ದುಬೈ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ: ನಾಲ್ವರು ಭಾರತೀಯರು ಸೇರಿ 16 ಮಂದಿ ದುರ್ಮರಣ

Published : Apr 16, 2023, 01:12 PM IST
ದುಬೈ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ: ನಾಲ್ವರು ಭಾರತೀಯರು ಸೇರಿ 16 ಮಂದಿ ದುರ್ಮರಣ

ಸಾರಾಂಶ

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಏಳು ಎಮಿರೇಟ್‌ಗಳಲ್ಲಿ ಒಂದಾದ ದುಬೈ ಸುಮಾರು 3.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಭಾರತೀಯರು ಸೇರಿ ಸುಮಾರು 90 ಪ್ರತಿಶತ ವಿದೇಶಿಯರೇ ಆಗಿದ್ದಾರೆ ಎನ್ನುವುದು ಗಮನಾರ್ಹ. 

ದುಬೈ (ಏಪ್ರಿಲ್ 16, 2023): ಯುಎಇಯ ಪ್ರಮುಖ ನಗರವಾದ ದುಬೈನ ವಸತಿ ಕಟ್ಟಡವೊಂದರಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ 16 ಜನರು ಮೃತಪಟ್ಟಿದ್ದು,  9 ಜನರು ತೀವ್ರ ಗಾಯಗೊಂಡಿದ್ದಾರೆ. ಇನ್ನು, ಮೃತಪಟ್ಟವರಲ್ಲಿ ನಾಲ್ವರು ಭಾರತೀಯರೂ ಸೇರಿದ್ದಾರೆ ಎಂದು ಮಾಧ್ಯಮ ವರದಿಯೊಂದು ಭಾನುವಾರ ತಿಳಿಸಿದೆ.

ದುಬೈನ ಹಳೆಯ ನೆರೆಹೊರೆಯ ಅಲ್ ರಾಸ್‌ನಲ್ಲಿರುವ ಕಟ್ಟಡವೊಂದರಲ್ಲಿ ಶನಿವಾರ ಮಧ್ಯಾಹ್ನ 12.35 ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ದುಬೈ ಸಿವಿಲ್ ಡಿಫೆನ್ಸ್ ಆಪರೇಷನ್ ರೂಮ್‌ಗೆ ಮೊದಲು ಮಾಹಿತಿ ನೀಡಲಾಯ್ತು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು ಮತ್ತು ಇತರ ಪ್ರದೇಶಗಳಿಗೆ ಹರಡಲು ಪ್ರಾರಂಭಿಸಿತು ಎಂದು ಸ್ಥಳೀಯ ಪತ್ರಿಕೆಯೊಂದು ಹೇಳಿದೆ. ನಂತರ, ದುಬೈ ಸಿವಿಲ್ ಡಿಫೆನ್ಸ್ ಪ್ರಧಾನ ಕಚೇರಿಯ ತಂಡವು ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಆಗಮಿಸಿತು ಮತ್ತು ಕಟ್ಟಡದಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿತು. ಅಲ್ಲದೆ, ಪೋರ್ಟ್ ಸಯೀದ್ ಅಗ್ನಿಶಾಮಕ ಠಾಣೆ ಮತ್ತು ಹಮ್ರಿಯಾ ಅಗ್ನಿಶಾಮಕ ಠಾಣೆಯ ತಂಡಗಳನ್ನು ಸಹ ಕರೆಸಲಾಯಿತು. ಮಧ್ಯಾಹ್ನ 2:42ಕ್ಕೆ (ಸ್ಥಳೀಯ ಕಾಲಮಾನ) ಬೆಂಕಿ ನಂದಿಸಲಾಯಿತು ಎಂದೂ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.  

ಇದನ್ನು ಓದಿ: ಜಾರ್ಖಂಡ್‌ನ ಬಹು ಮಹಡಿ ಕಟ್ಟಡದಲ್ಲಿ ಭಾರಿ ಅಗ್ನಿ ದುರಂತ: 14 ಮಂದಿ ಸಾವು

ಇನ್ನು, ಸಂತ್ರಸ್ತರಲ್ಲಿ ಕೇರಳದ ದಂಪತಿ ಸೇರಿದಂತೆ ನಾಲ್ವರು ಭಾರತೀಯರನ್ನು ಗುರುತಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ದುಬೈ ಪೊಲೀಸ್ ಶವಾಗಾರದಲ್ಲಿದ್ದ ಭಾರತೀಯ ಸಮಾಜ ಸೇವಕ ನಾಸಿರ್ ವತನಪ್ಪಲ್ಲಿ ಅವರನ್ನು ಉಲ್ಲೇಖಿಸಿ ಈ ಮಾಹಿತಿ ನೀಡಿದೆ. ಇಲ್ಲಿಯವರೆಗೆ, ಕಟ್ಟಡದಲ್ಲಿ ಕೆಲಸ ಮಾಡಿದ ಕೇರಳದ ದಂಪತಿ ಮತ್ತು ತಮಿಳುನಾಡಿನ ಇಬ್ಬರು ಪುರುಷರು, 3 ಪಾಕಿಸ್ತಾನಿ ಸೋದರ ಸಂಬಂಧಿಗಳು ಮತ್ತು ನೈಜೀರಿಯಾದ ಮಹಿಳೆ ಸೇರಿದಂತೆ 4 ಭಾರತೀಯರನ್ನು ಗುರುತಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ನಾಸಿರ್ ವತನಪ್ಪಲ್ಲಿ ಹೇಳಿದ್ದಾರೆ.
ದುಬೈ ಪೊಲೀಸರು, ದುಬೈನಲ್ಲಿರುವ ಭಾರತೀಯ ದೂತಾವಾಸ, ಇತರ ರಾಜತಾಂತ್ರಿಕ ನಿಯೋಗಗಳು ಮತ್ತು ಮೃತರ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸಮನ್ವಯ ಸಾಧಿಸುತ್ತಿರುವುದಾಗಿ ವತನಪ್ಪಲ್ಲಿ ಹೇಳಿದ್ದಾರೆ ಎಂದೂ ವರದಿ ತಿಳಿಸಿದೆ.

ಈ ಮಧ್ಯೆ, ಪ್ರಾಥಮಿಕ ತನಿಖೆಗಳು ಕಟ್ಟಡಕ್ಕೆ ಸಾಕಷ್ಟು ಸುರಕ್ಷತಾ ಅವಶ್ಯಕತೆಗಳಿಲ್ಲ ಎಂದು ತೋರಿಸಿದೆ ಎಂದು ದುಬೈ ಸಿವಿಲ್ ಡಿಫೆನ್ಸ್ ವಕ್ತಾರರು ತಿಳಿಸಿದ್ದಾರೆ. ಆದರೂ ಅಗ್ನಿ ಅವಘಡಕ್ಕೆ ಕಾರಣಗಳ ಬಗ್ಗೆ ವಿವರವಾದ ವರದಿಯನ್ನು ನೀಡಲು ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂದೂ ಮಾಹಿತಿ ನೀಡಲಾಗಿದೆ. 

ಇದನ್ನೂ ಓದಿ: Uttar Pradesh: ಅಗ್ನಿ ಅವಘಡ: ಮೂವರು ಅಪ್ರಾಪ್ತರು ಸೇರಿ ಒಂದೇ ಕುಟುಂಬದ ಐವರ ದುರ್ಮರಣ

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಏಳು ಎಮಿರೇಟ್‌ಗಳಲ್ಲಿ ಒಂದಾದ ದುಬೈ ಸುಮಾರು 3.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಭಾರತೀಯರು ಸೇರಿ ಸುಮಾರು 90 ಪ್ರತಿಶತ ವಿದೇಶಿಯರೇ ಆಗಿದ್ದಾರೆ ಎನ್ನುವುದು ಗಮನಾರ್ಹ. 

ಇನ್ನು, ದುಬೈ ನಗರವು ಈ ಹಿಂದೆಯೂ ಸಾಕಷ್ಟು ಬೆಂಕಿಯ ಅವಘಡಗಳನ್ನು ಅನುಭವಿಸಿದ್ದು, ಇದು ವ್ಯಾಪಕ ಹಾನಿಯನ್ನುಂಟುಮಾಡಿದೆ. ಆದರೆ ಕೆಲವು ಸಾವುನೋವುಗಳನ್ನು ಉಂಟುಮಾಡಿದೆ. 2017 ರಲ್ಲಿ, ಬೆಂಕಿಯ ಅಪಾಯವನ್ನು ಕಡಿಮೆ ಮಾಡಲು ಕಟ್ಟುನಿಟ್ಟಾದ ಕಟ್ಟಡ ನಿಯಮಗಳನ್ನು ಅಳವಡಿಸಿಕೊಳ್ಳುವುದಾಗಿ ಅಧಿಕಾರಿಗಳು ಘೋಷಿಸಿದ್ದರು.

ಇದನ್ನೂ ಓದಿ: Andhra Pradesh: ಫಾರ್ಮಾ ಕಂಪನಿ ಲ್ಯಾಬ್‌ನಲ್ಲಿ ಅಗ್ನಿ ಅವಘಡ: ನಾಲ್ವರ ದುರ್ಮರಣ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ