440 ಜನರಿಗೆ ಕೊರೋನಾ ವೈರಸ್‌ ಸೋಂಕು, ಮೃತರ ಸಂಖ್ಯೆ ಏರಿಕೆ!

By Suvarna News  |  First Published Jan 23, 2020, 12:38 PM IST

ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿಕೆ, 440 ಜನರಿಗೆ ಸೋಂಕು| ರಜಾ ದಿನಗಳು ಆರಂಭ,ಕೊರೋನಾ ವೈರಸ್‌ ಇನ್ನಷ್ಟು ಹೆಚ್ಚುವ ಆತಂಕ


ಬೀಜಿಂಗ್‌[ಜ.23]: ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿಕೆ ಆಗಿದ್ದು, 440 ಮಂದಿಯಲ್ಲಿ ಈ ವೈರಸ್‌ ಕಾಣಿಸಿಕೊಂಡಿರುವುದು ಖಚಿತಪಟ್ಟಿದೆ.

ಕೊಂದೇ ಬಿಡುವ ಕರೋನಾ ವೈರಸ್‌ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ

Latest Videos

undefined

ಚೀನಾದಲ್ಲಿ ಈಗ ರಜಾ ದಿನಗಳು ಆರಂಭವಾಗಿರುವುದರಿಂದ ಜನರು ತಮ್ಮ ಮನೆ ಮತ್ತು ವಿದೇಶಕ್ಕೆ ತೆರಳುವ ಕಾರಣಕ್ಕೆ ಕೊರೋನಾ ವೈರಸ್‌ ಇನ್ನಷ್ಟುಹೆಚ್ಚುವ ಆತಂಕ ಎದುರಾಗಿದೆ. ಈ ಮಧ್ಯೆ ಕೊರೋನಾ ವೈರಸ್‌ ವಿದೇಶಕ್ಕೂ ವ್ಯಾಪಿಸುತ್ತಿದ್ದು, ಜಪಾನಿನಲ್ಲಿ ಒಂದು, ಥಾಯ್ಲೆಂಡ್‌ನಲ್ಲಿ 3, ಕೊರಿಯಾದಲ್ಲಿ ಒಂದು ಪ್ರಕರಣಗಳು ಖಚಿತಪಟ್ಟಿವೆ. ಚೀನಾದ ವುಹಾನ್‌ ನಗರದಿಂದ ಅಮೆರಿಕಕ್ಕೆ ಆಗಮಿಸಿದ ವ್ಯಕ್ತಿಯೊಬ್ಬನಲ್ಲಿ ವೈರಸ್‌ ಕಂಡು ಬಂದಿದೆ.

ಜ್ವರ, ಕೆಮ್ಮು, ಉಸಿರಾಟ ತೊಂದರೆ ಮತ್ತು ಉಸಿರಾಟದ ವೇಗ ಹೆಚ್ಚಳಗೊಳ್ಳುವುದು ಕೊರೋನಾ ವೈರಸ್‌ನ ಪ್ರಮುಖ ಲಕ್ಷಣವಾಗಿದೆ. ಆದರೆ, ಕೊರೋನಾ ವೈರಸ್‌ ಜನರನ್ನು ಬಲಿ ಪಡೆಯುತ್ತಿರುವುದು ಇದೇ ಮೊದಲು.

ಜಗತ್ತಿನ ನಿದ್ದೆಗೆಡಿಸಿದೆ ಮಾರಕ ಕರೋನಾ ವೈರಸ್‌: ಏನಿದು ಕಾಯಿಲೆ? ಗುಣಲಕ್ಷಣಗಳೇನು?

ಚೀನಾಕ್ಕೆ ಹೋದರೆ ಹಸಿಯಾದ ಮಾಂಸ ತಿನ್ನಬೇಡಿ: ಕೇಂದ್ರ

click me!