ವಿಶ್ವದಲ್ಲೇ ಮೊದಲ ಕೊರೋನಾ ವೈರಸ್ ಪ್ರಕರಣ ದಾಖಲಾದ ಚೀನಾದ ವುಹಾನ್| 35 ದಿನಗಳ ಬಳಿಕ ವುಹಾನ್‌ನಲ್ಲಿ ಮತ್ತೆ ಸೋಂಕು!| ಕೊರೋನಾ ನಿಯಂತ್ರಣಕ್ಕೆ ನಿರ್ಲಕ್ಷ್ಯ ತೋರಿದ ಆರೋಪ ಹೊರಿಸಿ ಒಬ್ಬ ಅಧಿಕಾರಿಯನ್ನು ಸರ್ಕಾರ ವಜಾ
ಬೀಜಿಂಗ್(ಮೇ.12): ವಿಶ್ವದಲ್ಲೇ ಮೊದಲ ಕೊರೋನಾ ವೈರಸ್ ಪ್ರಕರಣ ದಾಖಲಾದ ಚೀನಾದ ವುಹಾನ್‌ನಲ್ಲಿ 30 ದಿನಗಳ ಬಳಿಕ ಮತ್ತೆ ವೈರಾಣು ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದರಿಂದ ಹಾಗೂ ಒಂದೂ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ವುಹಾನ್‌ನಲ್ಲಿ ಏ.8ರಂದು ಲಾಕ್‌ಡೌನ್ ತೆರವುಗೊಳಿಸಲಾಗಿತ್ತು. ಸತತ 35 ದಿನಗಳ ಕಾಲ ಒಂದೂ ಹೊಸ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು.
undefined
ಕೊರೋನಾ ಜನ್ಮ ಸ್ಥಳ ವುಹಾನ್ ಈಗ ಸೋಂಕಿತರಿಂದ ಮುಕ್ತ!
ಆದರೆ, ಇದೀಗ ಶನಿವಾರ ಹಾಗೂ ಭಾನುವಾರ ಹೊಸದಾಗಿ 6 ಕೊರೋನಾ ವೈರಸ್ ಪ್ರಕರಣಗಳು ಇಲ್ಲಿ ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ನಿರ್ಲಕ್ಷ್ಯ ತೋರಿದ ಆರೋಪ ಹೊರಿಸಿ ಒಬ್ಬ ಅಧಿಕಾರಿಯನ್ನು ಸರ್ಕಾರ ವಜಾ ಮಾಡಿದೆ.
ಚೀನಾದ ಹುಬೈ ಪ್ರಾಂತ್ಯದಲ್ಲಿರುವ ವುಹಾನ್ ನಗರದ ಸನ್‌ಮಿನ್ ಬಡಾವಣೆಯಲ್ಲಿ ಶನಿವಾರ ಒಬ್ಬನಿಗೆ ಹಾಗೂ ಭಾನುವಾರ ಐವರಿಗೆ ಕೊರೋನಾ ಸೋಂಕು ತಾಗಿದೆ. ಈ ಎಲ್ಲರಲ್ಲೂ ಸೋಂಕು ಲಕ್ಷಣಗಳು ಕಂಡುಬರದೇ ಹೋದರೂ, ಪರೀಕ್ಷೆ ವೇಳೆ ಕೊರೋನಾ ಇರುವುದು ದೃಢಪಟ್ಟಿದೆ. ಸೋಂಕು ಲಕ್ಷಣ ಇಲ್ಲದವರಿಗೆ ಜ್ವರ, ಕೆಮ್ಮು, ನೆಗಡಿ ಬಂದಿರುವುದಿಲ್ಲ. ಆದರೆ ಉಳಿದವರಿಗೆ ಇವರಿಂದ ಬೇಗ ಸೋಂಕು ಹರಡುತ್ತದೆ.
ವುಹಾನ್‌ನಿಂದ ಜನ್ಮ ತಾಳಿದ ಕೊರೋನಾ; ಚೀನಾ ಕುತಂತ್ರಕ್ಕೆ ಸಾಕ್ಷಿ ಇದೆ ಎಂದ ಟ್ರಂಪ್!
ಭಾರಿ ಸಂಖ್ಯೆಯ ಸಾವು ನೋವು ಕಂಡ ವುಹಾನ್‌ನಲ್ಲಿ ಪರಿಸ್ಥಿತಿ ಸುಧಾರಿಸಿದ ಕಾರಣ ಏಪ್ರಿಲ್ 8ರಂದು ಲಾಕ್‌ಡೌನ್ ತೆರವು ಮಾಡಲಾಗಿತ್ತು. 1.1 ಕೋಟಿ ಜನರು ಇಲ್ಲಿ ವಾಸಿಸುತ್ತಾರೆ.