ಅಮೆಜಾನ್ ಮುಖ್ಯಸ್ಥರ ಫೋನ್ ಹ್ಯಾಕ್ ಮಾಡಿದರಾ ಸೌದಿ ದೊರೆ| ಜೆಫ್ ಬೆಜೋಸ್‌ಗೆ ವಾಟ್ಸಪ್ ಮಾಡಿ ಮಾಹಿತಿ ಕದ್ದ ಮೊಹ್ಮದ್ ಬಿನ್ ಸಲ್ಮಾನ್?| 2018ರಲ್ಲಿ ಬೆಜೋಸ್ ಅವರ ವಾಟ್ಸಪ್ ನಂಬರ್‌ಗೆ ಮೆಸೆಜ್ ಮಾಡಿದ್ದ ಮೊಹ್ಮದ್ ಬಿನ್ ಸಲ್ಮಾನ್| ಫಾರೆನ್ಸಿಕ್ ವರದಿಯಲ್ಲಿ ಹ್ಯಾಕ್ ಆಗಿರುವ ಕುರಿತು ಮಾಹಿತಿ| ಮೊಹ್ಮದ್ ಬಿನ್ ಸಲ್ಮಾನ್ ವಿರುದ್ಧದ ಆರೋಪ ಅಲ್ಲಗಳೆದ ಸೌದಿ|
ರಿಯಾದ್(ಜ.22): ವಿವಾದಗಳ ಸರಮಾಲೆಯನ್ನೇ ಹೊತ್ತು ನಡೆಯುವ ಸೌದಿ ದೊರೆ ಮೊಹ್ಮದ್ ಬಿನ್ ಸಲ್ಮಾನ್, ಇದೀಗ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಅವರ ಮೊಬೈಲ್ ಹ್ಯಾಕ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
2018ರಲ್ಲಿ ಬೆಜೋಸ್ ಅವರ ವಾಟ್ಸಪ್ ನಂಬರ್‌ಗೆ ಸೌದಿ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಮೆಸೆಜ್ ಮಾಡಿದ್ದರು. ಇದಾದ ಬಳಿಕ ಜೆಫ್ ಬೆಜೋಸ್ ಅವರ ಫೋನ್ ಹ್ಯಾಕ್ ಆಗಿದೆ ಎನ್ನಲಾಗಿದ್ದು, ಹೊಸ ವಿವಾದ ಸೃಷ್ಟಿಸಿದ್ದಾರೆ.
undefined
ಸೂಟ್‌ಕೇಸ್‌ನಲ್ಲಿ 1 ಬಿಲಿಯನ್ ಡಾಲರ್ ಇಟ್ಕೊಂಡು ಭಾರತಕ್ಕೆ ಬಂದ ಅಮೆಜಾನ್ ಮುಖ್ಯಸ್ಥ!
2018ರಲ್ಲಿ ಮೊಹ್ಮದ್ ಬಿನ್ ಸಲ್ಮಾನ್ ವಾಟ್ಸಪ್ ಮಲಕ ಜೆಫ್ ಬೆಜೋಸ್ ಅವರಿಗೆ ವಿಡಿಯೋ ಒಂದನ್ನು ಕಳುಹಿಸಿದ್ದರು. ಇದರೊಂದಿಗೆ ಬಂದ ಕೋಡ್ ಸಂಖ್ಯೆಯ ಪರಿಣಾಮ ಜೆಫ್ ಬೆಜೋಸ್ ಮೊಬೈಲ್ ಹ್ಯಾಕ್ ಆಗಿದೆ ಎಂದು ಫಾರೆನ್ಸಿಕ್ ವರದಿ ತಿಳಿಸಿದೆ.
ಜೆಫ್ ಬೆಜೋಸ್ ಅವರ ಫೋನ್ ಹ್ಯಾಕ್ ಆಗಿರುವ ಕುರಿತು ಜಾಗತಿಕ ವ್ಯಾಪಾರ ಸಲಹಾ ಸಂಸ್ಥೆ ಎಫ್‌ಟಿಐ ತನಿಖೆ ನಡೆಸಿದ್ದು, ಈ ಕುರಿತು ಸದ್ಯದ ಪರಿಸ್ಥಿತಿಯಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.
Recent media reports that suggest the Kingdom is behind a hacking of Mr. Jeff Bezos' phone are absurd. We call for an investigation on these claims so that we can have all the facts out.
— Saudi Embassy (@SaudiEmbassyUSA)ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸೌದಿ ಸರ್ಕಾರ, ದೊರೆ ಮೊಹ್ಮದ್ ಬಿನ್ ಸಲ್ಮಾನ್ ವಿರುದ್ಧ ಕೇಳಿ ಬಂದಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದೆ.
ಪತ್ರಕರ್ತನ ಹತ್ಯೆಯಿಂದ ಬಯಲಾಯ್ತು ಸೌದಿ ಯುವರಾಜನ ಮುಖವಾಡ!
ಈ ಕುರಿತು ಆಂತರಿಕೆ ತನಿಖೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಇಂತಹ ಕ್ಷುಲ್ಲಕ ಆರೋಪಗಳನ್ನು ಸಹಿಸಲು ಸಾಧ್ಯವಿಲ್ಲ ಎಂದೂ ಸೌದಿ ಸರ್ಕಾರ ತಿರುಗೇಟು ನೀಡಿದೆ.