ಮಾಲ್ಡೀವ್ಸ್‌ಗೆ ಭಾರತದ ಸೇನೆಯ ಸಹಾಯ ಬೇಕಿಲ್ಲ, ನಿಯೋಜಿತ ಅಧ್ಯಕ್ಷನ ಮಾತು!

Published : Oct 27, 2023, 05:21 PM ISTUpdated : Oct 27, 2023, 05:22 PM IST
ಮಾಲ್ಡೀವ್ಸ್‌ಗೆ ಭಾರತದ ಸೇನೆಯ ಸಹಾಯ ಬೇಕಿಲ್ಲ, ನಿಯೋಜಿತ ಅಧ್ಯಕ್ಷನ ಮಾತು!

ಸಾರಾಂಶ

ಮಾಲ್ಡೀವ್ಸ್ ಅಧ್ಯಕ್ಷರಾಗಿ ಚುನಾಯಿತರಾದ ಮೊಹಮದ್ ಮುಯಿಝು ಅವರು ದ್ವೀಪ ರಾಷ್ಟ್ರದಿಂದ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.  ಆ ಮಾತುಕತೆಗಳು "ಈಗಾಗಲೇ ಅತ್ಯಂತ ಯಶಸ್ವಿಯಾಗಿದೆ" ಎಂದಿದ್ದಾರೆ.  

ನವದೆಹಲಿ (ಅ.27): ಮಾಲ್ಡೀವ್ಸ್ ದೇಶವು ತನ್ನ ದೇಶದಲ್ಲಿ ಭಾರತದ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ಮಾತುಕತೆಗಳನ್ನು ಪ್ರಾರಂಭಿಸಿದೆ ಎಂದು ಅಧ್ಯಕ್ಷ-ಚುನಾಯಿತ ಮೊಹಮ್ಮದ್ ಮುಯಿಝು ಶುಕ್ರವಾರ ಬ್ಲೂಮ್‌ಬರ್ಗ್ ನ್ಯೂಸ್ ಪ್ರಕಟಿಸಿದ ಸಂದರ್ಶನದಲ್ಲಿ ಹೇಳಿದ್ದಾರೆ. ಭಾರತ ಹಾಗೂ ಚೀನಾ ಎರಡೂ ದೇಶಗಳು ಈ ದೇಶದಲ್ಲಿ ತನ್ನ ಪ್ರಭಾವವನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಕಳೆದ ತಿಂಗಳು ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರನ್ನು ಅಧ್ಯಕ್ಷ ಸ್ಥಾನದ ಚುನಾವಣೆಲ್ಲಿ ಸೋಲಿಸಿದ ಬಳಿಕ ತಮ್ಮ ಚುನಾವಣೆ ಭರವಸೆಗಳಲ್ಲಿ ಪ್ರಮುಖವಾಗಿ ಘೋಷಣೆ ಮಾಡಲಾದ ವಿಚಾರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಹಾಗೇನಾದರೂ ತಾವು ಅಧ್ಯಕ್ಷರಾದಲ್ಲಿ ಭಾರತದ ಸೇನಾಪಡೆಗಳನ್ನು ಮಾಲ್ಡೀವ್ಸ್‌ನಿಂದ ಹೊರಹಾಕುವುದಾಗಿ ಅವರು ಭರವಸೆ ನೀಡಿದ್ದರು. ಸುಮಾರು 70 ಭಾರತೀಯ ಸೇನಾ ಸಿಬ್ಬಂದಿಗಳು ಭಾರತ ಸರ್ಕಾರದ  ಪ್ರಾಯೋಜಿತ ರಾಡಾರ್ ಕೇಂದ್ರಗಳು ಮತ್ತು ಕಣ್ಗಾವಲು ವಿಮಾನಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಯುದ್ಧನೌಕೆಗಳು ಮಾಲ್ಡೀವ್ಸ್‌ನ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗಲು ಸಹಾಯ ಮಾಡುತ್ತವೆ.

ಮುಯಿಝು ಸಂದರ್ಶನದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆಗಳನ್ನುಈಗಾಗಲೇ ಪ್ರಾರಂಭ ಮಾಡಿದ್ದೇವೆ ಹಾಗೂ ಈ ಮಾತುಕತೆಗಳು "ಈಗಾಗಲೇ ಬಹಳ ಯಶಸ್ವಿಯಾಗಿದೆ" ಎಂದು ಮಾಹಿತಿ ನೀಡಿದ್ದಾರೆ. "ನಾವು ಪರಸ್ಪರ ಪ್ರಯೋಜನಕಾರಿಯಾದ ದ್ವಿಪಕ್ಷೀಯ ಸಂಬಂಧವನ್ನು ಬಯಸುತ್ತೇವೆ" ಎಂದು ಮುಯಿಝು ಬ್ಲೂಮ್‌ಬರ್ಗ್‌ಗೆ ತಿಳಿಸಿದರು, ಭಾರತೀಯ ಸೈನಿಕರ ಬದಲು ಬೇರೆ ಯಾವುದೇ ದೇಶದ ಸೈನಿಕರನ್ನು ಈ ಪ್ರದೇಶಕ್ಕೆ ನಿಯೋಜನೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಚೀನಾದ ಸೈನಿಕರ ನೆರವನ್ನೂ ಪಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.

ಭಾರತ ಸರ್ಕಾರಕ್ಕೆ ತನ್ನ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕಿ ಎನ್ನುವುದರ ಅರ್ಥ ನಾನು ಚೀನಾದ ಪರವಾಗಿ ನಿಂತಿದ್ದೇನೆ ಎಂದರ್ಥವಲ್ಲ. ಯಾವುದೇ ದೇಶದ ಸೇನಾಪಡೆಗಳು ಈ ಭಾಗದಲ್ಲಿ ಬರುವಂತಿಲ್ಲ ಎನ್ನುವುದಷ್ಟೇ ಎಂದು ಮುಯಿಝು ಹೇಳಿದ್ದಾರೆ. ಮುಯಿಝುನ ಗೆಲುವು ಹಿಂದೂ ಮಹಾಸಾಗರದ ಮೇಲಿನ ಪ್ರಭಾವಕ್ಕಾಗಿ ಚೀನಾ ಮತ್ತು ಭಾರತದ ನಡುವಿನ ಹಗ್ಗ-ಜಗ್ಗಾಟವನ್ನು ಇನ್ನಷ್ಟು ವಿಸ್ತರಿಸಿದೆ.

ಶಾರ್ಟ್ ಫ್ರಾಕ್ ಧರಿಸಿ ಟೆನ್ನಿಸ್ ಕಣಕ್ಕಿಳಿದ Pooja Hegde: ನಿಮಗೆ Pakistan ಹಸಿರು ಬಣ್ಣ ಇಷ್ಟನಾ ಎಂದ ಫ್ಯಾನ್ಸ್!

ಈಗಾಗಲೇ ಮಾಲ್ಡೀವ್ಸ್‌ನ ಕೆಲ ಸರ್ಕಾರಗಳು ಭಾರತ ಅಥವಾ ಚೀನಾದ ಕಡೆಗೆ ವಾಲುತ್ತಿವೆ. ಎರಡೂ ಏಷ್ಯನ್ ಪವರ್‌ಹೌಸ್‌ಗಳು ಮಾಲ್ಡೀವ್ಸ್ ಮೂಲಸೌಕರ್ಯ ಮತ್ತು ವಿಸ್ತೃತ ಸಾಲಗಳನ್ನು ನವೀಕರಿಸುವಲ್ಲಿ ಭಾರಿ ಹೂಡಿಕೆ ಮಾಡಿದೆ. ಈಗಾಗಲೇ ಭಾರತ ಹಾಗೂ ಚೀನಾ ದೇಶಗಳು ಮಾಲ್ಡೀವ್ಸ್‌ನಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುವ ಮೂಲಕ ಈ ದೇಶದ ಮೇಲೆ ತನ್ನ ಪ್ರಭಾವವನ್ನು ಹೊಂದಿದೆ.

ಮತ್ತೆ ಮಾಲ್ಡೀವ್ಸ್‌ ಫೋಟೋ ಶೇರ್ ಮಾಡಿದ Sonu Gowda: ಚೆಡ್ಡಿಲಿ ತುಂಬಾ ಸೆಕ್ಸಿಯಾಗಿ ಕಾಣಿಸ್ತೀರಾ ಅನ್ನೋದಾ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?