ಅಮೆರಿಕಾದಲ್ಲಿ ಸಾಮೂಹಿಕ ಗುಂಡಿನ ದಾಳಿ : 22 ಜನರ ಬಲಿ

By Anusha Kb  |  First Published Oct 26, 2023, 9:13 AM IST

ಮೈನೆಯ ಲೆವಿಸ್‌ಟನ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 22 ಜನ ಸಾವಿಗೀಡಾಗಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಂಕಿತರ ಫೋಟೋ ಬಿಡುಗಡೆಗೊಳಿಸಿದ್ದಾರೆ.  


ಅಮೆರಿಕಾ: ಮೈನೆಯ ಲೆವಿಸ್‌ಟನ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 22 ಜನ ಸಾವಿಗೀಡಾಗಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಂಕಿತರ ಫೋಟೋ ಬಿಡುಗಡೆಗೊಳಿಸಿದ್ದಾರೆ.  ಜೀನ್ಸ್ ಹಾಗೂ ಉದ್ದ ಕೈಗಳ ಶರ್ಟ್ ಧರಿಸಿದ್ದು,  ಗಡ್ಡಧಾರಿಯಾಗಿರುವ ವ್ಯಕ್ತಿ ಬಂದೂಕು ಹಿಡಿದಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.  ಸ್ಕೀಮೆಂಜಿಸ್ ಬಾರ್ ಹಾಗೂ ಗ್ರಿಲ್ಲೆ ರೆಸ್ಟೋರೆಂಟ್  ಹಾಗೂ ಸ್ಪೇರ್‌ ಟೈನ್ ರಿಕ್ರೀಯೇಷನ್‌ ಕ್ಲಬ್‌ನಲ್ಲಿ ಈ ದಾಳಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದ್ದು, ಶಂಕಿತ ಶೂಟರ್‌ಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ, ಶಂಕಿತರ ಚಿತ್ರ ಬಿಡುಗಡೆಗೊಳಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ನೆರವಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 

BREAKING: Mass Shooting in US- Atleast 22 dead & 50 injured in Lewiston, ME shootings at 3 locations - Walmart distribution center, a bar, plus third location.

FBI called in, President Biden informed.

Possible Suspect in custody. pic.twitter.com/ol7HwF7NAr

— Megh Updates 🚨™ (@MeghUpdates)

Tap to resize

Latest Videos

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. 

click me!