ಕೊರೋನಾ ವಾರಿಯರ್ಸ್‌ಗಳಿಗೆ ಸಿಂಗಾಪುರ ಎಂಟಿಆರ್‌ ಊಟ!

By Kannadaprabha NewsFirst Published May 13, 2020, 7:31 AM IST
Highlights

ಕೊರೋನಾ ವಾರಿಯ​ರ್‍ಸ್ಗಳಿಗೆ ಸಿಂಗಾಪುರ ಎಂಟಿಆರ್‌ ಊಟ| ಸ್ಪತ್ರೆಗಳಿಗೆ ಬಿಸಿಬಿಸಿ ಕಾಫಿ, ವಡಾ ಸರಬರಾಜು|  ಕನ್ನಡಿಗ ರಾಘವೇಂದ್ರ ಶಾಸ್ತ್ರಿ ನೇತೃತ್ವ

ಸಿಂಗಾಪುರಮೇ.13): ಕೊರೋನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಕೊರೋನಾ ವಾರಿಯ​ರ್‍ಸ್ಗಳಿಗೆ ಸಿಂಗಾಪುರದಲ್ಲಿರುವ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ ಮಾವಳ್ಳಿ ಟಿಫಿನ್‌ ರೂಂ (ಎಂಟಿಆರ್‌) ಬಿಸಿ ಬಿಸಿ ತಿನಿಸು, ಪಾನೀಯ ಸರಬರಾಜು ಮಾಡುವ ಮೂಲಕ ಗಮನ ಸೆಳೆದಿದೆ. ವಡಾ, ಕಾಫಿ, ಮಸಾಲ ಚಹಾ ಮುಂತಾದವನ್ನು ಈ ರೆಸ್ಟೋರೆಂಟ್‌ ಪೂರೈಕೆ ಮಾಡುತ್ತಿದೆ.

ರೆಸ್ಟೋರೆಂಟ್‌ನ ಕಾರ್ಯನಿರ್ವಹಣಾ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಹಾಗೂ ಅವರ ಸಿಬ್ಬಂದಿ ಹಣ್ಣುಗಳನ್ನು ಕೂಡ ಪ್ಯಾಕ್‌ ಮಾಡಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದಾರೆ.

ಎಂಟಿಆರ್‌ನಿಂದ ಪ್ಯಾಕೇಜ್ಡ್‌ ಗೊಜ್ಜು ಮಸಾಲ ಮಾರುಕಟ್ಟೆಗೆ

‘ಬಿಸ್ಕೆಟ್‌, ಸಿಹಿ ತಿನಿಸುಗಳು ಆಸ್ಪತ್ರೆಯಲ್ಲಿರುವ ಸಿಬ್ಬಂದಿಗೆ ಸುಲಭವಾಗಿ ಸಿಗುತ್ತವೆ. ಆದರೆ ಕಾಫಿ ಹಾಗೂ ಬಿಸಿ ತಿನಿಸು ಸಿಗುವುದಿಲ್ಲ. ಹೀಗಾಗಿ ಅವನ್ನು ಸರಬರಾಜು ಮಾಡುತ್ತಿದ್ದೇವೆ’ ಎಂದು ಬೆಂಗಳೂರು ಮೂಲದವರಾಗಿರುವ ಶಾಸ್ತ್ರಿ ತಿಳಿಸಿದ್ದಾರೆ. ಅವರು ಕಳೆದ ಐದು ವರ್ಷಗಳಿಂದ ಸಿಂಗಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಂಟಿಆರ್‌ ಎಂದೇ ಹೆಸರುವಾಸಿಯಾಗಿರುವ ಮಾವಳ್ಳಿ ಟಿಫಿನ್‌ ರೂಂ ಬೆಂಗಳೂರು ಮೂಲದ ರೆಸ್ಟೋರೆಂಟ್‌ ಆಗಿದೆ.

"

click me!