ನೇಪಾಳದಲ್ಲಿ 4 ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನ ನಾಪತ್ತೆ!

By Santosh NaikFirst Published May 29, 2022, 12:00 PM IST
Highlights

ಟ್ವಿನ್-ಎಂಜಿನ್ ವಿಮಾನ- ತಾರಾ ಏರ್‌ನ 9 NAET- ಭಾನುವಾರ ಬೆಳಿಗ್ಗೆ 9:55 ಕ್ಕೆ ಪೋಖರಾದಿಂದ ಜೋಮ್ಸಮ್‌ಗೆ ಹಾರಾಟ ನಡೆಸಿತ್ತು. ವಾಯು ಮಾರ್ಗದ ನಡುವೆಯೇ ಗ್ರೌಂಡ್ ಸಪೋರ್ಟ್ ಜೊತೆ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ವಿಮಾನದ ಪತ್ತೆಗಾಗಿ ಕಾರ್ಯಾಚರಣೆ ಆರಂಭವಾಗಿದೆ.
 

ಖಠ್ಮಂಡು (ಮೇ. 29): ನಾಲ್ವರು ಭಾರತೀಯರು ಸೇರಿದಂತೆ 19 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ  (Tara Air) ಭಾನುವಾರ ಬೆಳಿಗ್ಗೆ ನೆಲದ ಬೆಂಬಲದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಟ್ವಿನ್-ಎಂಜಿನ್ ವಿಮಾನ- ತಾರಾ ಏರ್‌ನ 9 NAET- ಭಾನುವಾರ ಬೆಳಿಗ್ಗೆ 9:55 ಕ್ಕೆ ಪೋಖರಾದಿಂದ ( Pokhara ) ಜೋಮ್ಸಮ್‌ಗೆ  (Jomsom in Mustang district) ಹಾರಾಟ ನಡೆಸಿತ್ತು. ವಾಯು ಮಾರ್ಗದ ನಡುವೆಯೇ ಗ್ರೌಂಡ್ ಸಪೋರ್ಟ್ ಜೊತೆ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ವಿಮಾನದ ಪತ್ತೆಗಾಗಿ ಕಾರ್ಯಾಚರಣೆ ಆರಂಭವಾಗಿದೆ. ನಾಪತ್ತೆಯಾದ ವಿಮಾನದಲ್ಲಿ 4 ಭಾರತೀಯ, ಕೆಲ ಜರ್ಮನ್ ಮತ್ತು 3 ಜಪಾನ್ ಪ್ರಜೆಗಳಿದ್ದರು. ಉಳಿದ ಪ್ರಯಾಣಿಕರು ನೇಪಾಳಿ ಪ್ರಜೆಗಳಾಗಿದ್ದು, ವಿಮಾನದಲ್ಲಿ 3 ಸಿಬ್ಬಂದಿ ಇದ್ದರು ಎಂದು ಎಎನ್‌ಐ ವರದಿ ಮಾಡಿದೆ.

ನಾಪತ್ತೆಯಾಗಿರುವ ವಿಮಾನಗಳ ಹುಡುಕಾಟಕ್ಕಾಗಿ ಗೃಹ ಸಚಿವಾಲಯವು ಮುಸ್ತಾಂಗ್ (Mustang ) ಮತ್ತು ಪೊಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ನೇಪಾಳ ಸೇನೆಯ ಹೆಲಿಕಾಪ್ಟರ್ ಕೂಡ ಹುಡುಕಾಟಕ್ಕೆ ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ ಎಂದು ಗೃಹ ಸಚಿವಾಲಯದ ವಕ್ತಾರ ಫಡಿಂದ್ರ ಮಣಿ ಪೋಖರೆಲ್ ತಿಳಿಸಿದ್ದಾರೆ. ನೇಪಾಳಿ ಸೇನೆಯ Mi-17 ಹೆಲಿಕಾಪ್ಟರ್ ಇತ್ತೀಚೆಗೆ ಮುಸ್ತಾಂಗ್‌ನ ಲೆಟೆಗೆ ತೆರಳಿದೆ, ಇದು ನಾಪತ್ತೆಯಾದ ತಾರಾ ಏರ್‌ಕ್ರಾಫ್ಟ್‌ನ (22 ಪ್ರಯಾಣಿಕರೊಂದಿಗೆ) ಅಪಘಾತಕ್ಕೀಡಾದ ಪ್ರದೇಶ ಎಂದು ತಿಳಿಸಲಾಗಿದೆ' ಎಂದು ನೇಪಾಳಿ ಸೇನೆಯ ವಕ್ತಾರ ನಾರಾಯಣ್ ಸಿಲ್ವಾಲ್ ಹೇಳಿದ್ದಾರೆ.

ವಿಮಾನವು ಮುಸ್ತಾಂಗ್ ಜಿಲ್ಲೆಯ ಜೋಮ್ಸೋಮ್‌ನ ಪ್ರದೇಶದ ಬಳಿ ಕಾಣಿಸಿಕೊಂಡಿತ್ತು. ಆ ಬಳಿಕ ಅದನ್ನು ಮೌಂಟ್ ಧೌಲಗಿರಿಗೆ ತಿರುಗಿಸಲಾಯಿತು, ನಂತರ ಅದು ಸಂಪರ್ಕಕ್ಕೆ ಬರಲಿಲ್ಲ, ”ಎಂದು ಮುಖ್ಯ ಜಿಲ್ಲಾ ಅಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ತಿಳಿಸಿದ್ದಾರೆ.

2016 ರಲ್ಲಿ ಕೂಡಾ ಟ್ವಿನ್ ಇಂಜೀನ್ ತಾರಾ ವಿಮಾನವೂ ನಾಪತ್ತೆಯಾದ ಬಳಿಕ, ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿತ್ತು. ಅಂದು, ಕಾಣೆಯಾದ 23 ಪ್ರಯಾಣಿಕರನ್ನು ಹೊತ್ತ ತಾರಾ ವಿಮಾನವು ಉತ್ತರ ನೇಪಾಳದ ಪರ್ವತ ಪ್ರದೇಶದಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದರು. ಅಂದು ಒಟ್ಟು ಹಾರಾಟದ ಸಮಯ 19 ನಿಮಿಷಗಳಾಗಿದ್ದವು, ಆದರೆ ವಿಮಾನವು ಟೇಕ್ ಆಫ್ ಆದ ಎಂಟು ನಿಮಿಷಗಳ ನಂತರ ಸಂಪರ್ಕವನ್ನು ಕಳೆದುಕೊಂಡಿತ್ತು.

Flight Miss ವಿಮಾನ ನಿಲ್ದಾಣದಲ್ಲಿ ಇದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರದರ್ಶನ, ಹಲವರ ಫ್ಲೈಟ್ ಮಿಸ್!

"ನಾಲ್ವರು ಭಾರತೀಯರನ್ನು ಒಳಗೊಂಡಿರುವ ಪ್ರಯಾಣಿಕರ ಸ್ಥಿತಿಯ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಬಹುಶಃ ಅಲ್ಲಿನ ಪ್ರಸಿದ್ಧ ಮುಕ್ತಿನಾಥ ದೇವಾಲಯಕ್ಕೆ ತೀರ್ಥಯಾತ್ರೆಗೆ ಹೋಗುತ್ತಿದ್ದರು ಎನ್ನಲಾಗಿದೆ. ವಿಮಾನದ ಸುರಕ್ಷಿತವಾಗಿರುವ ಬಗ್ಗೆ ಅನುಮಾನವಿದೆ' ಎಂದು ತಾರಾ ಏರ್‌ಲೈನ್ಸ್ ಮೂಲಗಳು ತಿಳಿಸಿವೆ. ಸಿಬ್ಬಂದಿಯಲ್ಲಿ ಹಿರಿಯ ಬೋಧಕ ಪೈಲಟ್, ಸಹ ಪೈಲಟ್ ಮತ್ತು ಏರ್ ಹೋಸ್ಟೆಸ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೋಮ್ಸನ್ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಪ್ರಕಾರ, ಜೋಮ್ಸನ್‌ನ ಘಾಸಾ ಪ್ರದೇಶದಲ್ಲಿ ದೊಡ್ಡ ಶಬ್ದದ ಬಗ್ಗೆ ವರದಿಯಾಗಿದ್ದು. ಅದಿನ್ನೂ ಧೃಢವಾಗಬೇಕಿದೆ.

ನಡು ಆಗಸದಲ್ಲಿ ತಾಂತ್ರಿಕ ದೋಷ: ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ವಿಶ್ವದ ಅತಿ ಎತ್ತರದ ಪರ್ವತದ ನೆಲೆಯಾಗಿರುವ ನೇಪಾಳವು ತನ್ನ ವ್ಯಾಪಕವಾದ ದೇಶೀಯ ವಾಯು ಜಾಲದಲ್ಲಿ ಸಾಕಷ್ಟು ಅಪಘಾತಗಳ ದಾಖಲೆಯನ್ನು ಹೊಂದಿದೆ, ಕಷ್ಟಕರವಾದ ಪರ್ವತ ಸ್ಥಳಗಳಲ್ಲಿ ಏರ್ ಸ್ಟ್ರಿಪ್ ಗಳನ್ನು ಹೊಂದಿದ್ದು, ಬದಲಾಗಬಹುದಾದ ಹವಾಮಾನ ಪರಿಸ್ಥಿತಿಯ ವಾಯುಯಾನಕ್ಕೆ ಸವಾಲೊಡ್ಡುತ್ತದೆ. ಕಳೆದೆರಡು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ವರದಿಯಾಗಿದೆ, ಆದರೂ ವಿಮಾನಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದವು. ಮುಸ್ತಾಂಗ್‌ನ ಥೊರೊಂಗ್ ಲಾ ಪರ್ವತದ ತಪ್ಪಲಿನಲ್ಲಿರುವ ಪೂಜ್ಯ ಮುಕ್ತಿನಾಥ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಭಾರತೀಯ ಮತ್ತು ನೇಪಾಳಿ ಯಾತ್ರಾರ್ಥಿಗಳಿಗೆ ಇದು ಜನಪ್ರಿಯ ಮಾರ್ಗವಾಗಿದೆ.

click me!