಗಟ್ಟಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಸರ್ಕಾರ ತಿಳಿಸಿದೆ.ಅಂತಾರಾಷ್ಟ್ರೀಯ ಇಸ್ಲಾಮೋಫೋಬಿಯಾ ನಿಗ್ರಹ ದಿನದ ನಿಮಿತ್ತ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭಾರತದ ಕಾಯಂ ಪ್ರತಿನಿಧಿ ಪಿ. ಹರೀಶ್, ‘ಧಾರ್ಮಿಕ ತಾರತಮ್ಯ, ದ್ವೇಷ ಮತ್ತು ಹಿಂಸಾಚಾರದಿಂದ ಮುಕ್ತವಾದ ಜಗತ್ತನ್ನು ಬೆಳೆಸುವುದು ಅನಾದಿ ಕಾಲದಿಂದಲೂ ಭಾರತದ ಜೀವನ ವಿಧಾನವಾಗಿದೆ.
ಡಿಎಂಕೆ ತಿರಸ್ಕರಿಸಿದ ರುಪಾಯಿ ಚಿಹ್ನೆ ರಚಿಸಿದ್ದು ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್ ಜೋಶಿ
ಭಾರತ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮದ ಜನ್ಮಸ್ಥಾನ. ಮುಸ್ಲಿಮರ ವಿರುದ್ಧದ ಧಾರ್ಮಿಕ ಅಸಹಿಷ್ಣುತೆಯ ಘಟನೆ ಖಂಡಿಸುವಲ್ಲಿ ನಾವು ವಿಶ್ವಸಂಸ್ಥೆಯ ಸದಸ್ಯ ದೇಶಗಳ ಜತೆ ಒಗ್ಗಟ್ಟಾಗಿ ನಿಲ್ಲುತ್ತೇವೆ. ಎಲ್ಲಾ ದೇಶಗಳು ತಮ್ಮ ಎಲ್ಲಾ ನಾಗರಿಕರನ್ನು ಸಮಾನವಾಗಿ ಪರಿಗಣಿಸಲು ಬದ್ಧವಾಗಿರಬೇಕು ಮತ್ತು ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುವ ನೀತಿಗಳನ್ನು ಅನುಸರಿಸಬಾರದು’ ಎಂದು ಹೇಳಿದರು.