ಮೋದಿ ಜಗತ್ತಿನ ಜನಪ್ರಿಯ ನಾಯಕ; ಅಮೆರಿಕ ಮತ್ತೆ ಬಣ್ಣನೆ

By Ravi Janekal  |  First Published Apr 17, 2023, 6:01 AM IST

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಂಬಲಾಗದ ದೂರದೃಷ್ಟಿಮತ್ತು ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮುನ್ನಡೆಸುವ ಬದ್ಧತೆ ಮತ್ತು ಬಯಕೆಯನ್ನು ಹೊಂದಿರುವ ಅತ್ಯಂತ ಜನಪ್ರಿಯ ವಿಶ್ವದ ನಾಯಕರಾಗಿದ್ದಾರೆ’ ಎಂದು ಅಮೆರಿಕದ ವಾಣಿಜ್ಯ ಸಚಿವೆ ಗಿನಾ ರೈಮಾಂಡೋ ಪ್ರಶಂಸಿಸಿದ್ದಾರೆ.


ವಾಷಿಂಗ್ಟನ್‌ (ಏ.17): ‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಂಬಲಾಗದ ದೂರದೃಷ್ಟಿಮತ್ತು ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮುನ್ನಡೆಸುವ ಬದ್ಧತೆ ಮತ್ತು ಬಯಕೆಯನ್ನು ಹೊಂದಿರುವ ಅತ್ಯಂತ ಜನಪ್ರಿಯ ವಿಶ್ವದ ನಾಯಕರಾಗಿದ್ದಾರೆ’ ಎಂದು ಅಮೆರಿಕದ ವಾಣಿಜ್ಯ ಸಚಿವೆ ಗಿನಾ ರೈಮಾಂಡೋ(US Commerce Secretary Gina Raimondo) ಪ್ರಶಂಸಿಸಿದ್ದಾರೆ.

ಅಮೆರಿಕ(America)ದಲ್ಲಿ ಭಾರತೀಯ ರಾಯಭಾರ ಕಚೇರಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಿನಾ ಕಳೆದ ತಿಂಗಳ ತಮ್ಮ ಭಾರತ ಪ್ರವಾಸದಲ್ಲಿ ಮೋದಿ(Narendra Modi) ಭೇಟಿ ಕುರಿತು ಮಾತನಾಡಿದರು.‘ಪ್ರಧಾನಿ ಮೋದಿಯವರೊಂದಿಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಮಯ ಕಳೆಯುವ ಅದ್ಭುತ ಅವಕಾಶ ನನಗೆ ಸಿಕ್ಕಿತ್ತು. ಅವರು ಅಮೋಘವಾದ ದೂರದೃಷ್ಟಿಯುಳ್ಳವರು. ಮತ್ತು ಭಾರತದ ಜನರೊಂದಿಗಿನ ಅವರ ಬದ್ಧತೆಯ ಮಟ್ಟವು ಅವರ್ಣನೀಯ, ಆಳ, ಭಾವನಾತ್ಮಕ, ನೈಜ ಮತ್ತು ಅಧಿಕೃತ. ಜನರನ್ನು ಬಡತನದಿಂದ ಮೇಲೆತ್ತುವ ಮತ್ತು ಜಾಗತಿಕ ಶಕ್ತಿಯಾಗಿ ಭಾರತವನ್ನು ಮುನ್ನಡೆಸುವ ಅವರ ಬಯಕೆ ನೈಜವಾಗಿದೆ ಮತ್ತು ಅದು ಪ್ರಗತಿಯಲ್ಲಿದೆ’ ಎಂದು ಹೇಳಿದ್ದಾರೆ.

Tap to resize

Latest Videos

ಪ್ರಧಾನಿ ಮೋದಿ ನಾಯಕತ್ವಕ್ಕೆ ಬ್ರಿಟನ್‌ ಸಂಸದ ಸ್ಟರ್ನ್‌ ಮುಕ್ತಕಂಠದ ಶ್ಲಾಘನೆ

ಅಲ್ಲದೇ ಮೋದಿಯವರೊಂದಿಗಿನ ನನ್ನ ಸಂವಾದದ ಅತ್ಯುತ್ತಮ ಭಾಗವಿದು ಎಂದು ಹೇಳುತ್ತ ‘ಮೋದಿಯನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಇದು ತಿಳಿದಿರುತ್ತದೆ. ಅವರು ತಾಂತ್ರಿಕ ವ್ಯಕ್ತಿ. ತಾಂತ್ರಿಕತೆ ಕುರಿತು ಆಳವಾದ ವಿವರಗಳನ್ನು ಹೊಂದಿದ್ದಾರೆ. ಅಂದು ಶುಕ್ರವಾರ ಸಂಜೆ 7.30ಕ್ಕೆ ರೇಡಿಯೊ ಪ್ರವೇಶ ಜಾಲ ಹಾಗೂ ಕೃತಕ ಬುದ್ಧಿಮತ್ತೆಯ ಬಗ್ಗೆ ನಾನು ಮಾತನಾಡಿದೆ ಇದು ಅದ್ಭುತವಾಗಿತ್ತು. ಮುಂದಿನ ವರ್ಷಗಳಲ್ಲಿ ತಂತ್ರಜ್ಞಾನದ ಎರಡು ವ್ಯವಸ್ಥೆಗಳಿರುತ್ತವೆ. ಈ ಪೈಕಿ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದಿಗೆ ಹೊಂದಿಕೆಯಾಗಿರುತ್ತದೆ. ಈ ತಂತ್ರಜ್ಞಾನ ವ್ಯವಸ್ಥೆಯನ್ನು ಅಮೆರಿಕ ಮತ್ತು ಭಾರತ ಒಟ್ಟಾಗಿ ಮುನ್ನಡೆಸಬೇಕು ಎಂದೆ. ಅದಕ್ಕೆ ಉತ್ತರಿಸಿದ ಅವರು ‘ಎಐ (ಕೃತಕ ಬುದ್ಧಿಮತ್ತೆ) ಕೇವಲ ಕೃತಕ ಬುದ್ಧಿಮತ್ತೆ ಅಲ್ಲ. ಅದು ಭಾರತ ಮತ್ತು ಅಮೆರಿಕದ ತಂತ್ರಜ್ಞಾನ’ ಎಂದರು. ಎಂದು ಗಿನಾ ಹೇಳಿದ್ದಾರೆ.

click me!