ಪುರಾತನ ಹಿಂದೂ ದೇವಾಲಯ ರಕ್ಷಣೆಗೆ ಕೋರ್ಟ್ ಮೊರೆ ಹೋದ ಮುಸ್ಲಿಂ ಕುಟುಂಬಗಳು

By Suvarna NewsFirst Published Sep 28, 2021, 4:33 PM IST
Highlights
  • ದೇವಸ್ಥಾನ ಉಸ್ತುವಾರಿಗಳಿಂದಲೇ ಭೂಮಿ ಕಬಳಿಕೆಗೆ ಯತ್ನ
  • ಪುರಾತನ ಹಿಂದೂ ದೇವಾಲಯ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಮುಸ್ಲಿಂ ಕುಟುಂಬಗಳು

ದೆಹಲಿ(ಸೆ.28): ನೂರ್‌ ನಗರದಲ್ಲಿರುವ ಪುರಾತನ ಹಿಂದೂ ದೇವಾಲಯ ರಕ್ಷಣೆಗಾಗಿ ಜಮಿಯಾ ನಗರದ ಮುಸ್ಲಿಂ ಕುಟುಂಬಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿವೆ. ದೇವಾಲಯದ ಉಸ್ತುವಾರಿ ಭೂಮಿಗಾಗಿ ಈಗಾಗಲೇ ಧರ್ಮಶಾಲಾದ ಒಂದು ಭಾಗವನ್ನು ಹಾನಿಗಳಿಸಿದ್ದು ಈ ಬಗ್ಗೆ ಆತಂಕಗೊಂಡ ಮುಸ್ಲಿಂ ಕುಟುಂಬಗಳು ದೇವಸ್ಥಾನ ರಕ್ಷಿಸುವಂತೆ ಕೋರ್ಟ್ ಮೆಟ್ಟಿಲೇರಿವೆ.

ಜಾಮಿಯಾ ನಗರ ವಾರ್ಡ್ ಸಂಖ್ಯೆ 206 ಸಮಿತಿಯ ಅಧ್ಯಕ್ಷ ಸೈಯದ್ ಫೌಜುಲ್ ಅಜೀಂ (ಆರ್ಶಿ) ಅವರು ಈ ಪ್ರದೇಶದ ಏಕೈಕ ದೇವಾಲಯದ ಅತಿಕ್ರಮಣ ಮತ್ತು ಧ್ವಂಸದ ಕುರಿತು ಕಳೆದ ವಾರ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ.

ಮಹಾಭಾರತ ಶೀರ್ಷಿಕೆ ಗೀತೆ ಹಾಡಿದ ಮುಸ್ಲಿಂ ವ್ಯಕ್ತಿ!

ಬಿಲ್ಡರ್‌ಗಳು ಕಟ್ಟಡವನ್ನು ನಿರ್ಮಿಸಲು ಮತ್ತು ಫ್ಲಾಟ್‌ಗಳನ್ನು ಮಾರಾಟ ಮಾಡಲು ರಾತ್ರೋರಾತ್ರಿ ಧರ್ಮಶಾಲಾದ ಒಂದು ಭಾಗವನ್ನು ನೆಲಸಮಗೊಳಿಸಲು ಕೆಡವಲಾಯಿತು ಎಂದು ಅವರು ಆರೋಪಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿನ್ಯಾಸ ಯೋಜನೆ ದೇವಾಲಯದ ಆವರಣವನ್ನು ಸ್ಪಷ್ಟವಾಗಿ ಗುರುತಿಸಿದೆ. ಧರ್ಮಶಾಲಾ ಭೂಮಿ 1970 ರಲ್ಲಿ ದೇವಸ್ಥಾನವನ್ನು ನಿರ್ಮಿಸಿದ ಮಖನ್ ಲಾಲ್ ಅವರ ಮಗ ಜೋಹ್ರಿ ಲಾಲ್ ಗೆ ಸೇರಿದ್ದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯಾಯವಾದಿ ನಿತಿನ್ ಸಲುಜಾ, ಅವರ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ನೂರ್ ನಗರವು ದಟ್ಟವಾದ ಮುಸ್ಲಿಂ ಜನಸಂಖ್ಯೆಯನ್ನು  ಹೊಂದಿದ್ದು ಕೇವಲ 40 ರಿಂದ 50 ಮುಸ್ಲಿಮೇತರ ಕುಟುಂಬಗಳನ್ನು ಹೊಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಎರಡೂ ಸಮುದಾಯಗಳು ವರ್ಷಗಳಿಂದ "ಪ್ರೀತಿ, ವಾತ್ಸಲ್ಯ ಮತ್ತು ಸಹೋದರತ್ವದಿಂದ ಬದುಕುತ್ತಿವೆ. ಆದಾಗ್ಯೂ, ಕೆಲವು ಕಿಡಿಗೇಡಿಗಳು ಸಹೋದರತ್ವವನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ನೇತೃತ್ವದ ದೆಹಲಿ ಹೈಕೋರ್ಟ್ ಪೀಠವು ಲೇಔಟ್ ಯೋಜನೆಯ ಪ್ರಕಾರ ಹೇಳಲಾದ ಸ್ಥಳದಲ್ಲಿ ದೇವಸ್ಥಾನವಿರುವುದನ್ನು ಗಮನಿಸಿದೆ ಮತ್ತು ಧರ್ಮಶಾಲಾದ ಒಂದು ಭಾಗವನ್ನು ರಾತ್ರೋರಾತ್ರಿ ಕೆಡವಲಾಯಿತು.

ನ್ಯಾಯಾಲಯವು ದೆಹಲಿ ಸರ್ಕಾರ, ಪೊಲೀಸ್ ಆಯುಕ್ತರು, ದಕ್ಷಿಣ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಮತ್ತು ಜಾಮಿಯಾ ನಗರದ ಸ್ಟೇಷನ್ ಹೌಸ್ ಆಫೀಸರ್‌ಗಳಿಗೆ ಭವಿಷ್ಯದಲ್ಲಿ ದೇವಾಲಯದ ಆವರಣದಲ್ಲಿ ಯಾವುದೇ ಕಾನೂನು ಬಾಹಿರ ಆಕ್ರಮಣ ನಡೆಯದಂತೆ ನೋಡಿಕೊಳ್ಳುವಂತೆ ಆದೇಶಿಸಿದೆ.

ಕೋರ್ಟ್ ದೆಹಲಿ ಪೊಲೀಸರು ಮತ್ತು ನಿಗಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಿದೆ. ದೇವಸ್ಥಾನದಲ್ಲಿ ಯಾವುದೇ ಅತಿಕ್ರಮಣ ನಡೆಸುವುದಿಲ್ಲ ಮತ್ತು ಅದನ್ನು ರಕ್ಷಿಸಿ ಸಂರಕ್ಷಿಸಲಾಗುವುದು ಎಂದು ಪೊಲೀಸರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

click me!