ವಿರೋಧಿಗಳ ಜೊತೆ ಸೇರಿದ ತಂದೆ: ಕಂದನ ಕರುಣೆ ಇಲ್ಲದೆ ಕೊಂದ ತಾಲಿಬಾನಿಯರು!

By Suvarna NewsFirst Published Sep 28, 2021, 11:29 AM IST
Highlights

* ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಆಗಮನ 

* ತಾಲಿಬಾನಿಯರ ಕ್ರೌರ್ಯಕ್ಕೆ ಇಲ್ಲವೇ ಕೊನೆ?

* ವಿರೋಧಿಗಳ ಜೊತೆ ಕೈಜೋಡಿಸಿದ ವ್ಯಕ್ತಿಕ ಕಂದನನ್ನು ಕೊಂದ ತಾಲಿಬಾನಿಯರು

ಕಾಬೂಲ್(ಸೆ.28): ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನಿಯರ(Taliban) ಆಗಮನ ಅಲ್ಲಿನ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಫ್ಘಾನಿಸ್ತಾನದಲ್ಲಿ ಸರ್ಕಾರ ನಡೆಸುತ್ತಿರುವ ತಾಲಿಬಾನ್ ಜನರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದೆ. ವ್ಯಕ್ತಿಯೊಬ್ಬ ತನ್ನ ವಿರೋಧಿಗಳೊಂದಿಗೆ ಕೈ ಜೋಡಿಸಿದ್ದಾನೆಂಬ ಶಂಕೆ ಮೇಲೆ ತಾಲಿಬಾನ್ ಉಗ್ರರು ಮುಗ್ಧ ಮಗುವನ್ನು ಅಮಾನುಷವಾಗಿ ಕೊಂದ ಕಾರಣ ಕೊಂದಿದ್ದಾರೆ. ಈ ಆಘಾತಕಾರಿ ಪ್ರಕರಣ ತಖರ್ ಪ್ರಾಂತ್ಯದಲ್ಲಿ ನಡೆದಿದೆ. ಪಂಜಶೀರ್ ಮತ್ತು ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಒಳಗೊಂಡ ಸ್ವತಂತ್ರ ಮಾಧ್ಯಮವಾದ ಪಂಜಶೀರ್(Panjshir) ಅಬ್ಸರ್ವರ್ ಈ ತಾಲಿಬಾನ್ ಕ್ರೌರ್ಯದ ವರದಿಯನ್ನು ಪ್ರಕಟಿಸಿದೆ. ಈ ಘಟನೆಯು ತಾಲಿಬಾನ್ ವಿರುದ್ಧ ಧ್ವನಿ ಎತ್ತಿದವರಿಗೆ ಹೇಗೆ ಶಿಕ್ಷೆಯಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಲಿಬಾನ್ ದ್ವಿಮುಖ

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿದ ನಂತರ, ತಾಲಿಬಾನ್(Taliban) ತಾನು ಈ ಹಿಂದಿನಂತೆ ಆಡಳಿತ ನಡೆಸುವುದಿಲ್ಲ ಎಂದು ಪದೇ ಪದೇ ಹೆಳುತ್ತಿದೆ. ಅಂದರೆ, ಜನರಿಗೆ ಸ್ವಾತಂತ್ರ್ಯವಿರುತ್ತದೆ, ಯಾವುದೇ ಹಿಂಸೆ ಇರುವುದಿಲ್ಲ. ಆದರೆ ಅದೆಷ್ಟೇ ಭರವಸೆ ಕೊಟ್ಟರೂ ತನ್ನ ಹಳೇ ಚಾಳಿ ಬಿಟ್ಟಿಲ್ಲ. ತಾಲಿಬಾನಿಯರು ಮತ್ತೆ ಹಿಂಸಾತ್ಮಕ ಮನಸ್ಥಿತಿಯೊಂದಿಗೆ ಮರಳಿದ್ದಾರೆ ಎಂದು ತಜ್ಞರು ನಂಬಿದ್ದಾರೆ.

ವಿಡಿಯೋವನ್ನು  ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ಪಂಜಶೀರ್ ಅಬ್ಸರ್ವರ್ 

ಮಗುವಿನ ಸಾವಿನ ಈ ವಿಡಿಯೋವನ್ನು ಪಂಜಶೀರ್ ಅಬ್ಸರ್ವರ್ ತನ್ನ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ. ಇದರಲ್ಲಿ, ಕಂದನ ಸಹೋದರ ಮತ್ತು ಸಹೋದರಿಯರು ಮಗುವಿನ ಮೃತ ದೇಹವನ್ನು ನೋಡಿ ಹೇಗೆ ಅಳುತ್ತಿದ್ದಾರೆ ಎಂಬುದನ್ನು ಕಾಣಬಹುದು.

GRAPHIC: Child executed in province by Taliban fighters after his father is suspected of being in the Resistance. pic.twitter.com/QghxcxDJco

— Panjshir Observer (@PanjshirObserv)

ಶರಿಯಾ ಕಾನೂನಿಗಾಗಿ ಯಾರನ್ನಾದರೂ ಕೊಲ್ಲುತ್ತಾರೆ

ಕಳೆದ ತಿಂಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ನಂತರ, ತಾಲಿಬಾನ್ ಶರಿಯಾ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆರಂಭಿಸಿದೆ. ಅದೆಷ್ಟೇ ದೊಡ್ಡ ಅಥವಾ ಸಣ್ಣ ತಪ್ಪಿರಲಿ, ಪ್ರತಿಯೊಂದು ಅಪರಾಧಕ್ಕೂ ಕರುಣೆ ಇಲ್ಲದೆ ಶಿಕ್ಷೆ ವಿಧಿಸಲಾಗುತ್ತದೆ. ಗಡ್ಡ ಮತ್ತು ಮೀಸೆ ಕತ್ತರಿಸದಂತೆ ಕ್ಷೌರಿಕರಿಗೆ ತಾಲಿಬಾನ್ ಎಚ್ಚರಿಕೆ ನೀಡಿದ್ದು, ಪಳಾಇಸದಿದ್ದರೆ ಶಿಕ್ಷೆಯಾಗುತ್ತದೆ ಎಂದು ತಾಕೀತು ಮಾಡಿದೆ. ತಾಲಿಬಾನ್ ಕ್ಷೌರಿಕರು ಕ್ಷೌರ ಅಥವಾ ಗಡ್ಡ ಕತ್ತರಿಸುವುದನ್ನು ನಿಷೇಧಿಸಿದೆ, ಹಾಗೆ ಮಾಡುವುದು ಇಸ್ಲಾಮಿಕ್ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ. ಕಾಬೂಲ್‌ನಿಂದ ಹೆಲ್ಮಂಡ್ ಪ್ರಾಂತ್ಯದವರೆಗೆ ದೇಶದ ಎಲ್ಲ ರಾಜ್ಯಗಳ ಕ್ಷೌರಿಕರಿಗೆ ಪೋಸ್ಟ್ ಮಾಡಿದ ನೋಟಿಸ್‌ನಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ತಾಲಿಬಾನ್ ಕ್ರೂರವಾಗಿ ಶಿಕ್ಷಿಸುತ್ತಿದೆ. ಅಪಹರಣ ಪ್ರಕರಣದ ಆರೋಪಿಗಳನ್ನು ತಾಲಿಬಾನ್ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. 

click me!